ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡದ ಮೊದಲ ಮಹಿಳಾ ಎಸ್ಪಿಯಾಗಿ ವರ್ತಿಕಾ ಕಟಿಯಾರ್ ನೇಮಕ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 14; ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜುರನ್ನು ವರ್ಗಾವಣೆ ಮಾಡಲಾಗಿದೆ. ವರ್ತಿಕಾ ಕಟಿಯಾರ್ ನೂತನ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.

ಬುಧವಾರ ಕರ್ನಾಟಕ ಸರ್ಕಾರ ಕೆಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಉತ್ತರ ಕನ್ನಡದ ನೂತನ ಎಸ್ಪಿಯಾಗಿ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ನೇಮಕ ಮಾಡಲಾಗಿದೆ. ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಎನ್ನುವ ಹೆಗ್ಗಳಿಕೆಗೆ ವರ್ತಿಕಾ ಕಟಿಯಾರ್ ಪಾತ್ರವಾಗಲಿದ್ದಾರೆ.

ಉತ್ತರಕನ್ನಡ ಎಸ್ಪಿ ವರ್ಗಾವಣೆಗೆ ತೆರೆಮರೆಯ ಪ್ರಯತ್ನ?ಉತ್ತರಕನ್ನಡ ಎಸ್ಪಿ ವರ್ಗಾವಣೆಗೆ ತೆರೆಮರೆಯ ಪ್ರಯತ್ನ?

ಮೂಲತಃ ಉತ್ತರ ಪ್ರದೇಶದವರಾದ ವರ್ತಿಕಾ 2010ನೇ ಬ್ಯಾಚ್‌ ಐಪಿಎಸ್ ಅಧಿಕಾರಿ. ಈ ಹಿಂದೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಎಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು. ಇದಾದ ನಂತರ ಕೊಡಗು ಹಾಗೂ ಧಾರವಾಡ ಎಸ್‌ಪಿಯಾಗಿ, ಅಲ್ಲದೇ ಕೆಎಸ್‌ಆರ್‌ಪಿ ಸಂಶೋಧನಾ ಕೇಂದ್ರದ ಎಸ್‌ಪಿಯಾಗಿ ಸಹ ಕಾರ್ಯನಿರ್ವಹಿಸಿದ್ದರು.

ಗೋಕರ್ಣ; ಸೆಲ್ಫಿ ನೋಡಿ ಮಾಜಿ ಪ್ರೇಯಸಿ ಹತ್ಯೆಗೆ ಬಂದವ ಸಿಕ್ಕಿಬಿದ್ದ! ಗೋಕರ್ಣ; ಸೆಲ್ಫಿ ನೋಡಿ ಮಾಜಿ ಪ್ರೇಯಸಿ ಹತ್ಯೆಗೆ ಬಂದವ ಸಿಕ್ಕಿಬಿದ್ದ!

Vartika Katiyar New Superintendent Of Police To Uttara Kannada

ಪ್ರಸ್ತುತ ರಾಜ್ಯ ಅಪರಾಧ ದಾಖಲೆಗಳ ವಿಭಾಗದಲ್ಲಿ (ಎಸ್‌ಸಿಬಿ) ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡಿರುವ ಹಾಲಿ ಎಸ್‌ಪಿ ಶಿವಪ್ರಕಾಶ್ ದೇವರಾಜುಗೆ ಸ್ಥಳ ನಿಯೋಜನೆ ಮಾಡಿಲ್ಲ.

ಭಟ್ಕಳ; ವೀಸಾ ಇಲ್ಲದ ಪಾಕಿಸ್ತಾನಿ ಮಹಿಳೆಯ ಬಂಧನ!ಭಟ್ಕಳ; ವೀಸಾ ಇಲ್ಲದ ಪಾಕಿಸ್ತಾನಿ ಮಹಿಳೆಯ ಬಂಧನ!

ಉತ್ತರ ಕನ್ನಡ ಜಿಲ್ಲೆಗೆ ಈವರೆಗೆ ಮಹಿಳಾ ಅಧಿಕಾರಿಗಳು ಎಸ್‌ಪಿಯಾಗಿ ನೇಮಕವಾಗಿರಲಿಲ್ಲ. ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಇಂಕಾಗ್ಲೋ ಜಮೀರ್ ಕರ್ತವ್ಯ ನಿರ್ವಹಿಸಿದ್ದರೆ, ಇದೀಗ ವರ್ತಿಕಾ ಕಟಿಯಾರ್ ಮೊದಲ ಮಹಿಳಾ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸುದ್ದಿ ಪ್ರಕಟಗೊಂಡ 10 ದಿನದಲ್ಲೇ ವರ್ಗ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿನಾಯಕ ಪಾಟೀಲ್ ವರ್ಗಾವಣೆ ನಂತರ 2019ರ ಆಗಸ್ಟ್ ತಿಂಗಳಿನಿಂದ ಶಿವಪ್ರಕಾಶ್ ದೇವರಾಜು ಎಸ್ಪಿಯಾಗಿದ್ದರು. ಹಲವು ಕಾರ್ಯಗಳ ಮೂಲಕ ಗಮನ ಸೆಳೆದಿದ್ದರು. ಅದರಲ್ಲೂ ಹಳೆಯ ಪ್ರಕರಣದ ಆರೋಪಿಗಳ ಬಂಧನ, ಅಕ್ರಮ ಜಾನುವಾರು ಸಾಗಾಟಕ್ಕೆ ಬ್ರೇಕ್ ಹಾಕುವ ಕಾರ್ಯ, ಓಸಿ ಮಟ್ಕಾಕ್ಕೆ ಕಡಿವಾಣ ಹಾಕುವುದು ಹೀಗೆ ಹತ್ತು ಹಲವು ಕಾರ್ಯ ಮಾಡಿದ್ದರು.

Recommended Video

DKS-ಮೂಟೆ ಮೂಟೆ ತರಕಾರಿ ಖರೀದಿ ಮಾಡಿದ ಶಿವಕುಮಾರ್ | Oneindia Kannada

ಇದರ ನಡುವೆ ಅವರ ವರ್ಗಾವಣೆಗೆ ರಾಜಕೀಯವಾಗಿ ಕಳೆದ ಒಂದು ತಿಂಗಳಿನಿಂದ ತೆರೆಮರೆಯ ಪ್ರಯತ್ನ ನಡೆದಿದ್ದು, ಈ ಬಗ್ಗೆ ಜುಲೈ 5ರಂದು 'ಒನ್ ಇಂಡಿಯಾ ಕನ್ನಡ'ದಲ್ಲಿ 'ಉತ್ತರಕನ್ನಡ ಎಸ್‌ಪಿ ವರ್ಗಾವಣೆಗೆ ತೆರೆಮರೆಯ ಪ್ರಯತ್ನ?' ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಸುದ್ದಿ ಪ್ರಕಟಗೊಂಡ 10 ದಿನದಲ್ಲೇ ವರ್ಗಾವಣೆಯಾಗಿದೆ.

English summary
2010 batch IPS officer Vartika Katiyar appointed as superintendent of police of Uttara Kannada. Vartika Katiyar first women SP to the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X