ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧ: ಮಾಹಿತಿ ವಿವರ
ಕಾರವಾರ, ಜನವರಿ 4: ನಾಳೆ(ಜನವರಿ 5) ರಿಂದ ಇಪ್ಪತ್ತು ದಿನಗಳ ಕಾಲ ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಚಲಿಸುವ ವಾಹನಗಳು ಬದಲಿ ಮಾರ್ಗದಲ್ಲಿ ತೆರಳುವಂತೆ ಉತ್ತರ ಕನ್ನಡ ಜಿಲ್ಲಾಳಿತ ಮನವಿ ಮಾಡಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ-ಅನಮೋಡ ನಡುವಿನ (ತಿನ್ನೇಘಾಟ) ಪ್ರದೇಶದಲ್ಲಿ ನೈರುತ್ಯ ರೇಲ್ವೆ ವತಿಯಿಂದ (TGT-CLR Railway doubling Project) ರೇಲ್ವೆ ಹಳಿ ದ್ವಿಗುಣಗೊಳಿಸುವ ಕಾಮಗಾರಿ ಕೈಗೊಳ್ಳುವುದು ಅವಶ್ಯವಾಗಿರುವುದರಿಂದ ಜನವರಿ 5 ರಿಂದ 25ರ ವರೆಗೆ ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿ (NH-4A) ಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ, ಅನುಮೋಡನಿಂದ ರಾಮನಗರ (ದಾಂಡೇಲಿ) ಕಡೆಗೆ ಹೋಗುವ ಲಘು ವಾಹನಗಳಿಗೆ ಅನುಮೋಡ-ಕ್ಯಾಸರಲಾಕ್ ಕ್ರಾಸ್-ಕ್ಯಾಸರಲಾಕ್-ಕುಣಗಿನಿ ಚೆಕ್‍ಪೋಸ್ಟ್- ಚಾಂದೇವಾಡಿ-ಜಗಲಬೇಟ್ ಮಾರ್ಗವಾಗಿ ಏಕಮುಖ ಸಂಚಾರ, ರಾಮನಗರದಿಂದ ಅನುಮೋಡ ಹೊಗುವ ಲಘು ವಾಹನಗಳಿಗೆ ರಾಮನಗರ-ತಿನ್ನೇಘಾಟ-ಮಾರ್ಸಂಗಳ್ ಕ್ರಾಸ್-ಹೆಮ್ಮಡಗಾ ರೊಡ್- ಅನುಮೋಡ್ ಮಾರ್ಗವಾಗಿ ಏಕಮುಖ ಸಂಚಾರ ಹಾಗೂ ಮಧ್ಯಮ ಮತ್ತು ಭಾರಿ ವಾಹನಗಳಿಗೆ ಆಳ್ನಾವರ-ಹಳಿಯಾಳ-ಯಲ್ಲಾಪುರ-ಕಾರವಾರ- ಗೋವಾ ಮಾರ್ಗದ ಮೂಲಕ ಸಂಚರಿಸುವಂತೆ ಆದೇಶಿಸಿದ್ದಾರೆ.
ಭಟ್ಕಳದಲ್ಲಿ ಗ್ಯಾಸ್ ಏಜೆನ್ಸಿಗೆ ಕನ್ನ: 5 ಲಕ್ಷಕ್ಕೂ ಅಧಿಕ ನಗದು ದೋಚಿದ ಖದೀಮರು
ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಬಳಿಯಿದ್ದ ಗ್ಯಾಸ್ ಏಜೆನ್ಸಿಗೆ ನುಗ್ಗಿದ ಖದೀಮರು 5 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದು, ಕಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ದಿನಕರ ವಿಠಲ್ ಕಿಣಿ ಮಾಲೀಕತ್ವದ ಮೂಕಾಂಬಿಕಾ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳತನವಾಗಿದೆ ಎಂದು ವರದಿಯಾಗಿದೆ. ಬುಧವಾರ ಬೆಳಗಿನ ಜಾವದ ವೇಳೆಯಲ್ಲಿ ಗ್ಯಾಸ್ ಏಜೆನ್ಸಿ ಕಟ್ಟಡದ ಬಳಿ ಬಂದ ಮೂವರು ಖದೀಮರು ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ಅದರಲ್ಲಿ ಓರ್ವ ಹೊರಗಡೆ ನಿಂತು ಕಾಯುತ್ತಿದ್ದರೆ. ಇನ್ನಿಬ್ಬರು ಒಳಗೆ ನುಗ್ಗಿ ನೇರವಾಗಿ ಏಜೆನ್ಸಿ ಮಾಲೀಕನ ಚೇಂಬರ್ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಇರುವುದರಿಂದ ಕೊನೆಗೆ ಬಾಗಿಲಿಗೆ ಅಳವಡಿಸಿದ ಗ್ಲಾಸ್ ಒಡೆದು ಚೇಂಬರನಲ್ಲಿದ್ದ ಸುಮಾರು 5,11,742 ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಮಾಲೀಕರು ಮುಂಜಾನೆ ಗ್ಯಾಸ್ ಏಜೆನ್ಸಿಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications