ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಫೋನ್ ಕಂಪನಿ ಗಲಭೆ: ಆರೋಪಿತರಿಗೆ ಕ್ರೂರ ಶಿಕ್ಷೆ ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಕೋಲಾರ ಸಮೀಪ ನರಸಾಪುರ ಬಳಿ ಐಫೋನ್ ತಯಾರಿಕಾ ಘಟಕಕ್ಕೆ ಬೆಂಕಿ ಇಟ್ಟು ನಾಶ ಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿತ ಉದ್ಯೋಗಿಗಳ ಸರಣಿ ಬಂಧನ ಮುಂದುವರೆದಿದೆ. ಬಂಧಿತ ಉದ್ಯೋಗಿಗಳಿಗೆ ಪೊಲೀಸರು ಚಿತ್ರ ಹಿಂಸೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸರು ಚಿತ್ರ ಹಿಂಸೆ ಕೊಟ್ಟಿದ್ದಾರೆ ಎನ್ನಲಾದ ಕೆಲ ವಿಡಿಯೋಗಳು ಕೋಲಾರ ಜಿಲ್ಲೆಯಾದ್ಯಂತ ವೈರಲ್ ಆಗುತ್ತಿವೆ. ಕಂಪನಿಗೆ ಕಲ್ಲು ಒಡೆಯುವ ದೃಶ್ಯಗಳಿಗೆ, ಉದ್ಯೋಗಿಗಳನ್ನು ಬಂಧಿಸಿ ಎಳೆದಾಡುತ್ತಿರುವ ದೃಶ್ಯಗಳನ್ನು ಒಗ್ಗೂಡಿಸಿ ವಾಟ್ಸಪ್ ಗಳಲ್ಲಿ ಹರಿದು ಬಿಡಲಾಗಿದೆ. ಕಲ್ಲು ತೂರಿದವರಿಗೆ ಇಂತಹ ಶಿಕ್ಷೆ ನೀಡಲಾಗುತ್ತಿದೆ ಎಂಬ ಒಕ್ಕಣೆ ಹಾಕಿ ವಿಡಿಯೋಗಳನ್ನು ರವಾನಿಸಲಾಗುತ್ತಿದೆ.

ವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆ; 156 ಮಂದಿ ಬಂಧನವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆ; 156 ಮಂದಿ ಬಂಧನ

ಕೋಲಾರದ ನರಸಾಪುರದ ಕೈಗಾರಿಕಾ ಪ್ರದೇಶ

ಕೋಲಾರದ ನರಸಾಪುರದ ಕೈಗಾರಿಕಾ ಪ್ರದೇಶ

ಕೋಲಾರದ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿದ್ದ ಐಫೋನ್ ಕಾರ್ಖಾನೆಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ವೇತನ ಸರಿಯಾಗಿ ಆಗಿರಲಿಲ್ಲ. ಇದರಿಂದ ರೊಚ್ಚಿಗೆದ್ದಿದ್ದ ಉದ್ಯೋಗಿಗಳು ಕೇವಲ ಹದಿನೈದು ನಿಮಿಷದಲ್ಲಿ ಸುಮಾರು 48 ಕೋಟಿ ರೂಪಾಯಿ ಮೌಲ್ಯದ ಕಾರ್ಖಾನೆಯನ್ನು ಧ್ವಂಸಗೊಳಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯಾದ್ಯಂತ ಎಲ್ಲಾ ಠಾಣೆಯ ಪೊಲೀಸರು ಬಂಧನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸುಮಾರು 156 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಮೂನ್ನೂರಕ್ಕು ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರೇ ಹಳ್ಳಿಗಳಿಗೆ ಹೋಗಿ, ಒಂದು ಸಹಿ ಮಾಡಿಸಿಕೊಂಡು ವಾಫಸು ಬಿಟ್ಟು ಕಳಿಸುತ್ತೇವೆ ಎಂದೇಳಿ ಕರೆದುಕೊಂಡು ಹೋಗುತ್ತಿದ್ದಾರೆ. ಹೋದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ವಿಚರಣೆ ನಡೆಸಲಾಗುತ್ತಿದೆ.

ಲಾಗಿನ್ ವಿವರ ಪಡೆದು ತನಿಖೆ:

ಲಾಗಿನ್ ವಿವರ ಪಡೆದು ತನಿಖೆ:

ಇನ್ನು ಘಟನೆ ನಡೆದ ದಿನ ರಾತ್ರಿ ಪಾಳಿ ಕೆಲಸ ಮುಗಿಸಿದ್ದ ಉದ್ಯೋಗಿಗಳು ಹಾಗೂ ಬೆಳಗಿನ ಪಾಳಿಗೆ ಲಾಗಿನ್ ಮಾಡಿದ್ದ ಉದ್ಯೋಗಿಗಳ ವಿವರಗಳನ್ನು ಪಡೆದು ಕೋಲಾರ ಜಿಲ್ಲೆಯ ಅಷ್ಟೂ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿತರನ್ನು ಬಂಧಿಸುತ್ತಿದ್ದಾರೆ. ಕೆಲಸಕ್ಕೆ ಹಾಜರಾಗಿದ್ದ ಪ್ರತಿಯೊಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಗಳಲ್ಲಿ ಸಿಕ್ಕಿದ್ದಲ್ಲಿ ಬಂಧನ ಪ್ರತಿಕ್ರಿಯೆ ಮುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ. ಉಳಿದಂತೆ ಲಾಗಿನ್ ಆಗದವರನ್ನಷ್ಟೇ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗುತ್ತಿದೆ.

ಕರೋನಾ ಹೊಡೆತ:

ಕರೋನಾ ಹೊಡೆತ:

ಐಫೋನ್ ಉಪಕರಣ ತಯಾರಿಕೆ ವೆಸ್ಟ್ರಾನ್ ಕಂಪನಿಗೆಯ ಯಾವುದೇ ಶೈಕ್ಷಣಿಕ ಅರ್ಹತೆ ಮೇಲೆಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರಲಿಲ್ಲ. ಬದಲಿಗೆ ನಾಲ್ಕು ಕಂಪನಿಗಳು ಉದ್ಯೋಗಿಗಳ ನೇಮಕ ಹೊರ ಗುತ್ತಿಗೆ ಪಡೆದುಕೊಂಡಿದ್ದವು. ಕರೋನಾ ಬಂದ ಬಳಿಕ ಕಾಲೇಜು ಇಲ್ಲದೇ ಮನೆಗಳಲ್ಲಿದ್ದ ಕಾಲೇಜು ಹುಡುಗರೂ ಕೆಲಸಕ್ಕೆ ಸೇರಿದ್ದರು. ದುಡಿಮೆ ಅಗತ್ಯದಿಂದ ಅವರು ಬರಲಿಲ್ಲ. ಅಲ್ಪಾವಧಿಯಲ್ಲಿ ಸ್ವಲ್ಪ ಹಣ ಸಂಪಾದಿಸಿ ಮಜಾ ಉಡಾಯಿಸಬೇಕೆಂಬ ಮನೋ ಭಾವನೆಯಿಂದಲೇ ಬಂದಿದ್ದರು. ಯಾವ ಶೈಕ್ಷಣಿಕ ಅರ್ಹತೆಯೂ ಇಲ್ಲಿ ಬೇಕಿರಲಿಲ್ಲ. ಹತ್ತನೇ ತರಗತಿ ಪಾಸಾಗಿದ್ದರೆ ಸಾಕಿತ್ತು. ಹೀಗಾಗಿ ತುಂಟರು ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದರು. ಘರ್ಷಣೆಗೆ ಇದು ಒಂದು ಕಾರಣ ಎಂದು ಉದ್ಯೋಗಿಯೊಬ್ಬ ವಿವರಿಸಿದರು.

ಕಂಪನಿ ದೌರ್ಜನ್ಯ ಕೇಳುವರೇ ಇಲ್ಲ ? :

ಕಂಪನಿ ದೌರ್ಜನ್ಯ ಕೇಳುವರೇ ಇಲ್ಲ ? :

ಒಂದು ತಿಂಗಳು ಪ್ರಾಮಾಣಿಕ ಕೆಲಸ ಮಾಡಿದ ಉದ್ಯೋಗಿಗಳಿಗೆ ಹದಿನೇಳು ಸಾವಿರ ಬದಲಿಗೆ ಐದು ಸಾವಿರ ವೇತನ ನೀಡಿದ್ದಾರೆ. ಇನ್ನೂ ಕೆಲವರಿಗೆ ಎರಡು ಸಾವಿರ ಸಂಬಳ ಹಾಕಿದ್ದಾರೆ. ಸರಿಯಾಗಿ ವೇತನ ನೀಡಿದ್ದಲ್ಲಿ ಸಮಸ್ಯೆಯೇ ಉದ್ಯಭವಿಸುತ್ತಿರಲಿಲ್ಲ. ಆದರೆ, ಉದ್ಯೋಗ ನೀಡಿದ್ದ ಏಜೆನ್ಸಿಗಳು ಮಾಡಿದ್ದ ಅನ್ಯಾಯಕ್ಕೆ ಕಂಪನಿ ಬಲಿಯಾಗಿದೆ. ಇದನ್ನು ಯಾರೂ ಪ್ರಶ್ನೆ ಮಾಡುವರೇ ಇಲ್ಲದಂತಾಗಿದೆ. ಎಂಟು ತಾಸಿನ ಕೆಲಸದ ಬದಲಿಗೆ ಹನ್ನೆರಡು ತಾಸು ಕೆಲಸ ಮಾಡಿಸಿಕೊಂಡು ಎರಡು ಸಾವಿರ, ಮೂರು ಸಾವಿರ ವೇತನ ನೀಡಿದ್ದೇ ಗಲಭೆಗೆ ಕಾರಣ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬದಲಿಗೆ ತಪ್ಪು ಮಾಡದವರನ್ನೂ ಸಹ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Recommended Video

ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ವಿಧಿವಶ-ಅಂತಿಮ ದರ್ಶನ ಪಡೆದ ಬಿಎಸ್ ವೈ | Oneindia Kannada

English summary
A series of arrests continues for allegedly destroying an iPhone manufacturing plant near Kolar's Narasapur, the accused have been accused of torturing employees of the detainees,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X