ಉತ್ತರ ಕನ್ನಡ: ಶಿರಸಿ ತಾಲ್ಲೂಕಿನಲ್ಲಿ ಗುಡುಗು ಸಹಿತ ಅಕಾಲಿಕ ಮಳೆ
ಶಿರಸಿ, ಮಾರ್ಚ್ 11: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಹಲವೆಡೆ ಗುರುವಾರ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಅಕಾಲಿಕ ಮಳೆಗೆ ಜನರು ಕಂಗಾಲಾಗಿದ್ದಲ್ಲದೇ, ಶಿವರಾತ್ರಿ ಆಚರಣೆಗೂ ಮಳೆ ಅಡ್ಡಿಯನ್ನುಂಟು ಮಾಡಿತು.
ಶಿವರಾತ್ರಿಯಂದು ಈ ಹಿಂದೆ ಶಿರಸಿಯಲ್ಲಿ ಮಳೆ ಸುರಿದ ಯಾವುದೇ ದಾಖಲೆಯಿಲ್ಲ. ಆದರೆ ಈ ಬಾರಿ ಶಿರಸಿ ನಗರ ಹಾಗೂ ಸುತ್ತಮುತ್ತ ಗುರುವಾರ ಮಧ್ಯಾಹ್ನ ಮಳೆ ಆರಂಭವಾಗಿ, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಕೆಲ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿತ್ತು.

ಇನ್ನು ಸಿದ್ದಾಪುರ ಪಟ್ಟಣದ ರವೀಂದ್ರ ನಗರದಲ್ಲಿ ರೋಹಿಣಿ ಅಂಬಿಗ ಎನ್ನುವವರಿಗೆ ಸೇರಿದ ಮನೆಯ ಬಳಿ ಇದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಇನ್ನು ಜೋರಾಗಿ ಸಿಡಿಲು ಬಡಿದು ಮನೆಗೂ ಸಿಡಿಲು ಅಪ್ಪಳಿಸಿದ ಪರಿಣಾಮ ಸುಮಾರು 10 ಸಾವಿರ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.











Click it and Unblock the Notifications