ಕೆ.ಸಿ.ವ್ಯಾಲಿ ಎಂಬ ಭೂತ ಕೋಲಾರಕ್ಕೆ ಬಿಟ್ಟವರೆಲ್ಲ ಎಲ್ಲಿ ಹೋದರು?

ಕೋಲಾರ, ಜುಲೈ 18: ಬಯಸಿ ಬಯಸಿ ಸಮಸ್ಯೆ ತಂದುಕೊಳ್ಳುವುದು ಅಂದರೆ ಇದೇ ಇರಬೇಕು. ಕೋಲಾರ ಜಿಲ್ಲೆ ಪಾಲಿಗೆ ಇದೇನೋ ಮಹಾನ್ ಒಳ್ಳೆ ಸುದ್ದಿ ಅಂತ ಯಾವುದೋ ಅಂದುಕೊಳ್ಳುತ್ತಿದ್ದರೋ ಅದರದೇ ಭೂತವನ್ನು ಈಗ ಅನುಭವಿಸುವಂತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅದರದೇ ಚರ್ಚೆ. ಶಿವಪ್ರಕಾಶ್ ರೆಡ್ಡಿ ಎಂಬುವವರು ಹಂಚಿಕೊಂಡಿದ್ದ ವಿಡಿಯೋ ಸಹಿತ ಈ ವರದಿಯಲ್ಲಿ ಕೊಡಲಾಗಿದೆ.

ಈ ವರದಿಯಲ್ಲಿ ಹೇಳುತ್ತಿರುವುದು ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ. ಬೆಂಗಳೂರಿನ ತ್ಯಾಜ್ಯ ನೀರನ್ನು ಕೋಲಾರಕ್ಕೆ ಹರಿಸಿದರೆ ಅದರಿಂದ ಅಂತರ್ಜಲ ವೃದ್ಧಿ ಸೇರಿದಂತೆ ಇತರ ಅನುಕೂಲಗಳಿವೆ ಎಂದು ದೊಡ್ಡ ಮಟ್ಟದಲ್ಲಿ ಧ್ವನಿ ಮಾಡಲಾಯಿತು. ಈ ಯೋಜನೆಯನ್ನು ವಿರೋಧಿಸಿದ್ದ ನೀರಾವರಿ ಹೋರಾಟಗಾರರ ಬಗ್ಗೆ ಕೂಡ ಲಘುವಾಗಿ ಮಾತನಾಡಲಾಯಿತು.

How KC Valley project becoming dangerous to Kolar

ಈಗ ಏನಾಗಿದೆ ಅಂದರೆ ಕೋಲಾರದ ಲಕ್ಷ್ಮೀಸಾಗರದ ಬಳಿ ಹೋದರೆ ಈ ಯೋಜನೆಯ ಫಲಶ್ರುತಿ ಗೊತ್ತಾಗುತ್ತದೆ. ನೊರೆನೊರೆಯಾಗಿ ನೀರು ಹರಿಯುತ್ತಿದೆ. ಈ ನೊರೆಯಿಂದ ಅದ್ಯಾವುದೇ ಸಮಯದಲ್ಲಾದರೂ ಬೆಂಕಿ ಹೊತ್ತಿಕೊಳ್ಳಬಹುದು ಎಂಬ ಆತಂಕ ಎದುರಾಗಿದೆ. ಕೆ.ಸಿ.ವ್ಯಾಲಿ ಯೋಜನೆ ಬೆಂಬಲಿಸಿದ್ದವರೆಲ್ಲ ಈಗ ಎಲ್ಲಿ ಹೋದರು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+