• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರ: ಆವನಿ ಶೃಂಗೇರಿ ಶಾಖಾ ‌ಮಠದ ಸ್ವಾಮೀಜಿ ನಿಧನ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಆಗಸ್ಟ್ 16: ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಆವನಿ ಗ್ರಾಮದ ಶೃಂಗೇರಿ ಶಾಖಾ ಮಠದ ಅಭಿನವ ವಿದ್ಯಾಶಂಕರ ಭಾರತಿ ಸ್ವಾಮೀಜಿ ನಿಧನರಾಗಿದ್ದಾರೆ.

ಆವನಿ ಶೃಂಗೇರಿ ಶಾಖಾ ಮಠದಲ್ಲಿ ಸ್ವಾಮೀಜಿ(56)ಗೆ ಹೃದಯಾಘಾತದಿಂದ ಶನಿವಾರ ಬೆಳಿಗ್ಗೆ 5.30 ಕ್ಕೆ ಅಸುನೀಗಿದ್ದಾರೆ. ಇತ್ತೀಚಿಗೆ ಅವರು ಅನಾರೋಗ್ಯದಿಂದ ‌ಬಳಲುತ್ತಿದ್ದರು. ಸ್ವಾಮೀಜಿ ನಿಧನಕ್ಕೆ ನೂರಾರು ಭಕ್ತಾಧಿಗಳು ಕಂಬನಿ ಮಿಡಿದಿದ್ದಾರೆ. ಸಚಿವ ನಾಗೇಶ್ ಸೇರಿದಂತೆ ಅಪಾರ ಭಕ್ತ ಗಣದಿಂದ ಅಂತಿಮ ದರ್ಶನ ಪಡೆಯಲಾಯಿತು.

ಕೋಲಾರದ ಆವನಿ ಶೃಂಗೇರಿ ಶಾರದ ಪೀಠದ ಸ್ವಾಮಿಜಿ ವಿಧಿವಶ ಹಿನ್ನೆಲೆಯಲ್ಲಿ, ಮಠದ ಹಿರಿಯ ಸ್ವಾಮೀಜಿಗಳ ಉಪಸ್ತಿತಿಯಲ್ಲಿ ನೆರವೇರಿದ ಅಂತಿಮ ವಿಧಿವಿಧಾನ ನಡೆದು, ಆವನಿ ರಾಮಲಿಂಗೇಶ್ಚರ ದೇಗುಲ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಿತು.

1987ರಲ್ಲಿ ತಮ್ಮ 21 ವರ್ಷ ವಯಸ್ಸಿಗೆ ಕೋಲಾರದ ಆವನಿ ಶಾರದಾ ಮಠದ ಪೀಠಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಧಾರವಾಡದ ವೇ.ಬ್ರ.ದಕ್ಷಿಣಾಮೂರ್ತಿ ಶಾಸ್ತ್ರಿ ಮತ್ತು ವತ್ಸಲಾಂಬಾ ಅವರು ಸ್ವಾಮೀಜಿಯ ಪೂರ್ವಾಶ್ರಮದ ತಂದೆ-ತಾಯಿಗಳು.

ಆವನಿಯಲ್ಲಿ ಶಾರದಾಂಬೆ ದೇವಾಲಯ ನಿರ್ಮಾಣದ ರೂವಾರಿಯೂ ಆಗಿದ್ದರು. ಅಲ್ಲದೆ ಭಕ್ತರು ಶಾರದಾಣಬೆಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು.

English summary
Abhinava Vidyashankara Bharathi Swamiji of Sringeri Branch Math in Avani village of Taluk in the Kolar district has died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X