ದಾರಿ ತಪ್ಪಿದ ಬಸ್: ಉತ್ತರ ಕರ್ನಾಟಕಕ್ಕೆ ಹೋಗೋರು ಉತ್ತರ ಕನ್ನಡಕ್ಕೆ ಬಂದ್ರು!
ಕಾರವಾರ, ಮೇ 04: ಉತ್ತರ ಕರ್ನಾಟಕ ಭಾಗಕ್ಕೆ ತೆರಳಬೇಕಿದ್ದ ಸುಮಾರು ಐದು ಸಾರಿಗೆ ಬಸ್ ಗಳು ದಾರಿ ತಪ್ಪಿ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಬಂದ ಘಟನೆ ನಡೆದಿದೆ.
Recommended Video
ಜನರ ಕಷ್ಟ ಕೇಳಲು ಮೆಜೆಸ್ಟಿಕ್ ನಲ್ಲಿ ಕೆಂಪು ಬಸ್ ಹತ್ತಿದ ಸಿದ್ದರಾಮಯ್ಯ, DK ಶಿವಕುಮಾರ್ | DK Shivakumar
ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಸಿಂಧಗಿ, ಮುದ್ದೇಬಿಹಾಳ ಸೇರಿದಂತೆ ವಿವಿಧೆಡೆ ತೆರಳಲು ಬೆಂಗಳೂರಿನಿಂದ ಬಂದಿದ್ದ ಸಾರಿಗೆ ಬಸ್ ಗಳು ದಾರಿ ತಪ್ಪಿ ಬೆಳ್ಳಂಬೆಳಿಗ್ಗೆ ಕಾರವಾರದ ಬಸ್ ನಿಲ್ದಾಣಕ್ಕೆ ಬಂದಿವೆ.
ದಾರಿ ತಪ್ಪಿದ್ದು ಹೇಗೆ?: ಬೆಂಗಳೂರಿನಿಂದ ಪ್ರಯಾಣಿಕರನ್ನು ಕರೆದುಕೊಂಡು ಹೊರಟಿದ್ದ ಸುಮಾರು ಐದು ಬಸ್ ಗಳು, ದಾವಣಗೆರೆ ಮಾರ್ಗವಾಗಿ ತೆರಳಿದ್ದವು. ಆದರೆ, ದಾವಣಗೆರೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವುದರಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ಶಿವಮೊಗ್ಗ ಮಾರ್ಗದಲ್ಲಿ ಬಂದ ಬಸ್, ದಾರಿ ತಪ್ಪಿ ಕಾರವಾರಕ್ಕೆ ಬಂದುಬಿಟ್ಟಿದೆ.

ಕಾರವಾರದ ಬಸ್ ನಿಲ್ದಾಣದಲ್ಲಿ ಕೆಲ ಹೊತ್ತು ಇದ್ದ ಬಸ್, ಬಳಿಕ ಸ್ಥಳೀಯ ಸಿಬ್ಬಂದಿಯ ಬಳಿ ಮಾರ್ಗಗಳ ಮಾಹಿತಿ ಪಡೆದು ಸುಮಾರು 7 ಗಂಟೆಯ ವೇಳೆಗೆ ಮರಳಿ ಉತ್ತರ ಕರ್ನಾಟಕದ ಭಾಗಕ್ಕೆ ತೆರಳಿದೆ.












Click it and Unblock the Notifications