ಪ್ರಸಿದ್ಧ ಚಿಕ್ಕತಿರುಪತಿ ದೇವಾಲಯ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?
ಕೋಲಾರ, ಜನವರಿ 30: ಕೋಲಾರ ಜಿಲ್ಲೆಯ ಪ್ರಸಿದ್ಧ ಚಿಕ್ಕ ತಿರುಪತಿ ದೇವಾಲಯದಲ್ಲಿ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದೆ. ಮುಜರಾಯಿ ಇಲಾಖೆಯಿಂದ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದೆ.
ಬೆಳ್ಳಿ, ಬಂಗಾರ ಹಾಗೂ ನಗದು ಜೊತೆಗೆ ವಿದೇಶಿ ಕರೆನ್ಸಿಗಳೂ ಪತ್ತೆಯಾಗಿವೆ. ಬಂಗಾರ 64 ಗ್ರಾಂ, ಬೆಳ್ಳಿ 327 ಗ್ರಾಂ, 63,97,964 ಲಕ್ಷ ನಗದು ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿರುವ ಚಿಕ್ಕತಿರುಪತಿ ದೇವಸ್ಥಾನದಲ್ಲಿ ಕಳೆದ 3 ತಿಂಗಳಲ್ಲಿ ಇಷ್ಟು ಹಣ ಹಾಗೂ ಒಡವೆಗಳು ಸಂಗ್ರಹವಾಗಿವೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿಕ್ಕತಿರುಪತಿ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಚಿಕ್ಕತಿರುಪತಿ ಗ್ರಾಮದ ಇಂಡಿಯನ್ ಒವರ್ಸಿಸ್ ಬ್ಯಾಂಕ್ ಸಿಬ್ಬಂದಿಯ ಸಹಾಯದೊಂದಿಗೆ ಎಣಿಕೆ ಕಾರ್ಯ ಮಾಡಲಾಯಿತು. ದೇವಸ್ಥಾನ ಆಡಳಿತಾಧಿಕಾರಿ ತಹಶೀಲ್ದಾರ್ ನಾಗವೇಣಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಟೇಶ್ ಗೌಡ ಹಾಜರಿದ್ದರು.












Click it and Unblock the Notifications