ಕಳ್ಳ.. ಕಳ್ಳ ಇದ್ದಂಗಿದಿಯಲ್ಲೋ... ಲೇ.. ಈ ಮಾತು ವಾಪಸ್ ತಗೊಂಡ್ರೆ ಒಳ್ಳೆದು: ಇದು ಇಬ್ಬರು ಜನಪ್ರತಿನಿಧಿಗಳ ಸಂಸ್ಕಾರದ ಮಾತುಗಳು
ಕೋಲಾರ, ಸೆಪ್ಟೆಂಬರ್, 25: ಇಂದು ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮತ್ತು ಸಂಸದ ಮುನಿಸ್ವಾಮಿ ವೇದಿಕೆ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿಕೊಂಡ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಹಾಗಾದರೆ ಈ ಗಲಾಟೆ ಯಾವ ವಿಚಾರಕ್ಕೆ ಆಗಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಈ ವೇಳೆ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮತ್ತು ಸಂಸದ ಮುನಿಸ್ವಾಮಿ ಅವರ ನಡುವಿನ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಇಬ್ಬರು ನಾಯಕರನ್ನು ವೇದಿಕೆಯಿಂದ ಕೆಳಗೆ ಎಳೆದುಕೊಂಡು ಹೋಗಿ ಗಲಾಟೆ ತಿಳಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಶ್ರೀನಿವಾಸಪುರ ರೈತರ ಪರವಾಗಿ ಮನವಿ ಸಲ್ಲಿಸಲು ಆಗಮಿಸಿದ್ದ ಸಂಸದ ಮುನಿಸ್ವಾಮಿ ಅವರು ಪಕ್ಕದಲ್ಲಿ ಭೂಗಳ್ಳರನ್ನು ಕುರಿಸಿಕೊಂಡು ಸಭೆ ಮಾಡಿದರೆ ಏನರ್ಥ ಎಂದು ಪ್ರಶ್ನಿಸಿದರು. ಇದರಿಂದ ಕೆರಳಿದ ಶಾಸಕ ಎಸ್.ಎನ್.ನಾರಾಯಸ್ವಾಮಿ ಭೂಗಳ್ಳ ನಾನಲ್ಲ, ನೀನು ಈ ಮಾತನ್ನು ವಾಪಸ್ ತೆಗೆದುಕೊ ಎಂದು ಏಕವಚನದಲ್ಲಿ ಎಚ್ಚರಿಕೆ ನೀಡಿದರು. ಇದೀಗ ಈ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಇಬ್ಬರ ನಾಯಕರ ವರ್ತನೆ ಜನರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಎಸ್ಸ್ಪ್ ನಾರಾಯಣ್, ಸ್ಥಳೀಯ ಶಾಸಕರು ಸೇರಿದಂಯೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications