ಮೋದಿ, ಷಾ ಬೇಕಾದ್ರೆ ಬರ್ಲಿ, ಕೋಮು ಸೌಹಾರ್ದ ಕದಡುವಂತಿಲ್ಲ : ಸಿದ್ದು

Posted By: ದೇವರಾಜ ನಾಯ್ಕ
Subscribe to Oneindia Kannada

ಕಾರವಾರ, ಡಿಸೆಂಬರ್ 06: ಚುನಾವಣಾ ಪ್ರಚಾರಕ್ಕೆ ಮೋದಿ, ಅಮಿತ್ ಷಾ ಯಾರೇ ರಾಜ್ಯಕ್ಕೆ ಬರಲಿ ಅಭ್ಯಂತರವಿಲ್ಲ ಆದರೆ ಕೋಮುಸೌಹಾರ್ದ ಕೆಡಿಸಬಾರದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಜಗಳ್ ಬಂದಿ, ಜನರಿಗೆ ಪುಕ್ಕಟೆ ಮನರಂಜನೆ!

ಉತ್ತರಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮಾರು ಎರಡು ಗಂಟೆ ತಡವಾಗಿ ಭಟ್ಕಳಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಹೆಲಿಪ್ಯಾಡ್‌ನಲ್ಲೇ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದರು.

Modhi, Amith sha can come to Karnataka but cant disturb sommunal harmony

'ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ, ಅವುಗಳ ಉದ್ಘಾಟನೆ, ಅಡಿಗಲ್ಲು ಸಮಾರಂಭಕ್ಕಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ನನ್ನಂತೆಯೇ ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಷಾ ಅವರು ಕೂಡ ರಾಜ್ಯಕ್ಕೆ ಬರಲಿ. ನಮ್ಮ ಅಭ್ಯಂತರವೇನಿಲ್ಲ. ಆದರೆ ಕೋಮು ಸಾಮರಸ್ಯವನ್ನು ಕದಡಬಾರದು' ಎಂದು ಹೇಳಿದರು.

ದಲಿತ ಅರ್ಚಕರ ನೇಮಕಾತಿ ಕುರಿತು ಅನುಮಾನಗಳಿಗೆ ತೆರೆ ಎಳೆದ ಅವರು 'ದೇವಾಲಯಗಳಿಗೆ ದಲಿತ ಅರ್ಚಕರ ನೇಮಕ ಸಂಬಂಧ ವಿಶೇಷ ಕಾನೂನು ಜಾರಿ ಮಾಡುತ್ತಿಲ್ಲ. ನಾರಾಯಣ ಗುರುಗಳು ತೋರಿದ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ಯಾರು ಬೇಕಾದರೂ ದೇವಸ್ಥಾನ ನಿರ್ಮಿಸಿಕೊಂಡು, ಅವರೇ ಅರ್ಚಕರಾಗಬಹುದು. ಅದಕ್ಕೆ ನಮ್ಮ ವಿರೋಧವಿಲ್ಲ' ಎಂದರು.

ರಾಜಕೀಯ ಕಾರ್ಯದರ್ಶಿಗಳ ನೇಮಕ ಸಂಬಂಧ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, 'ದೆಹಲಿಯಂಥ ಸಣ್ಣ ರಾಜ್ಯದಲ್ಲೂ ರಾಜಕೀಯ ಕಾರ್ಯದರ್ಶಿಗಳು ಇದ್ದಾರೆ' ಎಂದು ತಿರುಗೇಟು ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Narendra Modi, Amit shah can come to Karnataka for assembly election campaign, but should not disturb communal harmony, said chief minister Siddaramaiah in Karwar on December 06.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ