• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ ಮಳೆ; ಕೊಂಕಣ ರೈಲುಗಳ ಸಂಚಾರದಲ್ಲಿ ವ್ಯತ್ಯಯ

By ಕಾರವಾರ ಪ್ರತಿನಿಧಿ
|

ಕಾರವಾರ, ಆಗಸ್ಟ್ 5: ಮಹಾರಾಷ್ಟ್ರ ಹಾಗೂ ಗೋವಾ ಕರಾವಳಿಯಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಭಾನುವಾರ ಬೆಳಗಾವಿ ಸಮೀಪದ ಗೋವಾ- ಲೋಂಡಾ ರೈಲು‌ ಮಾರ್ಗದ ಮೇಲೆ ಗುಡ್ಡ ಕುಸಿತವಾಗಿದೆ. ಕೇಂದ್ರ ರೈಲ್ವೆ ವಲಯದ ಮುಂಬೈ ವಿಭಾಗದ ಗೀತೆ ಆಪ್ತಾ ಪ್ರದೇಶದ ವಿವಿಧೆಡೆ ಹಳಿಗಳು ಜಲಾವೃತವಾಗಿವೆ.

ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ನಿಗಮವು ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದು, ಇನ್ನು ಕೆಲವು ರೈಲುಗಳ ಸಂಚಾರವನ್ನು ಮೊಟಕುಗೊಳಿಸಿದೆ.

 ವಿರಾಜಪೇಟೆ-ಮಾಕುಟ್ಟ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ವಿರಾಜಪೇಟೆ-ಮಾಕುಟ್ಟ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ

ರದ್ದಾದ ರೈಲುಗಳ ವಿವರ: ರೈಲು ಸಂಖ್ಯೆ 11003 ದಾದರ್- ಸಾವಂತವಾಡಿ ರೋಡ್ ತುತರಿ ಎಕ್ಸ್‌ಪ್ರೆಸ್, 16346 ತಿರುವನಂತಪುರಂ- ಲೋಕಮಾನ್ಯ ತಿಲಕ್ ಟರ್ಮಿನಲ್ ಮುಂಬೈ ನೇತ್ರಾವತಿ ಎಕ್ಸ್‌ಪ್ರೆಸ್, 10104 ಮಡಗಾಂವ್ ಜಂಕ್ಷನ್- ಮುಂಬೈ ಸಿಎಸ್ ಟಿಎಮ್ ಮಾಂಡೋವಿ ಎಕ್ಸ್‌ಪ್ರೆಸ್, 50108/06 ಮಡಗಾಂವ್ ಜಂಕ್ಷನ್- ಸಾವಂತವಾಡಿ ದೀವಾ ಪ್ಯಾಸೆಂಜರ್, 12051 ದಾದರ್- ಮಡಗಾಂವ್ ಜಂಕ್ಷನ್ ಜನಶತಾಬ್ಧಿ ಎಕ್ಸ್‌ಪ್ರೆಸ್, 10103 ಮುಂಬೈ ಸಿಎಸ್ ಟಿಎಮ್- ಮಡಗಾಂವ್ ಜಂಕ್ಷನ್ ಮಾಂಡೋವಿ ಎಕ್ಸ್‌ಪ್ರೆಸ್, 50103 ದಾದರ್- ರತ್ನಗಿರಿ ಪ್ಯಾಸೆಂಜರ್, 50105 ದೀವಾ- ಸಾವಂತವಾಡಿ ಪ್ಯಾಸೆಂಜರ್, 11085 ಲೋಕಮಾನ್ಯ ತಿಲಕ್ ಮುಂಬೈ- ಮಡಗಾಂವ್ ಜಂಕ್ಷನ್ ಡಬಲ್ ಡೆಕ್ಕರ್ ರೈಲುಗಳನ್ನು ರದ್ದು ಮಾಡಲಾಗಿದೆ.

ಮಾರ್ಗ ಬದಲಾವಣೆ: ಆ.4ರಂದು ಚಲಿಸುತ್ತಿದ್ದ 12617 ಎರ್ನಾಕುಲಂ- ಎಚ್.ನಿಜಾಮುದ್ದೀನ್ ಮಂಗಳಾ ಎಕ್ಸ್‌ಪ್ರೆಸ್ ರೈಲಿನ ಮಾರ್ಗವನ್ನು ಕಾರಗೋಡ- ರೇನಿಗುಂಟಾ, 19261 ಕೊಚುವೇಲಿ- ಪೋರ್ ಬಂದರ್ ವೀಕ್ಲಿ ಎಕ್ಸ್‌ಪ್ರೆಸ್ ಥ್ರಿಶುರ್- ರೇನಿಗುಂಟಾ, 12977 ಎರ್ನಾಕುಲಂ- ಅಜ್ಮೆರ್ ಮರುಸಾಗರ್ ಎಕ್ಸ್‌ಪ್ರೆಸ್ ಥ್ರಿಶುರ್- ರೇನಿಗುಂಟಾ, 12432 ಎಚ್.ನಿಜಾಮುದ್ದೀನ್- ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್‌ಪ್ರೆಸ್ ನಗ್ಡಾ- ಭೋಪಾಲ್, 19577 ತಿರುವನವೇಲಿ- ಜಮ್ನಾಗರ್ ಎಕ್ಸ್‌ಪ್ರೆಸ್ ಥ್ರಿಶುರ್- ರೇನಿಗುಂಟಾ, 12217 ಕೊಚುವೇಲಿ- ಚಂಡಿಗಡ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಥ್ರಿಶುರ್- ರೇನಿಗುಂಟಾ ಮಾರ್ಗವಾಗಿ ಚಲಿಸುತ್ತಿದೆ. 22413 ಮಡಗಾಂವ್ ಜಂಕ್ಷನ್- ಎಚ್.ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಏಳು ಗಂಟೆ ತಡವಾಗಿ ಚಲಿಸುತ್ತಿದೆ.

ಸಂಚಾರ ರದ್ದಾದ ರೈಲಿನ ಪ್ರಯಾಣಿಕರಿಗೆ ಸಂಪೂರ್ಣ ಟಿಕೆಟ್ ಮೊತ್ತವನ್ನು ಪಾವತಿಸಲಾಗುತ್ತದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

English summary
The Goa-Londa railway line near Belgaum on Sunday collapsed due to heavy rain on the Maharashtra and Goa coasts. In this backdrop, the Konkan Railway Corporation has temporarily canceled many trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X