ಈ ಬೇಸಿಗೆ ಉತ್ತರ ಕನ್ನಡದ 423 ಹಳ್ಳಿ ಜನರ ಗಂಟಲಾರಿಸಲಿದೆ
ಬೆಂಗಳೂರು, ಜನವರಿ 28: ಈ ಬೇಸಿಗೆಯಲ್ಲೂ ಕೂಡ ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಲಿದೆ.
ಕಳೆದ ಐದು ವರ್ಷಗಳಿಂದ ಬರದ ಸಮಸ್ಯೆ ಎದುರಾಗಿತ್ತು.ಹಾಗಾಗಿ ಪ್ರತಿ ವರ್ಷವೂ ಕೂಡ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಜಿಲ್ಲೆಯಲ್ಲಿ ಸಾಕಷ್ಟು ನದಿಗಳಿವೆ. ಆದರೆ ಪಶ್ಚಿಮ ಘಟ್ಟಗಳು ಇನ್ನಿತರೆ ಕಡೆ ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣ ನದಿಗಳು ಬೇಸಿಗೆಯ ಮೊದಲೇ ಬರಿದಾಗುತ್ತಿವೆ.
ಹಾಗಾಗಿ ಸಾಕಷ್ಟು ತಾಲೂಕುಗಳಲ್ಲಿ ಮಾರ್ಚ್ ಆರಂಭದಿಂದ ಮೇ ಅಂತ್ಯದವರೆಗೂ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಈ ಬೇಸಿಗೆಯಲ್ಲಿ ಈ ಸಮಸ್ಯೆಯಿಂದ ಹೊರಬರಬೇಕಾದರೆ ಜಿಲ್ಲಾಡಳಿತ ಸಾಕಷ್ಟು ಉಪಾಯ ಹಾಗೂ ಅನುದಾನವನ್ನು ಕೂಡಿಡಬೇಕಾಗುತ್ತದೆ. ಜಿಲ್ಲಾಡಳಿತವು 11 ತಾಲೂಕುಗಳ 423 ಹಳ್ಳಿಗಳನ್ನು ಗುರುತಿಸಿದೆ.ಕುಡಿಯುವ ನೀರಿನ ಸರಬರಾಜಿಗೆ ಟೆಂಡರ್ ಕರೆಯಲಾಗಿದೆ.
ಈಗ ಸಧ್ಯಕ್ಕೆ ಯಾವುದೇ ಹಳ್ಳಿಯಲ್ಲಿ ನೀರಿನ ತೊಂದರೆ ಇಲ್ಲ, ಆದರೆ ಬೇಸಿಗೆಯಲ್ಲಿ ಈ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗಲಿದೆ. 14ನೇ ಹಣಕಾಸು ಆಯೋಗದದಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ 3 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಇದ್ದರೆ ಜಿಲ್ಲಾ ಪಂಚಾಯ್ತಿ ಅಥವಾ ತಹಶೀಲ್ದಾರ್ ಅವರಿಗೆ ಕರೆ ಮಾಡಿದರೆ 24 ಗಂಟೆಯೊಳಗಾಗಿ ನಿವಾರಿಸಲಾಗುತ್ತದೆ ಎಂದು ಕಾರವಾರದ ಹೆಚ್ಚುವರಿ ಅಉ ಆಯುಕ್ತ ಸುರೇಶ್ ಇತ್ನಾಳ್ ತಿಳಿಸಿದ್ದಾರೆ.
ಕಾರವಾರ-12 ಹಳ್ಳಿಗಳು
ಅಂಕೋಲಾ-27 ಹಳ್ಳಿಗಳು
ಕುಮಟಾ-12 ಹಳ್ಳಿಗಳು
ಹೊನ್ನಾವರ-27 ಹಳ್ಳಿಗಳು
ಭಟ್ಕಳ-10 ಹಳ್ಳಿಗಳು
ಸಿದ್ದಾಪುರ-51 ಹಳ್ಳಿಗಳು
ಯಲ್ಲಾಪುರ-41 ಹಳ್ಳಿಗಳು
ಶಿರಸಿ-95 ಹಳ್ಳಿಗಳು
ಮುಂಡಗೋಡ-50 ಹಳ್ಳಿಗಳು
ಹಳಿಯಾಳ-44 ಹಳ್ಳಿಗಳು
ಜೋಯಿಡಾ-54 ಹಳ್ಳಿಗಳು












Click it and Unblock the Notifications