ಕೋಲಾರ: ರಾತ್ರೋರಾತ್ರಿ ಖಾಸಗಿ ಲೇಔಟ್‌ನಲ್ಲಿ ಗುಡಿಸಲು ನಿರ್ಮಾಣ
ಕೋಲಾರ, ಜೂನ್ 25: ರಾತ್ರೋರಾತ್ರಿ ಕೋಲಾರ ಜಿಲ್ಲೆಯ ಖಾಸಗಿ ಲೇಔಟ್‌ನಲ್ಲಿ ಜನರು ಗುಡಿಸಲು ನಿರ್ಮಾಣ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದ ಆನಂದಗಿರಿ ಬಳಿ ಇರುವ ಹನುಮಂತಪುರ ಸರ್ವೇ ನಂ.22ರಲ್ಲಿ ವಿ.ಆರ್ ವೆಂಚರ್ಸ್ ಎಂಬ ಖಾಸಗಿ ಲೇಔಟ್‌ನಲ್ಲಿ ರಾತ್ರೋರಾತ್ರಿ ಗುಡಿಸಲು ನಿರ್ಮಾಣ ಮಾಡಲಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದ ಆನಂದಗಿರಿ ಬಳಿ 120 ಎಕರೆಯಲ್ಲಿ ನಿರ್ಮಾಣ ಮಾಡಿರುವ ವಿ.ಅರ್ ವೆಂಚರ್ಸ್ ಖಾಸಗಿ ಲೇಔಟ್ ನಿರ್ಮಿಸಲಾಗುತ್ತಿದೆ.

ಸುಮಾರು 20 ಎಕರೆಯಷ್ಟು ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಆರೋಪ ಖಾಸಗಿ ಲೇಔಟ್ ಮಾಲೀಕರ ವಿರುದ್ಧ ಕೇಳಿ ಬಂದಿದೆ.

Recommended Video
ಕಾರವಾರಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ | Oneindia Kannada
ಕರ್ನಾಟಕ ದಲಿತ ರೈತ ಸೇನೆ ಸಂಘಟನೆ ನೇತೃತ್ವದಲ್ಲಿ ನೂರಾರು ಜನ ಖಾಸಗಿ ಲೇಔಟ್‌ನಲ್ಲಿ ಗುಡಿಸಲು ನಿರ್ಮಾಣ ಮಾಡಲಾಗಿದ್ದು, ಸಂಘಟನೆ ಮುಖಂಡರು ಹಾಗೂ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ಅಕ್ರಮದ ಬಗ್ಗೆ ಮನವಿ ಮಾಡಿದ್ದರು.












Click it and Unblock the Notifications