ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 20: ಕೆ.ಸಿ ವ್ಯಾಲಿ ನೀರು ಎಸ್.ಅಗ್ರಹಾರ ಕೆರೆಗೆ ಬರುತ್ತಿರುವುದನ್ನು ವೀಕ್ಷಣೆ ಮಾಡಲು ಬಂದಿದ್ದ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ರೈತ ಮಹಿಳೆಗೆ ಅವಾಜ್ ಹಾಕಿರುವ ಸಂಗತಿ ನಡೆದಿದೆ.

ಇಂದು ಕೋಲಾರದಲ್ಲಿ ಕೆ.ಸಿ.ವ್ಯಾಲಿ ವೀಕ್ಷಣೆಗೆ ಬಂದಿದ್ದ ಸಚಿವ ಮಾಧುಸ್ವಾಮಿ ಅವರ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿ ಅವರು ಕೆರೆ ಒತ್ತುವರಿ ತೆರವು ಕುರಿತು ಕೆಲವು ಪ್ರಶ್ನೆ ಇಟ್ಟಿದ್ದಾರೆ. ಕೆರೆ ಒತ್ತುವರಿ ಕುರಿತು ಮಾತನಾಡಿದ್ದಾರೆ. ಕೆರೆಕಟ್ಟೆ ಒಡೆಯದಂತೆ ಸಚಿವರಿಗೆ ಮನವಿ ಪತ್ರ ಕೊಡಲು ಮುಂದಾಗಿದ್ದಾರೆ ಈ ವೇಳೆ ಸಚಿವ ಮಾಧುಸ್ವಾಮಿ ಏಕಾಏಕಿ ಅವರ ಮೇಲೆ ಸಿಟ್ಟಾಗಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಗೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಬೆದರಿಕೆ ಮಹಿಳಾ ಪೊಲೀಸ್ ಅಧಿಕಾರಿಗೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಬೆದರಿಕೆ

Minister JC Madhuswamy Anger Over Women Farmer In Kolar

"ನೀನು ರಿಕ್ವೆಸ್ಟ್ ಮಾಡಿಕೋ, ಕಮಾಂಡ್ ಮಾಡಬೇಡ" ಎಂದು ಗದರಿದ್ದಾರೆ. "ಒತ್ತುವರಿ ತೆರವು ಬಗ್ಗೆ ನನಗೇಕೆ ಕೇಳ್ತಿಯ? ನಾನು ಬೇರೆಯವರ ತರ ಅಲ್ಲ, ನಾನು ಭಾರಿ ಕೆಟ್ಟ ಮನುಷ್ಯ ಇದ್ದೀನಿ, ಬಾಯಿ ಮುಚ್ಚು ರಾಸ್ಕಲ್" ಎಂದು ಸಿಡಿಮಿಡಿಗೊಂಡಿದ್ದಾರೆ. ಈ ವೇಳೆ ರೈತ ಸಂಘದ ಮಹಿಳೆಯರು ಹಾಗೂ ಸಚಿವರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಪೊಲೀಸರು ಮಹಿಳೆಯರನ್ನು ಹೊರಗೆ ಕಳಿಸಿದ್ದಾರೆ.

English summary
Minister JC Madhuswamy has loose his temper and anger over women farmer who questioned encroachment of lake in kolar district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X