ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನರ್ಹರಿಗೆ ಹಣ ನೀಡಿದ ಬಗ್ಗೆ ಸಿದ್ದರಾಮಯ್ಯ ಆಧಾರ ನೀಡಲಿ: ಬಿಎಸ್‌ವೈ ಸವಾಲು

By ಕಾರವಾರ ಪ್ರತಿನಿಧಿ
|
Google Oneindia Kannada News

Recommended Video

CM BS Yediyurappa challenged Siddaramaiah | Oneindia Kannada

ಕಾರವಾರ, ನವೆಂಬರ್ 24: "ಸೋಲಿಗೆ ಹೆದರಿ ಟೀಕಿಸುವ ಸಿದ್ದರಾಮಯ್ಯನವರ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ. ಜನರೇ ಡಿಸೆಂಬರ್ 5ರಂದು ಇದಕ್ಕೆಲ್ಲ ಉತ್ತರ ನೀಡುತ್ತಾರೆ" ಎಂದು ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಪರ ಮತಯಾಚನೆಗೆಂದು ಶಿರಸಿಯ ಬನವಾಸಿಗೆ ಬಂದಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು.

ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್!ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್!

'ಸಿದ್ದರಾಮಯ್ಯನವರಿಗೆ ತಾವು ಸೋಲುವ ಭಯ ಅಡರಿದೆ. ಅದಕ್ಕೆ, ಪ್ರತಿ ಅನರ್ಹ ಶಾಸಕರಿಗೂ ನಾವು 25 ಕೋಟಿ ನೀಡಿದ್ದೇವೆ ಎಂದು ಟೀಕಿಸುತ್ತಿದ್ದಾರೆ. ನಾನು ಹಣ ಕೊಟ್ಟಿದ್ದೇನೆನ್ನುವುದನ್ನು ಆಧಾರ ಸಮೇತ ತೋರಿಸಲಿ' ಎಂದು ಸವಾಲೆಸೆದರು.

Yellapura: CM BS Yediyurappa challenges Siddaramaiah

"ರಾಜ್ಯದ ಉಪಚುನಾವಣೆಯ ಅಷ್ಟೂ ಕ್ಷೇತ್ರವನ್ನು ಗೆಲ್ಲುವ ಮೂಲಕ ಮುಂದಿನ ಮೂರೂವರೆ ವರ್ಷ ಆಡಳಿತ ನಡೆಸಲಿದ್ದೇವೆ. ರಾಜ್ಯಕ್ಕೆ ಹೊಸ ಬಜೆಟ್ ಅನ್ನು ನೀಡಲಿದ್ದು, ಹೆಚ್ಚಿನ ಅನುದಾನಗಳನ್ನು ಬಿಡುಗಡೆ ಮಾಡಲಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದಾಗ ಮಾಧ್ಯಮದವರೂ ಸೇರಿ ಯಾರೂ ನನ್ನನ್ನು ನಂಬಿರಲಿಲ್ಲ. ಆದರೆ, ಅದು ನಿಜವಾಯಿತ. ಲೋಕಸಭಾ ಚುನಾವಣೆಯಲ್ಲಿ ನಾನು ನುಡಿದ ಭವಿಷ್ಯದಂತೆಯೇ ಈ ಬಾರಿಯೂ ಆಗುತ್ತದೆ. ಈ ಬಾರಿ ಉಪಚುನಾವಣೆಯ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಲಿದ್ದೇವೆ. ಭವಿಷ್ಯ ನಿಜವಾಗಲಿದೆ. ಗೆಲುವು ನಮ್ಮದೇ" ಎಂದರು.

ಸಿದ್ದರಾಮಯ್ಯಗೆ ಭಾರತ ರತ್ನಕ್ಕೆ ಶಿಫಾರಸು ಮಾಡುತ್ತಾರಾ?ಸಿದ್ದರಾಮಯ್ಯಗೆ ಭಾರತ ರತ್ನಕ್ಕೆ ಶಿಫಾರಸು ಮಾಡುತ್ತಾರಾ?

"ಯಲ್ಲಾಪುರ- ಮುಂಡಗೋಡ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಈಗಾಗಲೇ ಗೆದ್ದಾಗಿದೆ. ಎಷ್ಟು ಅಂತರದಿಂದ ಎಂದಷ್ಟೇ ನೋಡುವುದು ಬಾಕಿ ಉಳಿದಿದೆ"ಎಂದರು.

English summary
ellapura: CM BS Yediyurappa challenges Siddaramaiah to prove that BJP has given Rs25 Cr money to disqualified MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X