ಕೋಲಾರದ ಬಳಿ ಕೆಎಸ್‌ಆರ್‌ಟಿಸಿ-ಆಟೋ ನಡುವೆ ಭೀಕರ ಅಪಘಾತ
KSRTC Bus Accident: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಸಾರಿಗೆ ಬಸ್ ಗುದ್ದಿದ ರಭಸಕ್ಕೆ ಆಟೋ ಪಲ್ಟಿಯಾಗಿದ್ದು, ಇಬ್ಬರು ಗಾಯಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವೇಗವಾಗಿ ಬಂದಂತಹ ಕೆಎಸ್‌ಆರ್‌ಟಿಸಿ ಬಸ್ ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿ ಹೊಡೆದ ಘಟನೆ ಕೋಲಾರದ ಕೆಜಿಎಫ್ ತಾಲೂಕಿನ ಮಲೆಯಾಳಿ ಲೈನ್ ಬಳಿ ನಡೆದಿದೆ. ಬಸ್ ಗುದ್ದಿದ ರಭಸಕ್ಕೆ ಆಟೋ ಪಲ್ಟಿ ಆಗಿದ್ದು, ಆಟೋ ಚಾಲಕ ಹಾಗೂ ಆಟೋದಲ್ಲಿದ್ದ ಓರ್ವ ಪ್ರಯಾಣಿಕನಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ಈ ಭೀಕರ ಅಪಘಾತದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಬೆಚ್ಚಿ ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಇದೆ.

ಅಪಘಾತ ಸಂತ್ರಸ್ತರಿಗೆ ನೀಡುತ್ತಿದ್ದ ಚಿಕಿತ್ಸೆ ವೆಚ್ಚ ಏರಿಕೆ: ಇನ್ನು ಇದೀಗ ರಸ್ತೆ ಅಪಘಾತ ಸಂತ್ರಸ್ತರಿಗೆ ನೀಡುತ್ತಿದ್ದ ನಗದು ರಹಿತ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರ್ಕಾರ ಇದೀಗ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂಪಾವರೆಗೂ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತಿತ್ತು. ಅಪಘಾತ ಸಂಭವಿಸಿದ ಒಂದು ವಾರದವರೆಗೂ ಈ ಸೌಲಭ್ಯ ಇತ್ತು. ಇದೀಗ ರಾಜ್ಯ ಸರ್ಕಾರ ಅಪಘಾತ ಆಗಿ ಬಹುಅಂಗಾಂಗಗಳ ವೈಫಲ್ಯ ಆದರೆ, ಚಿಕಿತ್ಸೆಗಾಗಿ 1 ಲಕ್ಷ ರೂಪಾಯಿ ಟಾಪ್ ಅಪ್ ನೀಡುವುದಾಗಿ ಘೋಷಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಪಘಾತ ಸಂತ್ರಸ್ತ ಯೋಜನೆ ಅಡಿ ಸಂತ್ರಸ್ತರಿಗೆ 2.5 ಲಕ್ಷ ರೂಪಾಯಿವರೆಗೂ ಚಿಕಿತ್ಸೆ ನೆರವು ಸಿಗಲಿದೆ. ರಸ್ತೆ ಅಪಘಾತದಿಂದ ಆಗುವ ಸಾವುಗಳನ್ನ ನಿಯಂತ್ರಣ ಮಾಡುವ ಚಿಕಿತ್ಸಾ ವೆಚ್ಚದ ಅನುದಾನ ಹೆಚ್ಚಳ ಮಾಡಲಾಗಿದೆ.
ರಾಜ್ಯದಲ್ಲಿ ಪ್ರತಿ ವರ್ಷಕ್ಕೆ ಸುಮಾರು 40,000 ರಸ್ತೆ ಅಪಘಾಗಳು ದಾಖಲಾಗುತ್ತುವೆ. ಪ್ರತಿ ವರ್ಷ ಸುಮಾರು 11,000 ಜನ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ಗಂಟೆಗೆ 4 ರಿಂದ 5 ರಸ್ತೆ ಅಪಘಾತಗಳು ದಾಖಲಾಗುತ್ತಿವೆ ಎಂದು ತಿಳಿದುಬಂದಿದೆ. ಇದೀಗ ರಸ್ತೆ ಅಪಘಾತ ಸಂಸ್ತ್ರಸ್ತರಿಗೆ ನೀಡಲಾಗುತ್ತಿದ್ದ ಚಿಕಿತ್ಸೆ ವೆಚ್ಚವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ.












Click it and Unblock the Notifications