ನಟಿ ರುಕ್ಮಿಣಿ ವಸಂತ್ ಬಿಕಿನಿ ಧರಿಸಿದ್ರಾ? ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಫೋಟೋಗಳ ಅಸಲಿ ಸತ್ಯ ಇಲ್ಲಿದೆ
ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ಯ ಭಾರಿ ಬೇಡಿಕೆಯಲ್ಲಿರುವ, ತಮ್ಮ ಹೋಮ್ಲಿ ಲುಕ್ ಹಾಗೂ ನಟನೆಯ ಮೂಲಕವೇ ಕನ್ನಡಿಗರ ಮನಗೆದ್ದಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರದ್ದೇ ಎನ್ನಲಾದ ಗ್ಲಾಮರಸ್ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಈಜುಕೊಳದ ಬಳಿ ಹಸಿರು ಬಣ್ಣದ ಬಿಕಿನಿ ಧರಿಸಿ ಅವರು ಫೋಶೂಟ್‌ಗೆ ಫೋಸ್ ನೀಡುತ್ತಿದ್ದಾರೆ ಎನ್ನಲಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸದಾ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದ ನಟಿಯ ಈ 'ಬೋಲ್ಡ್ ಅವತಾರ' ಕಂಡು ಅವರ ಅಭಿಮಾನಿ ಬಳಗ ಕೂಡ ಅಚ್ಚರಿಗೊಂಡಿದೆ. ಆದರೆ, ಈ ವೈರಲ್ ವಿಡಿಯೋದ ಹಿಂದಿರುವ ಸತ್ಯವೇ ಬೇರೆ.
ವೈರಲ್ ಫೋಟೋಗಳ ಹಿಂದಿನ ಮರ್ಮವೇನು?
ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋ ಕ್ಲಿಪ್‌ನಲ್ಲಿ, ರುಕ್ಮಿಣಿ ವಸಂತ್ ಅವರ ಹೋಲಿಕೆಯಿರುವ ಮಹಿಳೆಯೊಬ್ಬರು ಸ್ವಿಮ್ಮಿಂಗ್ ಪೂಲ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಾಣಿಸಿದೆ. ಸುತ್ತಲೂ ದೊಡ್ಡ ಕ್ಯಾಮೆರಾಗಳು ಹಾಗೂ ತಂತ್ರಜ್ಞರ ದಂಡೇ ಇರುವುದರಿಂದ ಇದು ಪ್ರಮುಖ ಸಿನಿಮಾ ಅಥವಾ ಅಂತರರಾಷ್ಟ್ರೀಯ ಬ್ರ್ಯಾಂಡ್ ಒಂದರ ಫೋಟೋಶೂಟ್ ಇರಬಹುದು ಎಂದೇ ಎಲ್ಲರೂ ಭಾವಿಸಿದ್ದರು. ನೆಟ್ಟಿಗರು ಇದನ್ನು "ರುಕ್ಮಿಣಿ ಅವರ ಮೊದಲ ಬಿಕಿನಿ ಶೂಟ್" ಎಂದು ಬಿಂಬಿಸಿ ಶೇರ್ ಮಾಡಲು ಆರಂಭಿಸಿದ್ದರು.

ಅಸಲಿಗೆ ಇದು ರುಕ್ಮಿಣಿ ಅವರೇನಾ?
ಈ ದೃಶ್ಯಗಳು ಮುನ್ನೆಲೆಗೆ ಬರುತ್ತಿದ್ದಂತೆಯೇ ನಡೆದ ಇದೊಂದು ಆಘಾತಕಾರಿ ಸೈಬರ್ ಅಪರಾಧ ಎಂಬುದು ಪತ್ತೆಯಾಗಿದೆ. ವೈರಲ್ ಆಗುತ್ತಿರುವ ಚಿತ್ರಗಳು ಮತ್ತು ವಿಡಿಯೋ ಸಂಪೂರ್ಣವಾಗಿ ನಕಲಿಯಾಗಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಸೃಷ್ಟಿಸಲಾದ 'AI ಡೀಪ್‌ಫೇಕ್' ವಿಡಿಯೋ ಎನ್ನುವದು ಖಚಿತವಾಗಿದೆ. ಯಾರೋ ಕಿಡಿಗೇಡಿಗಳು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು, ಮತ್ತೊಬ್ಬರ ದೇಹಕ್ಕೆ ನಟಿಯ ಮುಖವನ್ನು ಕೃತಕವಾಗಿ ಬಳಸಿದ್ದಾರೆ. ಈ ವಿಡಿಯೋಗೂ ನಟಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಖಚಿತವಾಗಿದೆ. ಇನ್ನು ಈ ವಿವಾದದ ಕುರಿತು ನಟಿಯ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ.
ರುಕ್ಮಿಣಿ ಅವರು ಸದಾ ಸಿಂಪಲ್ ಲುಕ್‌ನಿಂದಲೇ ಹೆಸರುವಾಸಿಯಾದವರು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕೇವಲ ಗ್ಲಾಮರ್‌ಗೆ ಸೀಮಿತವಾಗಲು ರುಕ್ಮಿಣಿ ಇಷ್ಟಪಡುವುದಿಲ್ಲ. ಇತ್ತೀಚಿನ ಸಂದರ್ಶವೊಂದರಲ್ಲಿ ಮಾತನಾಡಿದ್ದ ಅವರು, "ನನ್ನ ಸಿನಿಮಾ ಪಯಣವನ್ನು ನಾನು ಯಾವುದೇ ನಿರ್ದಿಷ್ಟ ಲೇಬಲ್‌ಗಳ ಮೂಲಕ ಅಳೆಯುವುದಿಲ್ಲ. ನನಗೆ ಸಿಗುವ ಪಾತ್ರಗಳು ಮತ್ತು ಕಥೆ ಮುಖ್ಯ. ಗುಣಮಟ್ಟದ ಕಥೆಗಳ ಮೂಲಕ ಜನರನ್ನು ತಲುಪುವುದು ನನ್ನ ಮುಖ್ಯ ಉದ್ದೇಶ" ಎಂದು ಹೇಳಿದ್ದರು.
No one including me is ready to believe it's real and not ai because it's our cutie #RukminiVasanth 😭 pic.twitter.com/C9rAmelOYZ
— Poindexter (@crushie699) May 23, 2026
ಇನ್ನು ರುಕ್ಮಿಣಿ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಆಡಿಷನ್‌ಗಾಗಿ ಅವರು ಸ್ವತಃ ನಿರ್ದೇಶಕರಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದರಂತೆ. ಸಿನಿಮಾ ರಂಗದಲ್ಲಿ ಯಶ್ ಮತ್ತು ರಿಷಬ್ ಶೆಟ್ಟಿ ಅವರಂತಹ ದೊಡ್ಡ ನಟರಿಂದ ಕಲಿಯುವುದು ಸಾಕಷ್ಟಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.
ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು
ರುಕ್ಮಿಣಿ ವಸಂತ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸದ್ಯ ಅವರು ಚಿತ್ರರಂಗದ ಮೋಸ್ಟ್ ವಾಂಟೆಡ್ ನಟಿಯಾಗಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ಮೂಲಕ ಮತ್ತಷ್ಟು ಹೈಪ್ ಸೃಷ್ಟಿಸಿರುವ ರುಕ್ಮಿಣಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಹಾಗೂ ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಡ್ರ್ಯಾಗನ್' (Dragon) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಯ ಹೆಸರನ್ನು ಹಾಳು ಮಾಡಲು ಈ ರೀತಿಯ ನಕಲಿ ವಿಡಿಯೋಗಳನ್ನು ಹರಿಬಿಡಲಾಗುತ್ತಿದ್ದು, ಇಂತಹ ಡೀಪ್‌ಫೇಕ್ ದೃಶ್ಯಗಳನ್ನು ನಂಬಬೇಡಿ ಹಾಗೂ ಶೇರ್ ಮಾಡಬೇಡಿ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.













Click it and Unblock the Notifications