ಶಿಕ್ಷಕನಿಂದಲೇ ವಸತಿ ಶಾಲಾ ವಿದ್ಯಾರ್ಥಿನಿಯರ 5,000ಕ್ಕೂ ಹೆಚ್ಚು ನಗ್ನ ಫೋಟೋ, ವಿಡಿಯೋ ಸೆರೆ.!
ಕೋಲಾರ, ಸೆಪ್ಟೆಂಬರ್, 07: ರಾಜ್ಯದ ಹಲವು ಜಿಲ್ಲೆಗಳ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಕ್ಯಾಮೆರಾಗಳನ್ನು ಇಟ್ಟು ವಿಡಿಯೋ ಮಾಡಿರುವ ಆರೋಪಗಳು ಕೇಳಿಬಂದಿದ್ದು, ಈ ಪ್ರಕರಣ ಇಡೀ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ವಸತಿ ಶಾಲ ಶಿಕ್ಷಕನೊಬ್ಬ ವಸತಿ ಶಾಲಾ ವಿದ್ಯಾರ್ಥಿನಿಯರ ನಗ್ನ ಪೋಟೋ, ವಿಡಿಯೋಗಳನ್ನು ಸೆರೆಹಿಡಿದಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಕೋಲಾರದಲ್ಲಿ ವಸತಿ ಶಾಲಾ ಶಿಕ್ಷಕನೊಬ್ಬ ವಸತಿ ಶಾಲಾ ವಿದ್ಯಾರ್ಥಿನಿಯರ 5,000ಕ್ಕೂ ಹೆಚ್ಚು ನಗ್ನ ವಿಡಿಯೋ, ಫೋಟೋಗಳನ್ನು ಸೆರೆ ಹಿಡಿದಿರುವ ಘಟನೆ ನಡೆದಿದೆ.

ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವ ವೇಳೆ 5,000ಕ್ಕೂ ಹೆಚ್ಚು ಫೋಟೋ, ವಿಡಿಯೋಗಳನ್ನು ಸೆರೆಹಿಡಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಚಿತ್ರಕಲಾ ಶಿಕ್ಷಕನೊಬ್ಬನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
ಇನ್ನು ತನ್ನ ವಿರುದ್ಧ ದಾಖಲು ಆಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಚಿತ್ರಕಲಾ ಶಿಕ್ಷಕ ಮುನಿಯಪ್ಪ (46) ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ತಿರಸ್ಕರಿಸಿದೆ. ಇದು ಭಯಾನಕ ಪ್ರಕರಣವಾಗಿದೆ.
ಪೋಕ್ಸೋ ಕಾಯ್ದೆ ಸೆಕ್ಷನ್ 11ರ ಪ್ರಕಾರ ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ಪ್ರದರ್ಶಿಸುವುದು ಲೈಂಗಿಕ ಕಿರುಕುಳ ಆಗುತ್ತದೆ. ಈ ಅಪರಾಧವು ಕಾಯ್ದೆಯ ಸೆಕ್ಷನ್ 12ರ ಟಡಿ ಶಿಕ್ಷಾರ್ಹವಾಗಿದೆ ಎಂದು ತಿಳಿಸಿದೆ.
ವಿಡಿಯೋ ಭಾರೀ ವೈರಲ್: ಸಾಮಾನ್ಯವಾಗಿ ಶಾಲಾ-ಕಾಲೇಜುಗಳ ಕಾರ್ಯಕ್ರಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ ಅತಿಥಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಡ್ಯಾನ್ಸ್ ಮಾಡಿರುವ ಘಟನೆ ದಾವವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿದ್ಯಾಕಾಶಿ ಅಂತಲೇ ಹೆಸರುವಾಸಿಯಾಗಿರುವ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಾಠ ಹೇಳಿಕೊಡುವ ಅತಿಥಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ನೃತ್ಯ ಮಾಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ, ಇದೀಗ ಇದಕ್ಕೆ ಎಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ.
ಅತಿಥಿ ಉಪನ್ಯಾಸಕ ಪಂಪಾಪತಿ ವಿದ್ಯಾರ್ಥಿನಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ಡ್ಯಾನ್ಸ್ ಮಾಡಿದವರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಕೆಲವರು ಅಂಗಿ ಬಿಚ್ಚಿಕೊಂಡು ಬರೀ ಮೈಯಲ್ಲಿ ಡ್ಯಾನ್ಸ್ ಮಾಡಿ ಅಶಿಸ್ತು ತೋರಿರುವ ಘಟನೆಯೂ ನಡೆದಿದೆ ಎಂದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.












Click it and Unblock the Notifications