ಕೋಲಾರ: ಎಂಟಿಬಿ ಆ್ಯಂಡ್ ಟೀಮ್ ಪರ ಸಚಿವ, ಸಂಸದರ ಬ್ಯಾಟಿಂಗ್
ಕೋಲಾರ, ಜೂನ್ 5: ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಅವರ ತಂಡದ ಪರವಾಗಿ ಅಬಕಾರಿ ಸಚಿವ ಎಚ್.ನಾಗೇಶ ಅವರು ಮಾತನಾಡಿದ್ದಾರೆ.
Recommended Video
ಎಂಟಿಬಿ ನಾಗರಾಜ್, ಎಚ್. ವಿಶ್ವನಾಥ್, ಆರ್.ಶಂಕರ್ ಪರ ಬ್ಯಾಟಿಂಗ್ ಮಾಡಿರುವ ಅಬಕಾರಿ ಸಚಿವ ನಾಗೇಶ್, ಬಿಜೆಪಿ ವರಿಷ್ಠರಿಗೂ ಬುದ್ಧಿ ಮಾತು ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಸಚಿವ ನಾಗೇಶ್, ""ಅವರ ತ್ಯಾಗದಿಂದ ಬಿಜೆಪಿ ಅಧಿಕಾರ ಅನುಭವಿಸುತ್ತಿದೆ. ಅವರು ಪಕ್ಷಾಂತರ ಮಾಡದಿದ್ದರೆ ವಿರೋಧ ಪಕ್ಷದಲ್ಲಿ ಇರಬೇಕಾಗುತ್ತಿತ್ತು. ಅವರಿಗೆ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಅವರು ಸೋತಿದ್ದರೂ ಕೂಡಾ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವಕಾಶ ಕೊಡುವ ಭರವಸೆಯಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೋಲಾರ ಸಂಸದ ಎಸ್.ಮುನಿಸ್ವಾಮಿ, ""ಎಂಟಿಬಿ ಹಾಗೂ ಅವರ ತಂಡದವರು ಕಾಂಗ್ರೆಸ್ ದುರಾಡಳಿತ ತೊರೆದು ಬಂದಿದ್ದಾರೆ. ಮಂತ್ರಿ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ'' ಎಂದರು.

ಎಂಟಿಬಿ ನಾಗರಾಜ್ ಹಿರಿಯರು, ಅವರಿಗೆ ಟಿಕೆಟ್ ಕೊಟ್ಟು ಉಳಿಸಿಕೊಳ್ಳಬೇಕು. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತ್ತು ಮುಖ್ಯಮಂತ್ರಿಗಳಿಗೆ ನಾನು ಸಹ ಒತ್ತಡ ಹಾಕಿದ್ದೇನೆ ಎಂದ ಅವರು, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಗೆ ಟಿಕೆಟ್ ಕೊಡುವ ವಿಚಾರಕ್ಕೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದರು. ಮೂಲ ಬಿಜೆಪಿಗರಿಗೂ ಸೂಕ್ತ ಸ್ಥಾನಮಾನವನ್ನು ಸಿಎಂ ನೀಡುತ್ತಾರೆಂದು ಸಂಸದ ಮುನಿಸ್ವಾಮಿ ಹೇಳಿದರು.












Click it and Unblock the Notifications