ಕೋಲಾರದಲ್ಲಿ ಕಾರು-ಬೈಕ್ ಡಿಕ್ಕಿ: ಮೂವರ ದುರ್ಮರಣ

Posted By:
Subscribe to Oneindia Kannada

ಕೋಲಾರ, ಡಿಸೆಂಬರ್ 6: ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುದುವಾಡಿ ಬಳಿ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಶುಕ್ರವಾರ ದುರ್ಮರಣಕ್ಕೀಡಾಗಿದ್ದಾರೆ.

ಕೋಲಾರದ ನಿವಾಸಿ ಹಾಜೀರ್(25), ಸಲೀಂ (27), ಮತ್ತು ಆಂಧ್ರದ ವಿಜಯವಾಡ ಮೂಲದ ಪವನ್(29) ಮೃತ ದುರ್ದೈವಿಗಳು.

ದ್ವಿಚಕ್ರ ವಾಹನದಲ್ಲಿ ಮೂವರು ಕೋಲಾರ ಸಮೀಪದ ಮುದುವಾಡಿ ಬಳಿ ಪ್ರಯಾಣ ಮಾಡುತ್ತಿದ್ದಾಗ ಎದುರಿಗೆ ಬಂದ ಕಾರಿಗೆ ಡಿಕ್ಕಿ ಸಂಭವಿಸಿದೆ. ದ್ವಿಚಕ್ರವಾಹದಲ್ಲಿದ್ದ ಮೂರೂ ಮಂದಿ ಮೃತರಾಗಿದ್ದು, ಕಾರಿನಲ್ಲಿದ್ದವರಲ್ಲಿ ಒಬ್ಬರಿಗೆ ಗಂಬೀರ ಗಾಯವಾಗಿದೆ.[ಬೈಕಿಗೆ ಕಾರು ಡಿಕ್ಕಿ, ಇಬ್ಬರ ಸಾವು, ಸುಟ್ಟು ಭಸ್ಮವಾದ ಕಾರು]

Kolar near car-bike collision three died

ಕಾರಿನಲ್ಲಿದ್ದವರನ್ನು ಸಮೀಪದ ಸರ್ಕಾರಿ ಆಸ್ಪತ್ರಗೆ ಚಿಕಿತ್ಸಕೆ ಕರೆದೊಯ್ಯಲಾಗಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ರಾಮನಗರ : ಸ್ವಾಮೀಜಿ ಕಾರು ಡಿಕ್ಕಿ, ಪಾದಚಾರಿ ಸಾವು]

ದ್ವಿಚಕ್ರ ವಾಹನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಪ್ರಯಾಣಿಸಬಾರದು ಎಂದು ಸರಕಾರ ಸಂಚಾರ ನಿಯಮವನ್ನು ಮಾಡಿದ್ದರೂ ಉಲ್ಲಂಘಿಸಿ ಪ್ರಯಾಣಿಸಿ ಅನೇಕ ಮಂದಿ ಪ್ರಾಣಾಪಾಯಕ್ಕೀಡಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kolar near car-bike collision three died. Traveling by bike 3 person were died.
Please Wait while comments are loading...