ವಿಸ್ಟಾಡಾಮ್ ಕೋಚ್ ಇರುವ ಕರ್ನಾಟಕದ ರೈಲುಗಳ ಪಟ್ಟಿ

ಕಾರವಾರ, ಜುಲೈ 01; ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಮಾರ್ಗವಾಗಿ ಸಾಗುವ ಮೂರು ರೈಲುಗಳಿಗೆ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡಾಮ್ ಕೋಚ್‌ ಜೋಡಿಸಲಾಗುತ್ತಿದೆ.

ನೈಋತ್ಯ ರೈಲ್ವೆ ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಜುಲೈ7ರಂದು ಯಶವಂತಪುರದಿಂದ ಸಂಚರಿಸುವ ಯಶವಂತಪುರ- ಕಾರವಾರ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06211/ 06212).

ಜುಲೈ 8ರಂದು ಸಂಚಾರ ನಡೆಸುವ (ರೈಲು ಸಂಖ್ಯೆ 06575/ 06576) ಮತ್ತು ಜುಲೈ 10ರಂದು ಸಂಚಾರ ನಡೆಸುವ (ರೈಲು ಸಂಖ್ಯೆ 06575/ 06576) ಯಶವಂತಪುರ- ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ತಲಾ ಎರಡು ವಿಸ್ಟಾಡಾಮ್ ಕೋಚ್‌ ಜೋಡಿಸಲಾಗುತ್ತಿದೆ.

Vista Dome coache

ವಿಸ್ಟಾಡಾಮ್ ಬೋಗಿ ಅಳವಡಿಕೆ ಮಾಡುವ ಕಾರಣ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆಯಲಾಗುತ್ತಿದೆ. ಈ ರೈಲುಗಳಲ್ಲಿ ಸಂಚಾರ ನಡೆಸಲು ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಜುಲೈ 3ರಿಂದ ಅವಕಾಶವಿದೆ. ಶತಾಬ್ದಿ ಎಕ್ಸ್‌ಪ್ರೆಸ್ ಎಕ್ಸಿಕ್ಯುಟಿವ್ ಕ್ಲಾಸ್‌ನ ದರದಂತೆ ಟಿಕೆಟ್ ಬೆಲೆ ಇರಲಿದೆ.

ವಿಸ್ಟಾಡಾಮ್ ಬೋಗಿ ಏಕೆ?; ವಿಸ್ಟಾಡಾಮ್ ಎಂದರೆ ಪಾರದರ್ಶಕ ಬೋಗಿಗಳು. ಸಾಮಾನ್ಯವಾಗಿ ರೈಲು ಬೋಗಿಗಳಿಗೆ ಕಿಟಕಿ ಬಿಟ್ಟರೆ ಬಾಗಿಲುಗಳಲ್ಲಿ ಮಾತ್ರ ಹೊರಭಾಗ ವೀಕ್ಷಿಸಬಹುದು. ಆದರೆ ವಿಸ್ಟಾಡಾಮ್ ಬೋಗಿಯ ಒಳಗೆ ಕೂತಲ್ಲೇ ಹೊರಗಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ.

ಬೋಗಿಯ ಮೇಲ್ಭಾಗ ಹಾಗೂ ಕಿಟಕಿಯ ಭಾಗಗಳು ಬೃಹತ್ ಗಾತ್ರದ ಗಾಜುಗಳನ್ನು ಹೊಂದಿರುತ್ತದೆ. ಪ್ರಸ್ತುತ ಮಳೆಗಾಲ ಇರುವುದರಿಂದ ಯಶವಂತಪುರ-ಕಾರವಾರದವರೆಗಿನ ಮಾರ್ಗ ಸಂಪೂರ್ಣ ಹಚ್ಚ ಹಸಿರಿನಿಂದ ಕೂಡಿದ್ದು, ಪ್ರವಾಸಿಗರ ವೀಕ್ಷಣೆಯ ಆಕರ್ಷಣೆಯಾಗಿದೆ. ಜೊತೆಗೆ ರೈಲಿನ ವೇಗವನ್ನು ಕೂಡ ಇದು ಹೆಚ್ಚಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+