ಕೊರೊನಾ ಪರಿಹಾರಕ್ಕೆ ಹುಂಡಿ ಹಣ ಕೊಟ್ಟ ಕೋಲಾರದ ಪುಟಾಣಿ
ಕೋಲಾರ, ಏಪ್ರಿಲ್ 21: ತನ್ನ ಹುಟ್ಟು ಹಬ್ಬದ ದಿನದಂದು ಕೊರೊನಾ ಪರಿಹಾರ ನಿಧಿಗಾಗಿ ತಾನು ಕೂಡಿಟ್ಟಿದ್ದ ಹುಂಡಿ ಹಣವನ್ನೇ ಕೋಲಾರದ ಈ ಪುಟಾಣಿ ನೀಡಿದ್ದಾಳೆ.
Recommended Video
ಖಾಸಗಿ ಕಂಪನಿಗಳು ಸಾಲ ವಸೂಲಿ ಮಾಡುವಂತಿಲ್ಲ | Somashekar | Oneindia kannada
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಎರಡನೇ ತರಗತಿ ಓದುತ್ತಿರುವ ಚರಿತಾ .ಆರ್. ರಾಯಲ್ ಎಂಬ ಈ ವಿದ್ಯಾರ್ಥಿನಿ ಕೊರೊನಾ ಚಿಕೆತ್ಸೆಗೆ ನೆರವಾಗಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ತಾನು ಕೂಡಿಟ್ಟಿದ್ದ ಹುಂಡಿ ಹಣವನ್ನು ನೀಡಿದ್ದಾಳೆ.
ಇಂದು ಚರಿತಾ ಹುಟ್ಟುಹಬ್ಬವಾಗಿದ್ದು, ಪ್ರತಿ ವರ್ಷ ತನ್ನ ಹುಟ್ಟು ಹಬ್ಬದ ದಿನ ತಾನು ಕೂಡಿಟ್ಟಿದ್ದ ಹಣವನ್ನು ಅನಾಥಾಶ್ರಮಕ್ಕೆ ನೀಡುತ್ತಿದ್ದಳು. ಈ ಬಾರಿ ಅದೇ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾಳೆ. ಒಟ್ಟು 11,111 ರೂಪಾಯಿ ಹಣವನ್ನು ಚೆಕ್ ಮೂಲಕ ಜಿಲ್ಲಾಧಿಕಾರಿಗೆ ನೀಡಿದ್ದಾಳೆ.

"ಮೋದಿ ತಾತ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಹುಂಡಿ ಹಣವನ್ನು ನೀಡುತ್ತಿದ್ದೇನೆ" ಎಂದ ಈ ಪುಟಾಣಿ ತನ್ನ ಪೋಷಕರಾದ ಲಾವಣ್ಯ ಹಾಗೂ ರಮೇಶ್ ಕುಮಾರ್ ಜೊತೆ ಬಂದು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ್ದಾಳೆ. ಪುಟಾಣಿಯ ಈ ಕಾರ್ಯಕ್ಕೆ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications