ಉತ್ತರ ಕನ್ನಡದಲ್ಲಿ ಮಾಯವಾದ ಮಳೆ: ರೈತರಲ್ಲಿ ಹೆಚ್ಚಿದ ಆತಂಕ

ಕಾರವಾರ, ಆಗಸ್ಟ್‌10: ಉತ್ತರ ಕನ್ನಡ ಜಿಲ್ಲೆಯಲ್ಲಿ ತಿಂಗಳ ಬಳಿಕ ಆರಂಭವಾಗಿದ್ದ ವಾಡಿಕೆ ಮಳೆ ಕೆಲ ದಿನಗಳವರೆಗೆ ಅಬ್ಬರಿಸಿ ಮತ್ತೆ ಮಾಯವಾಗಿದೆ. ಕಳೆದೊಂದು ವಾರಗಳಿಂದ ಎಲ್ಲೆಡೆ ಬಿಸಿಲಿನ ವಾತಾವರಣ ಕಂಡುಬರುತ್ತಿದ್ದು, ಇದೀಗ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಆತಂಕ ಶುರುವಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಜೂನ್ ಅಂತ್ಯದ ವೇಳೆಗೆ ಆರಂಭವಾಗಿದ್ದ ಮಳೆಯಿಂದಾಗಿ ಬಿತ್ತನೆ ಕಾರ್ಯ ಕೂಡ ತಿಂಗಳುಗಳ ಕಾಲ ವಿಳಂಭವಾಗಿತ್ತು. ಇದರಿಂದ ಕೃಷಿ ಚಟುವಟಿಕೆಗಳು ತಡವಾಗಿಯೇ ಆರಂಭವಾಗಿದ್ದು ಇನ್ನು ಕೂಡ ಕೆಲವೆಡೆ ಭತ್ತ ನಾಟಿ ಕಾರ್ಯ ಪ್ರಗತಿಯಲ್ಲಿದೆ.

less-rain-fall-from-last-one-week

ಆದರೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಕಡಿಮೆಯಾಗಿದೆ. ಎಲ್ಲೆಡೆ ಬಿಸಿಲೀನ ವಾತಾವರಣ ಕಂಡುಬರುತ್ತಿದ್ದು, ಇದೇ ರಿತಿ ವಾತಾವರಣ ಮುಂದುವರಿದಲ್ಲಿ ಕೃಷಿ ಮೇಲೆ ಪರಿಣಾಮ ಬೀರುವ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ಸದ್ಯ ಶೇ.78.13 ರಷ್ಟು ಕೃಷಿ ಚಟುವಟಿಕೆಗೆ ಪೂರ್ಣಗೊಂಡಿದೆ.

ಆದರೆ ಸಿದ್ದಾಪುರದಲ್ಲಿ ಶೇ.26.30, ಶಿರಸಿ 42.06, ಕಾರವಾರ ಶೇ.58.11, ಜೋಯಿಡಾ 58.35, ಯಲ್ಲಾಪುರ 58.85 ಮಾತ್ರ ಗುರಿ ಸಾಧಿಸಲಾಗಿದೆ. ಈ ತಾಲೂಕುಗಳಲ್ಲಿ ಇದೀಗ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಆದರೆ ಇದೀಗ ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಇದೇ ರೀತಿ ಮಳೆ ಕಡಿಮೆಯಾದಲ್ಲಿ ಕೃಷಿ ಚಟುವಟಿಕೆಗೆ ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ.

less-rain-fall-from-last-one-week

ಬೀಜ ಭೀತ್ತನೆಗೆ ಮಳೆ ಸಿಗದ ಕಾರಣ ಇದೀಗ ನಾಟಿ ಕೂಡ ತಡವಾಗುತ್ತಿದೆ. ಆದರೆ ಮಳೆ ಕಳೆದ ಒಂದು ವಾರದಿಂದ ಸರಿಯಾಗಿ ಬೀಳುತ್ತಿಲ್ಲ. ಸದ್ಯ ಮಳೆ ಬೀಳದೆ ಇದ್ದರು ಕೃಷಿ ಕಾರ್ಯಕ್ಕೆ ಬೇಕಾಗುವಷ್ಟು ನೀರು ಗದ್ದೆಗಳಲ್ಲಿ ಇದೆ. ಆದರೆ ಇದೇ ವಾತಾವರಣ ಮುಂದುವರಿದಲ್ಲಿ ಗದ್ದೆ ನಾಟಿ ಮಾಡಿದ ಬಳಿಕ ಗದ್ದೆಗಳು ಒಣಗುವ ಆತಂಕ ಇದೀಗ ನಮಗೆ ಕಾಡುತ್ತಿದೆ. ದೇವರ ದಯೆಯಿಂದ ಮಳೆ ಬಂದು ಬೆಳೆ ಉತ್ತಮವಾದರೇ ಸಾಕು ಎಂದು ಖಾರ್ಗಾದ ರೈತ ಲಕ್ಷ್ಮೀಕಾಂತ ಗೌಡ ಹೇಳಿದ್ದಾರೆ.

ಜಿಲ್ಲೆಯಲ್ಲಿ ಶೇ. 78.13 ರಷ್ಟು ಕೃಷಿ ಚಟುವಟಿಕೆ ಪೂರ್ಣಗೊಂಡಿದೆ. ಇನ್ನು ಕೂಡ ಕೆಲ ತಾಲೂಕು ಮುಂದುವರಿದೆ. ಸದ್ಯ ಮಳೆ ಕಡಿಮೆಯಾಗಿದ್ದರೂ ಗದ್ದೆಗಳಲ್ಲಿ ನೀರಿರುವ ಕಾರಣ ನೀರಿನ ಕೊರತೆ ಇಲ್ಲ. ಆದರೆ ಇದೇ ರೀತಿ ಮಳೆ ಕಡಿಮೆಯಾದಲ್ಲಿ ಕೃಷಿ ಚಟುವಟಿಕೆಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+