ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಳಿ ಫಾರಂನಲ್ಲಿ ಸ್ವಚ್ಛತೆಗೆ ಬಂದಿದ್ದ ಏಳು ಕೂಲಿ ಕಾರ್ಮಿಕರ ಸಾವು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 16 : ಕೋಳಿ ಫಾರಂವೊಂದರಲ್ಲಿ ಟ್ಯಾಂಕ್ ಸ್ವಚ್ಛ ಮಾಡಲು ತೆರಳಿದ್ದ ಏಳು ಮಂದಿ ಕೂಲಿ ಕಾರ್ಮಿಕರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗಡಿ ಭಾಗವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ, ಪಲಮನೇರು ತಾಲೂಕಿನ ಮುರುಂ ಗ್ರಾಮದ ಶ್ರೀ ವೆಂಕಟೇಶ್ವರ ಕೋಳಿ ಫಾರಂನಲ್ಲಿ ಸಂಭವಿಸಿದೆ.

ನಿರ್ಮಾಣ ಹಂತದ ಕಟ್ಟಡ ಕುಸಿತ, 3 ಸಾವು, 11 ಕಾರ್ಮಿಕರ ರಕ್ಷಣೆನಿರ್ಮಾಣ ಹಂತದ ಕಟ್ಟಡ ಕುಸಿತ, 3 ಸಾವು, 11 ಕಾರ್ಮಿಕರ ರಕ್ಷಣೆ

ಕೋಳಿ ಫಾರಂನಲ್ಲಿ ಸತ್ತ ಕೋಳಿಗಳ ತ್ಯಾಜ್ಯವನ್ನು ಸುರಿಯುವ ಟ್ಯಾಂಕ್ ಸ್ವಚ್ಛಗೊಳಿಸುವ ಸಲುವಾಗಿ ಏಳು ಕಾರ್ಮಿಕರು ಇಳಿದಿದ್ದರು. ಅದರಲ್ಲಿನ್ ರಾಸಾಯನಿಕ ಹೊಗೆಯುಕ್ತ ವಾಸನೆಯಿಂದ ಅಸ್ವಸ್ಥರಾದ ಕಾರ್ಮಿಕರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು. ಆದರೆ ಮಾರ್ಗ ಮಧ್ಯೆಯೇ ಏಳು ಮಂದಿ ಮೃತಪಟ್ಟಿದ್ದಾರೆ.

7 labours died in poultry farm in Palamaner

ರಮೇಶ್, ರಾಮಚಂದ್ರ, ರೆಡ್ಡಿಪ್ಪ, ಕೇಶವ, ಗೋವಿಂದ ಸ್ವಾಮಿ, ಬಾಬು, ಶಿವ ಮೃತ ಕೂಲಿ ಕಾರ್ಮಿಕರು. ಮೃತ ಕೂಲಿ ಕಾರ್ಮಿಕರ ಸಂಬಂಧಿಕರ ಆಕ್ರಂದನವು ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪಲಮೇನರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತರ ಸಾವಿಗೆ ಕಾರಣ ಏನು ಎಂಬುದು ಇನ್ನೂ ವೈದ್ಯಕೀಯವಾಗಿ ಖಾತ್ರಿ ಆಗಬೇಕಿದೆ.

English summary
7 labours died in poultry farm in Palamaner, which is situated in Andhra Pradesh, border of Kolar district. These 7 labours went to clean the tank. Due to toxic gas smell the fell ill and died while taking them to hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X