ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ: 2 ಕೃಷ್ಣ ಮೃಗಗಳನ್ನು ಕೊಂದು ಸೆರೆ ಸಿಕ್ಕ ಮೂವರು

By Ananthanag
|
Google Oneindia Kannada News

ಕೋಲಾರ: ಜನವರಿ 23: ಕೆಜಿಎಫ್ ನ ಬಡಮಾಕನಹಳ್ಳಿ ಕಾಡಿನಲ್ಲಿ 2 ಕೃಷ್ಣಮೃಗಗಳನ್ನು ಕೊಂದು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮೂವರನ್ನು ಅರಣ್ಯ ಇಲಾಖೆ ಬಂಧಿಸಿದೆ.

ಬೆಂಗಳೂರಿನ ಮಹಮ್ಮದ್ ಜಬ್ರಾನ್, ಆತನ ಸಹಚರ ಸೆಲ್ವಂ ಮತ್ತು ಮಂಜುನಾಥ್ ಬಂಧಿತರು. ಭಾನುವಾರ ಬೆಳಗ್ಗೆ ಅಕ್ರಮವಾಗಿ ಕಾಡು ಪ್ರವೇಶಿಸಿದ ಇವರು ಸುಮಾರು 4-5 ವರ್ಷ ವಯಸ್ಸಿನ ಒಂದು ಗಂಡು ಮತ್ತು ಹೆಣ್ಣು ಕೃಷ್ಣ ಮೃಗವನ್ನು ಗುಂಡಿಕ್ಕಿ ಸಾಯಿಸಿದ್ದರು. ಅವುಗಳನ್ನು ಬೆಂಗಳೂರಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಜಬ್ರಾನ್ ಕೃತ್ಯಕ್ಕೆ ಬಳಸಿದ ಪಾಯಿಂಟ್‌ 202 ರೈಫಲ್‌ಅನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.[ಅಕ್ರಮ ಶಸ್ತ್ರಾಸ್ತ್ರ ಕೇಸ್ : ನಟ ಸಲ್ಮಾನ್ ಖಾನ್ ನಿರ್ದೋಷಿ]

Krishna beasts killing three arrested in KGF,kolar, 202 point gun had been seized.

ಇನ್ನು ಜಬ್ರಾನ್ ಕಾಡಿನ ಸಮೀಪವೇ ತೋಟದ ಮನೆಯನ್ನು ಹೊಂದಿದ್ದು, ಬೆಂಗಳೂರಿನಿಂದ ಆಗಾಗ ಇಲ್ಲಿಗೆ ಬರುತ್ತಿದ್ದು ಕೃಷ್ಣ ಮೃಗಗಳ ಬಗ್ಗೆ ಮಾಹಿತಿ ಕಲೆಹಾಕಿದ್ದನು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.[ಕೃಷ್ಣಮೃಗ ಆತ್ಮಹತ್ಯೆ ಮಾಡ್ಕೊಂಡಿದ್ದು, ಅದ್ಕೆ ಸಲ್ಲೂ ಬಚಾವ್!]

ಆರೋಪಿಗಳ ವಿರುದ್ಧ ಕೆಜಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಮೂವರು ಆರೋಪಿಗಳು ಚಿಕ್ಕಮಗಳೂರು ಇತ್ಯಾದಿಗಳಲ್ಲಿ ಪ್ರಾಣಿಗಳ ಬೇಟೆಯಾಡುವ ತಂಡದೊಂದಿಗೆ ನಂಟಿದೆಯೇ ಎಂಬ ಶಂಕೆ ಅರಣ್ಯ ಇಲಾಖೆಯವರದ್ದಾಗಿದೆ.

English summary
Killed Krishna beasts and the shipment of the arrest of three people by forest departmet officer in KGF, Kolar. They have 202 point gun had been seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X