ಕೋಲಾರ ಜನತೆಗೆ ಖುಷಿ ತರಬೇಕಿದ್ದ ಕೆ.ಸಿ.ವ್ಯಾಲಿ ವಿಷ ಉಣಿಸುತ್ತಿದೆ!

ಕೋಲಾರ, ಆಗಸ್ಟ್‌ 04: ತಿಂಗಳಿನ ಹಿಂದೆ ಕೆ.ಸಿ.ವ್ಯಾಲಿ ಉದ್ಘಾಟಿಸಿದ್ದ ಶ್ರೀನಿವಾಸಪುರ ಶಾಸಕ, ವಿಧಾನಸಭಾ ಸ್ಪೀಕರ್ ರಮೇಶ್‌ ಕುಮಾರ್ 'ಕೋಲಾರ ಜನತೆಯ ನೀರಿನ ದಾಹ ನೀಗಿಸಿದ ನೆಮ್ಮದಿ ನನಗಿದೆ' ಎಂದು ಭಾವುಕರಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ್ದರು.

ಆದರೆ ಹೀಗೆ ರಮೇಶ್‌ ಕುಮಾರ್ ಅವರು ಅತ್ತ ಒಂದೇ ವಾರಕ್ಕೆ ಕೆ.ಸಿ.ವ್ಯಾಲಿ (ಕೋಲಾರ-ಚಿಕ್ಕಬಳ್ಳಾಪುರ ನೀರಾವರಿ ಯೋಜನೆ) ನೀರಿನಲ್ಲಿ ನೊರೆ ಎದ್ದು ವ್ಯಾಲಿಯ ನೀರು ಕುಡಿಯಲು ಇರಲಿ, ಕೃಷಿಗೆ ಬಳಸಲೂ ಯೋಗ್ಯವಲ್ಲ ಎಂದು ಜನರಿಗೆ ಗೊತ್ತಾಯಿತು. ಅಂದು ಮಾಧ್ಯಮದ ಮುಂದೆ ಸಾಧನೆ ಮಾಡಿದ್ದೆನೆಂದು ಅತ್ತಿದ್ದ ರಮೇಶ್‌ ಕುಮಾರ್ ಆ ನಂತರ ಜನರ ಮನವಿಗಳನ್ನು ಅಧಿಕಾರಿಗಳ ಮೇಲೆ ತಳ್ಳಿ ಸುಮ್ಮನಾದರು.

ಬೆಂಗಳೂರಿನ ಕೆರೆಗಳ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ತುಂಬಿಸಿ ಇಲ್ಲಿನ ಕೃಷಿಗೆ ಕಾಯಕಲ್ಪ ಕಲ್ಪಿಸುತ್ತೇನೆ ಎಂದು ಸಾರ್ವಜನಿಕರ 1400 ಕೋಟಿ ಖರ್ಚು ಮಾಡಿ ಕೆ.ಸಿ.ವ್ಯಾಲಿ ಗೆ ಹರಿಸಿರುವ ನೀರು ಮುಟ್ಟಲು ಸಹ ಭಯವಾಗುವಷ್ಟು ವಿಷ ತುಂಬಿಕೊಂಡಿದೆ.

KC Valley water so much polluted that even people fear to touch it

ಮೊದಲಿಗೆ ಅದು ಕುಡಿಯಲು ಅಲ್ಲ ಕೃಷಿಗೆ ಮಾತ್ರ ಎಂದಿದ್ದ ಸರ್ಕಾರ ನಂತರ ಹೈಕೋರ್ಟ್ ಛೀಮಾರಿ ಹಾಕಿ ಶುದ್ಧತಾ ಪ್ರಮಾಣಾ ಪತ್ರ ಕೇಳಿದಾಕ್ಷಣ ಇದು ಕೃಷಿಗೂ ಅಲ್ಲ ಕೇವಲ ಅಂತರ್ಜಲ ಅಭಿರುದ್ದಿಗೆ ಎಂದು ಹೇಳಿ ನುಣಚಿಕೊಂಡಿತು.
ಈಗ ಆ ಅಂತರ್ಜಲವು ವಿಷವಾಗಿದೆ ಕುಡಿಯಬಾರದು ಹಾಗು RO ಫಿಲ್ಟರ್ ಮಾಡಿದ ನೀರನ್ನು ಮಾತ್ರ ಕುಡಿಯಿರೆಂದು ನರಸಾಪುರ ಗ್ರಾಮಪಂಚಾಯಿತಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ!

ಈಗಲಾದರೂ ಈ ಮಾರಣಾಂತಿಕ KC & HN ವ್ಯಾಲಿಗಳ ಯೋಜನೆಗಳನ್ನು ತಮ್ಮ ನಾಯಕರ ಮುಲಾಜಿನಲ್ಲಿ ಬೆಂಬಲಿಸುವ ಅಸಹಾಯಕ ಜನ ಬದಲಾಗುವರೇ?. ಬದಲಾಗಿ ಶುದ್ದತೆಗಾಗಿ ದ್ವನಿ ಎತ್ತುವರೆ?! ಇಲ್ಲವಾದಲ್ಲಿ ಇಂದು ನರಸಾಪುರ ಮುಂದೆ ಅವಳಿ ಜಿಲ್ಲೆಗಳ ಪ್ರತಿಯೊಂದು ಗ್ರಾಮ ಪಂಚಾಯಿತಿಯು ಇಂತಹ ಪ್ರಕಟಣೆಯನ್ನು ನೀಡಬೇಕಾಗುತ್ತದೆ! ಎಂಬುದು ಇಲ್ಲಿನ ಜನರ ಎಚ್ಚರಿಕೆ.

KC Valley water so much polluted that even people fear to touch it

ಯೋಜನೆಯನ್ನು ಆರಂಭಿಸಿದಾಗಲೇ ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು, ಚಿಂತಕರು ಈ ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಒಂದು ದಿನ ಬಂದ್ ಸಹ ಮಾಡಲಾಗಿತ್ತು. ಆದರೆ ಆಗ ರೈತರ ಮನ ವೊಲಿಸಿದ ನಾಯಕರು ಈಗ ನೀರು ವಿಷವಾಗಿದೆ ಎಂದು ಮನವಿ ಮಾಡಲು ಹೋದಾಗ ಮಾತ್ರ ಕೈಗೆ ಸಿಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+