ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ನಿಷಿದ್ಧ''

|
Google Oneindia Kannada News

ಕೋಲಾರ, ಆಗಸ್ಟ್ 12: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ಕೋಲಾರ ಜಿಲ್ಲೆಯಾದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವುದು, ವಿಸರ್ಜನಾ ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ತಿಳಿಸಿದರು.

ಇಂದು ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣಗಲ್ಲಿ ಏರ್ಪಡಿಸಿದ್ದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಸರ ಹಾನಿಕಾರಕ ಪಿಓಪಿ ಗಣಪತಿ ವಿಗ್ರಹಗಳ ಮಾರಾಟ ಮತ್ತು ಬಳಕೆಯನ್ನು ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ. ಇದರ ಬದಲಾಗಿ ಸಗಣಿಯಿಂದ ಗೋದಿ ಅಥವಾ ರಾಗಿ ಹಿಟ್ಟಿಗೆ ಅರಿಶಿನ ಸೇರಿಸಿ ತಯಾರಿಸಿದ ಗಣಪತಿ ಮೂರ್ತಿಗಳನ್ನು ತಮ್ಮ ಮನೆಗಳಲ್ಲಿ ಮಾತ್ರ ಬಳಸಿ, ಪೂಜಿಸಬೇಕು ಎಂದರು.

ಕುರುಡುಮಲೆ ಗಣಪನಿಗೆ ಹರಕೆ ತೀರಿಸಿದ ಸುರೇಶ್ ಕುಮಾರ್ಕುರುಡುಮಲೆ ಗಣಪನಿಗೆ ಹರಕೆ ತೀರಿಸಿದ ಸುರೇಶ್ ಕುಮಾರ್

ಅರಿಶಿಣದ ಬಳಕೆಯಿಂದ ರೋಗ ನಿರೋದಕ ಶಕ್ತಿಯು ಹೆಚ್ಚುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಆಗದೆ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವುದರಿಂದ ಪರಿಸರಕ್ಕೆ ಅಪಾರ ಕೊಡುಗೆ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು.

 Establishment Of Ganesha Statue In Public Places Is Forbidden: Kolar DC

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಧ್ವನಿವರ್ಧಕ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಮನೆಗಳಲ್ಲಿಯೇ ಗಣೇಶ ಪ್ರತಿಷ್ಠಾಪಿಸಿ ಆರಾಧಿಸಬಹುದಾಗಿದೆ. ಸಾರ್ವಜನಿಕ ಕೆರೆ, ಬಾವಿಗಳಲ್ಲಿ ಈ ಬಾರಿ ಗಣೇಶ ವಿಸರ್ಜನೆಗೆ ಅವಕಾಶ ಇರುವುದಿಲ್ಲ. ತಮ್ಮ ತಮ್ಮ ಮನೆಗಳಲ್ಲಿಯೇ ನೀರಿನ ಬಕೆಟ್, ಪಾತ್ರೆಗಳಲ್ಲಿ ವಿಸರ್ಜನೆ ಮಾಡಬೇಕು ಎಂದು ಸೂಚಿಸಿದರು.

ಎಷ್ಟೋ ವರ್ಷದ ನಂತರ ಕೋಲಾರದಲ್ಲಿ ಈ ಪರಿ ಮಳೆ; ಜೀವಪಡೆದ ನೀರ ಸೆಲೆಎಷ್ಟೋ ವರ್ಷದ ನಂತರ ಕೋಲಾರದಲ್ಲಿ ಈ ಪರಿ ಮಳೆ; ಜೀವಪಡೆದ ನೀರ ಸೆಲೆ

ಗಣೇಶ ಹಬ್ಬವನ್ನು ಎಲ್ಲರೂ ಸರಳವಾಗಿ ಮತ್ತು ಕುಟುಂಬಕ್ಕೆ ಸೀಮಿತಗೊಳಿಸಿ ನಮ್ಮ-ನಮ್ಮ ಮನೆಗಳಲ್ಲಿಯೊ ಆಚರಿಸೋಣ. ಶಾಂತಿ, ಸೌಹರ್ದತೆಯಿಂದ ಹಬ್ಬ ಆಚರಿಸಿ, ಮಾದರಿಯಾಗೋಣ ಎಂದು ಮನವಿ ಮಾಡಿದರು.

 Establishment Of Ganesha Statue In Public Places Is Forbidden: Kolar DC

ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶವಿಲ್ಲದಿರುವುದರಿಂದ ಡಿಜೆ ಅಥವಾ ಮೈಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಪ್ರತಿಯೊಬ್ಬರು ಮಾಸ್ಕ್ ಬಳಕೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಗಣೇಶ ಹಬ್ಬವನ್ನು ಆಚರಿಸಬೇಕು ಎಂದ ಅವರು, ಪಿಓಪಿ ಗಣೇಶ ಮೂರ್ತಿಗಳ ಸಂಗ್ರಹ ಅಥವಾ ಮಾರಾಟ ಮಾಡುವುದು ಕಂಡು ಬಂದರೆ ಪೋಲಿಸ್ ಸಹಾಯವಾಣಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿತ್ತಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟನ್ ಐಪೋನ್ ತಯಾರಿಕಾ ಕಂಪನಿಗೆ 43 ಎಕರೆ ಜಮೀನು ಮಂಜೂರಾಗಿರುತ್ತದೆ. ಇನ್ನು 5 ಎಕರೆ ಜಮೀನಿಗಾಗಿ KIADB ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. 687 ಕೋಟಿ ರೂ. ವೆಚ್ಚದಲ್ಲಿ ಕಂಪನಿಯು ಆರಂಭವಾಗುತ್ತಿದ್ದು, ಸುಮಾರು 10 ಸಾವಿರ ಜನಕ್ಕೆ ಉದ್ಯೋಗವಾಕಾಶ ದೊರೆಯಲಿದೆ. ಇದರಲ್ಲಿ ಶೇ 92 ರಷ್ಟು ಉದ್ಯೋಗವಾಕಾಶಗಳು ಸ್ಥಳೀಯರಿಗೆ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪ್ರಾದೇಶಿಕ ಕಛೇರಿಯ ಜಿಲ್ಲಾ ಪರಿಸರ ಅಧಿಕಾರಿಗಳಾದ ವಾಸುದೇವ ಎಸ್.ಕೆ, ಡಿವೈಎಸ್ಪಿ ಚೌಡಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತಿರಿದ್ದರು.

English summary
In the wake of coronavirus, Ganesha Statue installation in public places across the Kolar district has been banned, District Collector C. Satyabhama said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X