ನಾಲ್ಕನೇ ಸ್ಥಾನದಲ್ಲಿ ಉ.ಕ.ಜಿಲ್ಲೆ: ಸೌಂದರ್ಯ, ಅಮಿತಾ, ಮೈತ್ರಿ, ಏಕತಾ ಟಾಪರ್ಸ್

ಕಾರವಾರ, ಮೇ 1 : ಸೋಮವಾರ ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಯು ಶೇ 76.75ರಷ್ಟು ಫಲಿತಾಂಶ ಸಾಧಿಸುವ ಮೂಲಕ ಈ ಬಾರಿ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಕಳೆದ ವರ್ಷ ಜಿಲ್ಲೆ ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿತ್ತು. ಈ ಬಾರಿ ಮಾರ್ಚ್ 1ರಿಂದ 17ರವರೆಗೆ ಜಿಲ್ಲೆಯ 30 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 15,475 ಮಂದಿ ಕುಳಿತಿದ್ದರು. ಅದರಲ್ಲಿ 10,600 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತ 7,045 ಬಾಲಕರಲ್ಲಿ 4,233 ಮಂದಿ ಹಾಗೂ 8,430 ಬಾಲಕಿಯರ ಪೈಕಿ 6,367 ಮಂದಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಭಟ್ಕಳದ ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ಸೌಂದರ್ಯ ಡಿ.ನಾಯಕ ಹಾಗೂ ಯಲ್ಲಾಪುರದ ವೈಟಿಎಸ್ಎಸ್ ಪಿಯು ಕಾಲೇಜಿನ ಅಮಿತಾ ರಾಜೇಂದ್ರ ಗಾಂವ್ಕರ್ 587 (ಶೇ 97.83), ಕುಮಟಾದ ಸರಸ್ವತಿ ಪಿಯು ಕಾಲೇಜಿನ ಮುಕುಂದ ಪಾಂಡುರಂಗ ನಾಯಕ 586 (ಶೇ 97.66) ಹಾಗೂ ಅದೇ ಕಾಲೇಜಿನ ನಿರಂಜನ್ ಭರತ್ ಭಂಡಾರಕರ್ 585 (ಶೇ 97.5) ಅಂಕಗಳೊಂದಿಗೆ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

Soundarya, Amita, Maithri, Ekta topper of Uttara Kannada District

ವಾಣಿಜ್ಯ ವಿಭಾಗದಲ್ಲಿ ಶಿರಸಿಯ ಎಂಇಎಸ್ ಪಿಯು ಕಾಲೇಜಿನ ಮೈತ್ರಿ ಹೆಗಡೆ ಹಾಗೂ ತೇಜ ಹೆಗಡೆ 589 (ಶೇ 98.16) ಅಂಕಗಳೊಂದಿಗೆ ಪ್ರಥಮ, ಶಿರಸಿಯ ಎಂಇಎಸ್ ಚೈತನ್ಯ ಪಿಯು ಕಾಲೇಜಿನ ಶ್ರೀರಕ್ಷಾ ಹೆಗಡೆ, ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಾಣಿಜ್ಯ ಪಿಯು ಕಾಲೇಜಿನ ಪವಿತ್ರಾ ಶ್ರೀನಿವಾಸ್ ಪೈ, ಕಾರವಾರದ ಸೇಂಟ್ ಜೋಸೆಫ್ ಪಿಯು ಕಾಲೇಜಿನ ವೆಲಿಂಕಾ ಕಬ್ರಾಲ್, ಶಿರಸಿಯ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಗಣೇಶ್ ವಿ.ಶೇಟ್ 583 (ಶೇ 97.16) ಅಂಕಗಳೊಂದಿಗೆ ದ್ವಿತೀಯ ಹಾಗೂ ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಾಣಿಜ್ಯ ಪಿಯು ಕಾಲೇಜಿನ ಸಜ್ನ್ಯಾ ಪೈ 581 (ಶೇ 96.83 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಶಿರಸಿಯ ಎಂಇಎಸ್ ಪಿಯು ಕಾಲೇಜಿನ ಏಕತಾ ಭಟ್ 566 (ಶೇ 94.33) ಅಂಕಗಳೊಂದಿಗೆ ಪ್ರಥಮ, ಇದೇ ಕಾಲೇಜಿನ ಭಾರತಿ ಜಿ.ಹೆಗ್ಡೆ 554 (ಶೇ 92.33) ಅಂಕಗಳೊಂದಿಗೆ ದ್ವಿತೀಯ ಹಾಗೂ ಹೊನ್ನಾವರ ಎಂಪಿಇಎಸ್ ಎಸ್‌ಡಿಎಂ ಪಿಯು ಕಾಲೇಜಿನ ನಯನಾ ಗಜಾನನ ನಾಯ್ಕ ಹಾಗೂ ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಾಣಿಜ್ಯ ಪಿಯು ಕಾಲೇಜಿನ ತೃಪ್ತಿ ಬಾಲಚಂದ್ರ ನಾಯ್ಕ 552 (ಶೇ 92) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+