ಕಾಗೇರಿ ವಿರುದ್ಧ ಭೀಮಣ್ಣ ನಾಯ್ಕ ಐತಿಹಾಸಿಕ ಗೆಲುವು: ಉತ್ತರ ಕನ್ನಡ ಸೋಲು-ಗೆಲುವಿನ ವಿವರ
ಕಾರವಾರ, ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಹೊರ ಬಿದ್ದಿದ್ದು, ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಯಾರೂ ನಿರೀಕ್ಷಿಸಿದ ಚುನಾವಣಾ ಫಲಿತಾಂಶ ಬಂದಿದೆ.
ಸೋಲಿಲ್ಲದ ಸರದಾರ ಶಿರಸಿ ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲು ಕಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ 9017 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವಿಧಾನಸಭಾ ಅಧ್ಯಕ್ಷರಾಗಿದ್ದ, ಆರು ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ 66,639 ಮತಗಳನ್ನು ಪಡೆದಿದ್ದರೇ, ಭೀಮಣ್ಣ ನಾಯ್ಕ 75,656 ಮತಗಳನ್ನು ಪಡೆದು ಐತಿಹಾಸಿಕ ಗೆಲುವು ಕಂಡಿದ್ದಾರೆ.

13 ವರ್ಷ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶಿರಸಿಯ ಭೀಮಣ್ಣ ನಾಯ್ಕ, 2018ರ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ- ಸಿದ್ದಾಪುರ ಕ್ಷೇತ್ರದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ, 2019ರ ಉಪಚುನಾವಣೆಯಲ್ಲಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ವಿರುದ್ಧ, 2020ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ವಿರುದ್ಧ ಸೋಲು ಅನುಭವಿಸಿದ್ದರು.
ಜಿಲ್ಲಾ ಪಂಚಾಯತಿ ಸದಸ್ಯರಾಗಿ ಒಮ್ಮೆ ಸ್ಪರ್ಧಿಸಿ ಗೆಲುವು ಕಂಡಿದ್ದ ಭೀಮಣ್ಣ, ತದನಂತರ ಚುನಾವಣೆಗಳಲ್ಲಿ ಕಂಡಿದ್ದೆಲ್ಲವೂ ಸೋಲೆ. ರಾಜಕೀಯ ನೆಲೆ ಗಟ್ಟಿಗೊಳಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಭೀಮಣ್ಣ, ಸೋತರೂ ಸುಮ್ಮನೆ ಕೂರದೇ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದರು.
ಜನರೊಡನೆ ಒಡನಾಟ ಹೊಂದಿದ್ದ ಭೀಮಣ್ಣ ಪ್ರಮುಖ ನಾಯಕರುಗಳು ಸೇರಿದಂತೆ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರಿಗೂ ಕೂಡ ಚಿರಪರಿಚಿತರು. ಮೂಲ ಕೃಷಿಕರಾಗಿರುವ ಭೀಮಣ್ಣ, ಸದ್ಯ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಕಟ್ಟಾ ಅನುಯಾಯಿ ಆಗಿದ್ದ ಅವರ ಅಕ್ಕನನ್ನು ಬಂಗಾರಪ್ಪನವರಿಗೆ ವಿವಾಹ ಮಾಡಿಕೊಟ್ಟಿದ್ದರು. ಉತ್ತರ ಕನ್ನಡದಲ್ಲಿ ಬಂಗಾರಪ್ಪನವರ ಹಿನ್ನೆಲೆಯಲ್ಲಿ ರಾಜಕೀಯ ಮಾಡಿದವರೆಂದರೆ ಅದು ಭೀಮಣ್ಣ ನಾಯ್ಕ.

ಬಂಗಾರಪ್ಪನವರೊಂದಿಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಇವರು, ಬಳಿಕ ಸಮಾಜವಾದಿ ಪಾರ್ಟಿಗೆ ಸೇರಿ, ಪುನಃ ಕಾಂಗ್ರೆಸ್ ಸೇರಿದ್ದರು. ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದ ಭೀಮಣ್ಣ, ಬಂಗಾರಪ್ಪ ಪಕ್ಷ ಬದಲಿಸಿದ್ದರೂ, ಬಂಗಾರಪ್ಪನವರ ಪುತ್ರರು ಬಿಜೆಪಿ- ಕಾಂಗ್ರೆಸ್ ಸೇರಿದರೂ ತಾವು ಕಾಂಗ್ರೆಸ್ ಬಿಡದೇ ಉತ್ತರ ಕನ್ನಡದಲ್ಲಿ ನೇತೃತ್ವ ವಹಿಸಿಕೊಂಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ವಿರುದ್ಧ ಬಿಜೆಪಿಯ ರೂಪಾಲಿ ನಾಯ್ಕ 2415 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಈ ಗೆಲುವಿನೊಂದಿಗೆ ಕಾರವಾರ-ಅಂಕೋಲಾ ಕ್ಷೇತ್ರವನ್ನು ಮರಳಿ ಪಡೆದುಕೊಂಡಿದೆ. ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಸತೀಶ್ ಸೈಲ್ 76305 ಮತಗಳನ್ನು ಪಡೆದರೆ, ರೂಪಾಲಿ ನಾಯ್ಕ 73890 ಮತಗಳನ್ನು ಪಡೆದುಕೊಂಡಿದ್ದಾರೆ.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ, ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ವಿರುದ್ಧ 32,671 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಂಕಾಳು ವೈದ್ಯ 1,00442 ಮತಗಳನ್ನು ಪಡೆದಿದ್ದು, ಸುನೀಲ್ ನಾಯ್ಕ 67,771 ಮತಗಳನ್ನು ಪಡೆದಿದ್ದಾರೆ.
ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ 8,712 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಭೀಮಣ್ಣ ನಾಯ್ಕ 76,887 ಮತಗಳನ್ನು ಪಡೆದಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ 68,175 ಮತಗಳನ್ನು ಪಡೆದಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ವಿರುದ್ಧ 4,004 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಶಿವರಾಮ ಹೆಬ್ಬಾರ್ 74,699 ಮತಗಳನ್ನು ಪಡೆದಿದ್ದು, ವಿ.ಎಸ್.ಪಾಟೀಲ್ 70,695 ತಗಳನ್ನು ಪಡೆದಿದ್ದಾರೆ.
ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ, ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ವಿರುದ್ಧ 3,623 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆರ್.ವಿ.ದೇಶಪಾಂಡೆ 57,240 ಮತಗಳನ್ನು ಪಡೆದಿದ್ದು, ಸುನೀಲ್ ಹೆಗಡೆ 53,617 ಮತಗಳನ್ನು ಪಡೆದಿದ್ದಾರೆ.
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ, ಜೆಡಿಎಸ್ ಅಭ್ಯರ್ಥಿ ಸೂರಜ್ ಸೋನಿ ವಿರುದ್ಧ 673 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ದಿನಕರ ಶೆಟ್ಟಿ 58,583 ಮತಗಳನ್ನು ಪಡೆದಿದ್ದು, ಸೂರಜ್ ಸೋನಿ 57,960 ಮತಗಳನ್ನು ಪಡೆದಿದ್ದಾರೆ.












Click it and Unblock the Notifications