ಯಲ್ಲಾಪುರದಲ್ಲಿ ಧರೆ ಕುಸಿದು ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವು!
ಕಾರವಾರ, ಮಾರ್ಚ್ 8: ಗುಡ್ಡದ ಮಣ್ಣು (ಧರೆ) ಕುಸಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.
ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತೇಬೈಲ್ ನ ಮಂಜುನಾಥ ಭಟ್ಟ ಎನ್ನುವವರ ಮಾಲೀಕತ್ವದ ತೋಟದ ಕೆಲಸಕ್ಕೆಂದು ಏಳು ಮಂದಿ ಕಾರ್ಮಿಕರು ತೆರಳಿದ್ದರು. ಧರೆ ಅಗೆದು ತೋಟಕ್ಕೆ ಮಣ್ಣು ಹಾಕುತ್ತಿದ್ದ ವೇಳೆಗೆ ತೋಟದ ಧರೆ ಮಣ್ಣು ಕಾರ್ಮಿಕರ ಮೇಲೆ ಕುಸಿದಿದೆ.
ಈ ವೇಳೆ ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಗೌಳಿವಾಡದ ನಿವಾಸಿಗಳಾದ ಭಾಗ್ಯಶ್ರೀ ಎಡಗೆ (21), ಲಕ್ಷ್ಮೀ ಡೋಯಿಪಡೆ (38), ಸಂತೋಷ್ ಡೋಯಿಪಡೆ (18) ಹಾಗೂ ಮಾಳು ಡೋಯಿಪಡೆ (21) ಅವರ ಮೇಲೆ ಮಣ್ಣು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಗ್ಗಿಬಾಯಿ, ಸೋನಿ ಹಾಗೂ ಬೀರು ಎನ್ನುವವರು ಈ ವೇಳೆ ಅಪಾಯದಿಂದ ಪಾರಾಗಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications