BrahMos: ಬ್ರಹ್ಮೋಸ್ ಕ್ಷಿಪಣಿ ರಫ್ತಿಗೆ ಭರ್ಜರಿ ಉತ್ತೇಜನ: ₹4000 ಕೋಟಿ ಆರ್ಡರ್

ನವದೆಹಲಿ; ಭಾರತದ ಅತೀ ವೇಗದ ಕ್ರೂಸ್ ಕ್ಷಿಪಣಿ 'ಬ್ರಹ್ಮೋಸ್' (BrahMos) ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಿದೆ. ಇದರ ದೇಶಿಯ ಉತ್ಪಾದನೆಯ ಪ್ರಯತ್ನಕ್ಕೆ ಪ್ರಮುಖ ಉತ್ತೇಜನ ದೊರೆತಿದೆ. ಸಾವಿರಾರು ಕೊಟಿ ರೂ ಆದಾಯ ದಾಖಲಿಸಿರುವ 'ಬ್ರಹ್ಮೋಸ್ ಏರೋಸ್ಪೇಸ್' ಇದೀಗ 4,000 ಕೋಟಿ ರೂ. ಮೌಲ್ಯದ ಎರಡು ರಫ್ತು ಆರ್ಡರ್‌ಗಳನ್ನು ಪಡೆದುಕೊಂಡಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಗುರುವಾರ ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. 2025-26ರಲ್ಲಿ ಬ್ರಹ್ಮೋಸ್ ಏರೋಸ್ಪೇಸ್ 5,200 ಕೋಟಿ ರೂ.ಗಳಿಗೂ ಹೆಚ್ಚಿನ ಆದಾಯವನ್ನು ಗಳಿಸಿತ್ತು. ದೇಶೀಯ ಉತ್ಪಾದನೆ ಮತ್ತು ರಫ್ತುಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.

BrahMos

ಲಕ್ನೋದಲ್ಲಿರುವ ಕಂಪನಿಯ ಹೊಸ ಸೌಲಭ್ಯದಲ್ಲಿ ಒಂದು ವರ್ಷದೊಳಗೆ ತನ್ನ ಮೊದಲ ಬ್ಯಾಚ್ ಕ್ಷಿಪಣಿಗಳನ್ನು ಉತ್ಪಾದಿಸಿ ಹೊರತರಲು ಮುಂದಾಗಿತ್ತು. ಅದರ ಬೆನ್ನಲ್ಲೆ ಬ್ರಹ್ಮೋಸ್ 4,000 ಕೋಟಿ ರೂ. ಮೌಲ್ಯದ ಎರಡು ರಫ್ತು ಆರ್ಡರ್ ಬಂದಿವೆ. ಈ ಮೂಲಕ ಜಾಗತಿಕ ರಫ್ತಿಗೆ ಮೊದಲ ಹೆಜ್ಜೆ ಇದಾಗಿದೆ ಎಂದು ಡಿಆರ್‌ಡಿಓ ಅಭಿಪ್ರಾಯಪಟ್ಟಿದೆ.
ಮತ ಎಣಿಕೆ ಕೇಂದ್ರಗಳಿಗೆ QR ಕೋಡ್ ಗುರುತು ವ್ಯವಸ್ಥೆ: ಇಸಿಐ ಹೊಸ ಕ್ರಮ
ಮತ ಎಣಿಕೆ ಕೇಂದ್ರಗಳಿಗೆ QR ಕೋಡ್ ಗುರುತು ವ್ಯವಸ್ಥೆ: ಇಸಿಐ ಹೊಸ ಕ್ರಮ

ನಿಗದಿತ ಸಮಯದಲ್ಲಿ ಬ್ರಹ್ಮೋಸ್ ಪೂರೈಕೆ

'ಆತ್ಮನಿರ್ಭರ್ ರಕ್ಷಣಾ ಬ್ರಹ್ಮೋಸ್ ಏರೋಸ್ಪೇಸ್ ಆದಾಯವು 2025-2026 ರಲ್ಲಿ ಗರಿಷ್ಠ ದಾಖಲೆ ಬರೆದಿದೆ. ಇನ್ನೂ ಪ್ರಸಕ್ತ ಆರ್ಥಿಕ ವರ್ಷ 2025-26 ರಲ್ಲಿ ಬರೋಬ್ಬರಿ 4000 ಕೋಟಿ ಮೌಲ್ಯದ ಎರಡು ರಫ್ತು ಮಾಡಲು ಒಪ್ಪಂದ ಮಾಡಿಕೊಡಲಾಗಿದೆ. ಬ್ರಹ್ಮೋಸ್ ವಿಶ್ವ ಮಾರುಕಟ್ಟೆಯಲ್ಲಿ ಹೆಜ್ಜೆಗುರುತು ಮೂಡಿಸಿದೆ. ಒಪ್ಪಿಕೊಂಡಂತೆ ನಿಗದಿತ ಸಮಯದೊಳಗೆ ಸಶಸ್ತ್ರ ಪಡೆಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಿದೆ.

2025ರಲ್ಲಿ ಲಕ್ನೋದಲ್ಲಿ ಉತ್ಪಾದನಾ ಕೇಂದ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದ್ದರು. ಭಾರತದಲ್ಲಿ ಸ್ಥಳೀಯ ರಕ್ಷಣಾ ಸಾಮರ್ಥ್ಯಗಳ ಸಂಕೇತವಾಗಿ ಈ ಘಟಕ ತೆರೆಯಲಾಗಿದೆ. ಅಕ್ಟೋಬರ್‌ನಲ್ಲಿ ಬ್ರಹ್ಮೋಸ್ ಏಕೀಕರಣ ಮತ್ತು ಪರೀಕ್ಷಾ ಸೌಲಭ್ಯದಲ್ಲಿ ಉತ್ಪಾದಿಸಲಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಗೆ ಅವರು ಗ್ರೀನ್ ಸಿಗ್ನಲ್ ನೀಡಿದ್ದರು.

ಬ್ರಹ್ಮೋಸ್ ವೈಶಿಷ್ಟ್ಯವೇನು?

ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ವೇಗದ ಕ್ಷಿಪಣಿಯಾಗಿದೆ. ಯುದ್ಧದ ಸನ್ನಿವೇಶದಲ್ಲಿ ಸುಮಾರು 290 ಕಿಲೋ ಮೀಟರ್ ವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಹಾರಾಟದ ಉದ್ದಕ್ಕೂ ಸೂಪರ್‌ಸಾನಿಕ್ ವೇಗವನ್ನು ಕಾಯ್ದು ಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಎದುರಾಳಿ ಕ್ಷಿಪಣಿ, ದಾಳಿಗಳನ್ನು ಸಮರ್ಥವಾಗಿ ಎದುರಿಸುತ್ತದೆ. ಶತ್ರುಗಳ ಕ್ರಮಗಳ ಅರಿತು ವಿನಾಶಕಾರಿ ಸಾಮರ್ಥ್ಯ ಪ್ರದರ್ಶಿಸುವ ವ್ಯವಸ್ಥೆ ಈ ಬ್ರಹ್ಮೋಸ್ ಹೊಂದಿದೆ.

ಬ್ರಹ್ಮೋಸ್ 15 ಕಿಲೋಮೀಟರ್‌ಗಳ ಎತ್ತರದಲ್ಲಿಯು ಸಾಗಬಲ್ಲದು. ಟರ್ಮಿನಲ್ ಹಂತದಲ್ಲಿ ಐದು ಮೀಟರ್‌ಗಳಷ್ಟು ಕಡಿಮೆ ಜಾಗದಲ್ಲಿ ಸಾಗಲಿದೆ. 200 ಕೆಜಿ ತೂಕದ ಸಾಂಪ್ರದಾಯಿಕ ಸ್ಪೋಟಕ ಸಾಹಿಸುವ ಸಾಮರ್ಥ್ಯ ಸಹ ಹೊಂದಿದೆ ಎಂದು ಡಿಎಆರ್‍‌ಡಿಓ ತಿಳಿಸಿದೆ.

ಸದರಿ ಬ್ರಹ್ಮೋಸ್ ಕ್ಷಿಪಣಿಯನ್ನು ಭೂಮಿ, ಸಮುದ್ರ ಮತ್ತು ಸಬ್-ಸೀ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಮಾಣೀಕರಿಸಲಾಗಿದೆ. ಭೂ-ದಾಳಿ ಮತ್ತು ಹಡಗು ವಿರೋಧಿ ಕಾರ್ಯಾಚರಣೆಗಳಲ್ಲಿ ಹೆಚ್ಚು ಬಳಕೆಗೆ ಬರಲಿದೆ. ದೃಢ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+