• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ಕೊರೊನಾ ವಾರಿಯರ್ಸ್’ಗೆ ಭಟ್ಕಳದಲ್ಲೇ ಸಿದ್ಧಗೊಳ್ಳುತ್ತಿದೆ ರಕ್ಷಣಾ ಕವಚ

|

ಕಾರವಾರ, ಏಪ್ರಿಲ್ 01: ಕೊರೊನಾ ಹರಡುವಿಕೆ ತಡೆಯಲು ಇಡೀ ದೇಶವೇ ಲಾಕ್ ಡೌನ್ ಆಗಿದೆ. ಬಹುತೇಕ ಎಲ್ಲಾ ಕಂಪೆನಿಗಳು, ವ್ಯವಹಾರ ಕೇಂದ್ರಗಳು, ಕೈಗಾರಿಕೆಗಳು ಬಂದ್ ಆಗಿವೆ.

ಆದರೆ, ಭಟ್ಕಳದ ಬೆಳಕೆಯಲ್ಲಿನ ಧ್ರುತಿ ಸರ್ಜಿಕಲ್ ಸೊಲ್ಯುಶನ್ ಪ್ರೈವೇಟ್ ಲಿಮಿಟೆಡ್ ನ ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ನಿರಂತರವಾಗಿ ಸಾಗಿದೆ. ಇಲ್ಲಿ ಕೊರೊನಾ ಕರ್ತವ್ಯನಿರತ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಗಳಿಗೆ ಅವಶ್ಯಕವಾಗಿರುವ ಕಿಟ್ ತಯಾರಿಕೆಗಾಗಿ ಹಗಲಿರುಳು ಶ್ರಮದಾನ ನಡೆಯುತ್ತಿದೆ. ಇಲ್ಲಿನ ಸಿಬ್ಬಂದಿ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಹಗಲಿರುಳು ಕಿಟ್ ತಯಾರಿಕೆಯಲ್ಲಿ ಪರಿಶ್ರಮಿಸುತ್ತಿದ್ದಾರೆ.

ಹುಬ್ಬಳ್ಳಿಯ ನೈಋತ್ಯ ರೈಲ್ವೆ ಕ್ಯಾರೇಜ್ ನಲ್ಲಿ ರೆಡಿಯಾಗುತ್ತಿದೆ ಮಾಸ್ಕ್, ನಿಲುವಂಗಿ

 ಉತ್ತರ ಕನ್ನಡ, ದಕ್ಷಿಣ ಕನ್ನಡ ಡಿಸಿಗಳ ಬೆಂಬಲ

ಉತ್ತರ ಕನ್ನಡ, ದಕ್ಷಿಣ ಕನ್ನಡ ಡಿಸಿಗಳ ಬೆಂಬಲ

ಈ ಕಂಪನಿಯಲ್ಲಿ ಈಗಾಗಲೇ 25 ಸಾವಿರ ಪರ್ಸನಲ್ ಪ್ರೊಟೆಕ್ಟೀವ್ ಇಕ್ವೆಪ್ ಮೆಂಟ್ (ಪಿಪಿಇ) ತಯಾರಿಸಲಾಗಿದ್ದು, ಕಿಟ್ ತಯಾರಿಕೆಗೆ ಎಲ್ಲೆಡೆಯಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಇವುಗಳ ತಯಾರಿ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. ಈ ನಡುವೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಹಕಾರದಿಂದ ಕಿಟ್ ತಯಾರಿಕೆಗೆ ಎಲ್ಲಾ ಸಹಕಾರ, ಬೆಂಬಲ ವ್ಯಕ್ತವಾಗಿದ್ದು, ಕಾರ್ಮಿಕರಿಗೂ ಉತ್ತೇಜನ ಸಿಕ್ಕಿದಂತಾಗಿದೆ.

ಪ್ರಸ್ತುತ ಪಿಪಿಇ ತಯಾರು ಮಾಡಲಾಗುತ್ತಿದ್ದು, ಚೀನಾದಲ್ಲಿ 2 ತಿಂಗಳ ಹಿಂದೆ ಕೊರೊನಾ ಕಂಡುಬಂದಾಗಲೇ ಬೆಂಗಳೂರಿನಿಂದ ಇದಕ್ಕೆ ಬೇಡಿಕೆ ಬಂದಿತ್ತು. ಎರಡು ತಿಂಗಳಿಂದ ಇದನ್ನು ತಯಾರಿಸುತ್ತಿದ್ದು, ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಿಂದ ವ್ಯಾಪಕ ಬೇಡಿಕೆಯಿದೆ. ಬೇಡಿಕೆಗೆ ತಕ್ಕಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿ ಸಹ ಕಿಟ್ ಪೂರೈಕೆಗೆ ಬೇಡಿಕೆಯನ್ನಿಟ್ಟಿದ್ದು, ಪೂರೈಕೆಯಾಗುತ್ತಿದೆ.

 ರಾಜ್ಯ, ಕೇಂದ್ರ ಸರ್ಕಾರಗಳ ಸಹಕಾರ

ರಾಜ್ಯ, ಕೇಂದ್ರ ಸರ್ಕಾರಗಳ ಸಹಕಾರ

ರಾಜ್ಯ, ಕೇಂದ್ರ ಸರಕಾರದಿಂದಲೂ ಸಹಕಾರ ಸಿಕ್ಕಿದ್ದು, ಫ್ಯಾಕ್ಟರಿಯಲ್ಲಿನ ಕಾರ್ಮಿಕರು ದೇಶ ಸೇವೆಯ ರೀತಿಯ ಹಗಲಿರುಳು ಕೆಲಸ ನಡೆಸುತ್ತಿದ್ದಾರೆ. ಫ್ಯಾಕ್ಟರಿಗಳಿಗೆ ವೃತ್ತ ನಿರೀಕ್ಷಕರು, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ. ಕಂಪೆನಿ ಸಿಬ್ಬಂದಿ ಕೂಡ ಕೊರೊನಾ ಅಗತ್ಯ ಪರಿಕರ ಪೂರೈಕೆಯಲ್ಲಿ ನಿರಂತರ ತೊಡಗಿಕೊಂಡಿದ್ದಾರೆ.

ಬಹು ಬೇಡಿಕೆಯ ಪಿಪಿಇ ಈ ಭಾಗದಲ್ಲಿ ಸಿದ್ಧವಾಗುತ್ತಿರುವುದು ಇನ್ನಷ್ಟು ಹೆಮ್ಮೆಯ ವಿಚಾರವಾಗಿದೆ. ಮಾರಕ ರೋಗ ಕೊರೊನಾ ವಕ್ಕರಿಸಿದ ದಿನದಿಂದ ಈ ಫ್ಯಾಕ್ಟರಿಗೆ ಬಿಡುವು ಇಲ್ಲ ಎನ್ನುವಂತಾಗಿದೆ. ಈ ತುರ್ತು ಸಂದರ್ಭದಲ್ಲಿ ವ್ಯಾವಹಾರಿಕವಾಗಿ ಕಿಟ್ ಉತ್ಪಾದನೆಯನ್ನು ನೋಡದೆ, ಸೇವೆಯಂತೆ ಸಂಸ್ಥೆಯನ್ನು ಹಗಲು ರಾತ್ರಿ ನಡೆಸುತ್ತಿದ್ದಾರೆ.

ದೇಶದ ಮೊದಲ ಕೊರೊನಾ ಟೆಸ್ಟಿಂಗ್ ಕಿಟ್ ತಯಾರಿಸಿದ ತುಂಬು ಗರ್ಭಿಣಿ

 ಕಾರ್ಮಿಕ ಸ್ನೇಹಿ ಫ್ಯಾಕ್ಟರಿ

ಕಾರ್ಮಿಕ ಸ್ನೇಹಿ ಫ್ಯಾಕ್ಟರಿ

ವೈದ್ಯರಿಗೆ ಗ್ಲೌಸ್, ತಲೆಗೆ ಧರಿಸುವ ಕ್ಯಾಪ್, ಮಾಸ್ಕ್, ಗೌನ್, ಶೂ ಲೆಗ್ಗಿನ್ಸ್, ಏಪ್ರಾನ್ ‍ಗಳು ಇಲ್ಲಿ ಸಿದ್ಧಗೊಳ್ಳುತ್ತಿವೆ. ಇದನ್ನು ವಿವಿಧ ಸ್ಥರಗಳಲ್ಲಿ ಇಲ್ಲಿ ಉತ್ಪಾದಿಸಲಾಗುತ್ತಿದೆ. ಇಲ್ಲಿನ ನೌಕರರ ಆರೋಗ್ಯವನ್ನು ಮನದಲ್ಲಿರಿಸಿ ಅವರಿಗೆ ವೈದ್ಯಕೀಯ ಚೆಕ್ ಅಪ್, ಧರಿಸಲು ಮಾಸ್ಕ್, ಗ್ಲೌಸ್, ತಲೆಗೆ ಸ್ಕಾರ್ಫ್ ನೀಡಲಾಗುತ್ತಿದೆ. ಹೈಜಿನ್ ಉದ್ದೇಶಕ್ಕೆ ಬಿಸಿ ನೀರು ನೀಡಲಾಗುತ್ತಿದ್ದು, ತೊಳೆಯಲು ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತಿದೆ.

ಮೂರು ವರ್ಷದ ಹಿಂದೆ ಸ್ಥಾಪಿತವಾದ ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು, ಇಲ್ಲಿನ ನೌಕರರಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳ ಜೊತೆಗೆ ಉತ್ತಮ ಸಂಬಳ, ಆರೋಗ್ಯ ವಿಮಾ, ಸೇವಾ ಭದ್ರತೆಯನ್ನು ಕಲ್ಪಿಸಲಾಗಿದೆ. ಕೊರೊನಾ ಮಹಾಮಾರಿ ಆರಂಭದ ದಿನದಿಂದ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 150ಕ್ಕೂ ಅಧಿಕ ಕಾರ್ಮಿಕರು ವಿವಿಧ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸರ್ಜಿಕಲ್ ಫ್ಯಾಕ್ಟರಿಗೆ ಬೆನ್ನೆಲುಬಾಗಿ ಕಾರ್ಮಿಕರು ನಿಂತಿದ್ದಾರೆ. ಭಟ್ಕಳ ಸುತ್ತಮುತ್ತ ಸ್ಥಳೀಯವಾಗಿ ಯುವತಿಯರು, ಯುವಕರು ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

 ರಾಜ್ಯದ ಮೂಲೆ ಮೂಲೆಗೆ ವೈದ್ಯಕೀಯ ಸಾಮಗ್ರಿ

ರಾಜ್ಯದ ಮೂಲೆ ಮೂಲೆಗೆ ವೈದ್ಯಕೀಯ ಸಾಮಗ್ರಿ

ಜಿಲ್ಲೆಯಲ್ಲಿರುವ ಏಕೈಕ ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು, ಪಿಪಿಇ ಕಿಟ್ ತಯಾರಿಕೆಗೆ ಬೇಕಾದ ಎಲ್ಲಾ ಕಚ್ಚಾ ವಸ್ತುಗಳನ್ನು ಹೊರ ರಾಜ್ಯವಾದ ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ದೆಹಲಿ, ಕೇರಳ, ಪುಣೆ ಹಾಗೂ ರಾಜ್ಯದ ಬೆಂಗಳೂರಿನಿಂದಲೂ ತರಿಸಿಕೊಳ್ಳಲಾಗುತ್ತಿದೆ. ಈ ಮೊದಲೇ ಕಚ್ಚಾ ಸಾಮಗ್ರಿಯನ್ನು ಫ್ಯಾಕ್ಟರಿಯಲ್ಲಿ ಸಂಗ್ರಹಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಕೊರತೆ ಎದುರಾಗಿಲ್ಲ. ಇದರ ಜೊತೆಗೆ ಜಿಲ್ಲಾಧಿಕಾರಿ ಸಹಕಾರದಿಂದ ನಿರಂತರವಾಗಿ ಉತ್ಪಾದನೆ ಮಾಡಿ ರಾಜ್ಯ ಮೂಲೆ ಮೂಲೆಗೆ ಈ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ. ಜೊತೆಗೆ ಕಿಟ್ ಹಾಗೂ ಮಾಸ್ಕ್ ತಯಾರಿಕೆ ಹೆಚ್ಚಿಸಲು ಅಗತ್ಯ ಕಚ್ಚಾ ವಸ್ತುಗಳನ್ನು ಹೆಲಿಕ್ಯಾಪ್ಟರ್ ‍ನಿಂದ ಅನೂಕೂಲವಾಗುವ ಸ್ಥಳಕ್ಕೆ ಪೂರೈಕೆ ನೀಡಲಿದ್ದು, ಪಿಪಿಇ ಕಿಟ್ ಹಾಗೂ ಮಾಸ್ಕ್ ತಯಾರಿಕೆಗೆ ಎಲ್ಲಾ ಸಹಕಾರ ನೀಡುವುದಾಗಿ ಪ್ರಧಾನಮಂತ್ರಿ ಕಚೇರಿಯಿಂದ ದೂರವಾಣಿ ಕರೆ ಬಂದಿದೆ ಎಂದು ಫ್ಯಾಕ್ಟರಿಯ ವ್ಯವಸ್ಥಾಪಕ ನಿರ್ದೇಶಕ ಶರತಕುಮಾರ್ ಶೆಟ್ಟಿ ತಿಳಿಸಿದ್ದಾರೆ.

English summary
Medical kits which required in this time of corona to help doctors and nurses are manufacturing in bhatkal,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X