ಕಾರವಾರ: ಕರ್ತವ್ಯ ಲೋಪದ ಮೇಲೆ ನಾಲ್ವರು ಪೊಲೀಸರ ಅಮಾನತು
ಕಾರವಾರ, ಅಕ್ಟೋಬರ್ 26: ಕರ್ತವ್ಯ ಲೋಪ ಹಿನ್ನಲೆಯಲ್ಲಿ ಅಂಕೋಲಾ ಠಾಣೆಯ ಪಿಎಸ್ಐ ಹಾಗೂ ಮೂವರು ಪೊಲೀಸ್ ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಅಮಾನತು ಮಾಡಿದ್ದಾರೆ.
ಅಂಕೋಲಾ ತಾಲೂಕಿನಲ್ಲಿ ಅಕ್ರಮ ಚಟುವಟಿಕೆ ತಡೆಯಲು ವಿಫಲವಾದ ಹಿನ್ನಲೆಯಲ್ಲಿ ಪಿಎಸ್ಐ ಒಂಕಾರಪ್ಪ, ಪೇದೆಗಳಾದ ವಸಂತ್ ನಾಯ್ಕ, ಗಣಪತಿ ಗಾಂವಕರ್ ಹಾಗೂ ಗಿರೀಶ್ ಲಮಾಣಿಯನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ.

ಇತ್ತಿಚೆಗೆ ತಾಲೂಕಿನ ಅಂದ್ಲೆ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ಎಸ್.ಪಿ ಸೂಚನೆ ಮೇರೆಗೆ ಡಿಸಿಐಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಅಂಕೋಲಾ ಠಾಣಾ ಪೊಲೀಸರ ಮೇಲೆ ಕರ್ತವ್ಯ ಲೋಪ ಕೇಳಿ ಬಂದಿತ್ತು.
ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಈ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications