ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ಮುಂದುವರೆದ ಜಾತಿ ದೌರ್ಜನ್ಯ; ದಲಿತನ ಮೇಲೆ ಸವರ್ಣೀಯರ ಹಲ್ಲೆ

|
Google Oneindia Kannada News

ಕೋಲಾರ, ಅ.11: ರಾಜ್ಯದಲ್ಲಿ ಜಾತಿ ತಾರತಮ್ಯದ ಮತ್ತೊಂದು ಘಟನೆ ಕೋಲಾರದಲ್ಲಿಯೇ ವರದಿಯಾಗಿದೆ. ಅಕ್ಟೋಬರ್ 7 ರಂದು ಕೋಲಾರದ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಕ್ಕಾಗಿ 46 ವರ್ಷದ ದಲಿತ ವ್ಯಕ್ತಿಯನ್ನು ಮೇಲ್ಜಾತಿಯ ಸದಸ್ಯರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದಲಿತ ವ್ಯಕ್ತಿಯ ಮೇಲೆ ಸುಮಾರು 15ಕ್ಕೂ ಹೆಚ್ಚು ಮಂದಿ ಕತ್ತಿಯಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಬೂದಿಕೋಟೆ ಪೊಲೀಸರು ಆರು ಮಂದಿ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ.

ಕೋಲಾರ ಜಿಲ್ಲೆಯ ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗೊಟ್ಟಲೂರು ನಿವಾಸಿ ಸಂತ್ರಸ್ತ ಮುನಿರಾಜು ಎಂಬುವರು ದೂರು ಸಲ್ಲಿಸಿದ್ದಾರೆ.

'ನಮ್ಮ ದೇವಸ್ಥಾನದಲ್ಲಿ ನಿನಗೆ ಏನು ಕೆಲಸ..?'

'ನಮ್ಮ ದೇವಸ್ಥಾನದಲ್ಲಿ ನಿನಗೆ ಏನು ಕೆಲಸ..?'

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಮುನಿರಾಜು, 'ದೊಡ್ಡಾಪುರ ಗ್ರಾಮದ ಗಂಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸಿದ್ದಯ್ಯ, ಚಂದ್ರಪ್ಪ ಹಾಗೂ ಸಿದ್ದಯ್ಯನ ನಾಲ್ವರು ಸಂಬಂಧಿಕರು ನನ್ನ ಮೇಲೆ ಕತ್ತಿ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಜೊತೆಗೆ ಸಿದ್ದಯ್ಯ ಮತ್ತಿತರರು ಜಾತಿ ನಿಂದನೆ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ.

ಮುಂದುವರೆದು, ದೇವಸ್ಥಾನದಲ್ಲಿ ಇರುವುದನ್ನು ಗಮನಿಸಿ, ಇನ್ನೂ ಇಲ್ಲೇ ಇದ್ದೀಯಾ, ನಮ್ಮ ದೇವಸ್ಥಾನದಲ್ಲಿ ನಿನಗೆ ಏನು ಕೆಲಸವಿದೆ?" ಎಂದು ಆರೋಪಿಗಳು ಗದರಿದರು ಎಂದು ಮುನಿರಾಜು ಆರೋಪಿಸಿದ್ದಾರೆ.

ದಲಿತ ವ್ಯಕ್ತಿಯ ತಲೆಗೆ ಗಾಯ, ರಕ್ತಸ್ರಾವ

ದಲಿತ ವ್ಯಕ್ತಿಯ ತಲೆಗೆ ಗಾಯ, ರಕ್ತಸ್ರಾವ

"ಗ್ರಾಮಸ್ಥರು ನನ್ನನ್ನು ಕಂಡು ಆಸ್ಪತ್ರೆಗೆ ಸೇರಿಸಿದಾಗ ನಾನು ಪ್ರಜ್ಞಾಹೀನನಾಗಿದ್ದೆ" ಎಂದು ಗಾಯಾಳು ಮುನಿರಾಜು ಹೇಳಿದ್ದಾರೆ. ದೂರಿನ ಪ್ರಕಾರ ಮುನಿರಾಜು ತಲೆಗೆ ಗಾಯಗಳಾಗಿದ್ದು ರಕ್ತಸ್ರಾವವಾಗಿತ್ತು. ಸದ್ಯ ಕೋಲಾರದ ಆಸ್ಪತ್ರೆಯಲ್ಲಿ ಸಂತ್ರಸ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೂರಿನ ಮೇರೆಗೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಧರಣಿ ದೇವಿ ಅವರು ಆಸ್ಪತ್ರೆಗೆ ಭೇಟಿ ನೀಡಿದ ಇತರ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಹಲ್ಲೆ ಮಾಡಿದ ಇಬ್ಬರು ಆರೋಪಿಗಳ ಬಂಧನ

ಹಲ್ಲೆ ಮಾಡಿದ ಇಬ್ಬರು ಆರೋಪಿಗಳ ಬಂಧನ

ಘಟನೆ ಸಂಬಂಧ ಆರೋಪಿಗಳ ವಿರುದ್ಧ "ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 143 (ಕಾನೂನುಬಾಹಿರ ಸಭೆ), 144 (ಯಾವುದೇ ಮಾರಕ ಆಯುಧದಿಂದ ಶಸ್ತ್ರಸಜ್ಜಿತರಾಗಿರುವುದು), 147 (ಗಲಭೆಯಲ್ಲಿ ತಪ್ಪಿತಸ್ಥರು), 148 (ಗಲಭೆ, ಮಾರಕ ಆಯುಧದಿಂದ ಶಸ್ತ್ರಸಜ್ಜಿತರು), 504 (ಶಾಂತಿ ಹಾಳು ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) , 324 (ಅಪಾಯಕಾರಿ ಆಯುಧಗಳು ಅಥವಾ ಸ್ವಯಂಪ್ರೇರಣೆಯಿಂದ ಗಾಯವನ್ನುಂಟುಮಾಡುವುದು), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 149 (ಕಾನೂನುಬಾಹಿರ ಸಭೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೂದಿಕೋಟೆ ಪೊಲೀಸರು ಆರೋಪಿಗಳಾದ ಚಂದ್ರಪ್ಪ ಮತ್ತು ಸಿದ್ದಯ್ಯನನ್ನು ಬಂಧಿಸಿದ್ದಾರೆ.

ಗ್ರಾಮವೇ ದೂರ ತಳ್ಳಿದ್ದ ಕುಟುಂಬವನ್ನು ಅಪ್ಪಿಕೊಂಡ ರಾಹುಲ್ ಗಾಂಧಿ

ಗ್ರಾಮವೇ ದೂರ ತಳ್ಳಿದ್ದ ಕುಟುಂಬವನ್ನು ಅಪ್ಪಿಕೊಂಡ ರಾಹುಲ್ ಗಾಂಧಿ

ಇದು ಕರ್ನಾಟಕದಲ್ಲಿ ಜಾತಿ ಆಧಾರಿತ ದೌರ್ಜನ್ಯದ ಮೂರನೇ ವರದಿಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ಬಾಲಕನೊಬ್ಬ ಸೆ.29ರಂದು ದೇವರ ಉತ್ಸವದಲ್ಲಿ ಗ್ರಾಮ ದೇವತೆ ಭೂತಮ್ಮನ ಗುಜ್ಜು ಕೋಲು ಮುಟ್ಟಿದ ಎಂಬ ಕಾರಣಕ್ಕೆ ಇಡೀ ಕುಟುಂಬಕ್ಕೆ ಬರೋಬ್ಬರಿ 60 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಲಾಗಿತ್ತು. ಇಲ್ಲದಿದ್ದರೆ ಗ್ರಾಮದಿಂದಲೇ ಬಹಿಷ್ಕರಿಸುವುದಾಗಿ ಬೆದರಿಕೆವೊಡ್ಡಲಾಗಿತ್ತು.

ಈ ಕುಟುಂಬವನ್ನು ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ತನ್ನ ಹತ್ತಿರಕ್ಕೆ ಕರೆದು ಆತ್ಮೀಯವಾಗಿ ಮಾತನಾಡಿಸಿ ಜನರ ಮನಗೆದ್ದಿದ್ದಾರೆ.

ಇನ್ನು ಇತ್ತಿಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಪದೇನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 2 ರಂದು 14 ವರ್ಷದ ದಲಿತ ಬಾಲಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ್ದರು.

English summary
Dalit man assaulted while performing pooja in temple in kolar's Bangarpet Taluk's Dodduru Village. FIR against six members of a dominant caste, Two arrested. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X