ಆಸ್ಟ್ರೇಲಿಯಾ ಮಹಿಳೆ ಬ್ಯಾಗ್ ಮರಳಿಸಿದ ಆರ್‌ಪಿಎಫ್ ಸಿಬ್ಬಂದಿ

ಕಾರವಾರ, ಡಿಸೆಂಬರ್ 19 : ಆಸ್ಟ್ರೇಲಿಯಾದ ಮಹಿಳೆಯೊಬ್ಬರು ರೈಲಿನಲ್ಲಿ ಮರೆತು ಹೋಗಿದ್ದ ಬ್ಯಾಗ್‌ ಅನ್ನು ಆರ್‌ಪಿಎಫ್‌ ಸಿಬ್ಬಂದಿ ಮರಳಿಸಿದ್ದಾರೆ. ಬ್ಯಾಗ್‌ನಲ್ಲಿ ಪಾಸ್‌ಪೋರ್ಟ್, ಕ್ಯಾಮರಾ, ಹಣ ಮುಂತಾದ ವಸ್ತುಗಳಿದ್ದವು.

ಕಾರವಾರದ ರೈಲ್ವೆ ರಕ್ಷಣಾ ದಳ (ಆರ್‌ಪಿಎಫ್) ಸಿಬ್ಬಂದಿ ಐಮೀ ಲೂಮಾಕ್ಸ್‌ ಎಂಬುವವರು ರೈಲಿನಲ್ಲಿ ಮರೆತು ಹೋಗಿದ್ದ ಬ್ಯಾಗ್ ಅನ್ನು ಮರಳಿಸಿದ್ದಾರೆ. ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.

ಭಾರತ ಪ್ರವಾಸದಲ್ಲಿದ್ದ ಐಮೀ ಲೂಮಾಕ್ಸ್ ಮಂಗಳವಾರ ಸ್ವದೇಶಕ್ಕೆ ವಾಪಸ್ ಮರಳಬೇಕಿತ್ತು. ಆದ್ದರಿಂದ, ಮುಂಬೈಗೆ ತೆರಳಲು ಮಂಡೋವಿ ಎಕ್ಸ್‌ಪ್ರೆಸ್ ರೈಲಿಗಾಗಿ ಮಡಗಾಂವ್‌ನಲ್ಲಿ ರೈಲಿಗಾಗಿ ಕಾಯುತ್ತಿದ್ದರು.

RPF officials returns bag left by Australian women

ಆದರೆ, ತಿಳಿಯದೆ ಮುಂಬೈ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಹತ್ತಿದ್ದರು. ನಂತರ ಬೇರೆ ರೈಲು ಹತ್ತಿರುವುದು ಎಂದು ತಿಳಿದು ಇಳಿದಿದ್ದರು. ಬ್ಯಾಗ್‌ಅನ್ನು ರೈಲಿನಲ್ಲಿಯೇ ಬಿಟ್ಟಿದ್ದರು.

ಮಡಗಾಂವ್ ರೈಲು ನಿಲ್ದಾಣದ ಅಧಿಕಾರಿಗಳಿಗೆ ಐಮೀ ಈ ಕುರಿತು ದೂರು ನೀಡಿದ್ದರು. ತಕ್ಷಣ ಸಿಬ್ಬಂದಿ ಮುಂಬೈ ಕೇಂದ್ರ ವಲಯದ ಕಚೇರಿಗೆ ದೂರು ನೀಡಿದ್ದರು.

ಅಲ್ಲಿಂದ ಕಾರವಾರ ರೈಲು ನಿಲ್ದಾಣಕ್ಕೆ ಕರೆ ಹೋಗಿತ್ತು. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಆರ್‌ಪಿಎಫ್‌ ಸಿಬ್ಬಂದಿ ಎ.ಬಿ.ವಾಫ್ ಮತಮ್ತು ರೂಪಾ ನಾಯ್ಕ್ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಹುಡುಕಾಟ ನಡೆಸಿದರು.

ರೈಲಿನಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಬ್ಯಾಗ್‌ನಲ್ಲಿ ಸುಮಾರು 1 ಲಕ್ಷ ಬೆಳೆಬಾಳುವ ವಸ್ತುಗಳಿದ್ದವು. ಪಾಸ್ ಪೋರ್ಟ್, ಐಪಾಡ್, ಸೋನಿ ಕ್ಯಾಮರಾ, 3,3000ರೂ. ಹಣ ಬ್ಯಾಗ್‌ನಲ್ಲಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+