ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಕೋಲಾದಲ್ಲಿ ಭಾರೀ ಮಳೆ: 40 ಕ್ಕೂ ಹೆಚ್ಚು ಮನೆಗಳು ಜಲಾವೃತ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 13: ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ವರುಣನ ಆರ್ಭಟಕ್ಕೆ ನದಿಭಾಗ ಹಾಗೂ ಸಮುದ್ರ ತೀರದಲ್ಲಿನ 40 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

Recommended Video

Haveri people neglect all the rules and participate in Bandi Run | Haveri | Oneindia Kannada

ಈ ಭಾಗದಲ್ಲಿನ ಮನೆಗಳಲ್ಲಿ ಸುಮಾರು ಆರು ಅಡಿ ನೀರು ಏರುತ್ತಿದ್ದು, ಜನರನ್ನು ನದಿಭಾಗ ಶಾಲೆಗೆ ಸ್ಥಳಾಂತರಿಸಲಾಗಿದೆ. ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು, ಆಶ್ರಯ ನೀಡಲಾಗಿದೆ. ಸುಮಾರು 80 ಕ್ಕೂ ಹೆಚ್ಚು ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ.

ಕದ್ರಾ ಜಲಾಶಯದ ಒಳಹರಿವು ಏರಿಕೆ; ಪ್ರವಾಹದ ಮೊದಲ ಮುನ್ಸೂಚನೆ ಪ್ರಕಟಕದ್ರಾ ಜಲಾಶಯದ ಒಳಹರಿವು ಏರಿಕೆ; ಪ್ರವಾಹದ ಮೊದಲ ಮುನ್ಸೂಚನೆ ಪ್ರಕಟ

Heavy Rain In Ankola: More Than 40 Houses Submerged

ಸ್ಥಳಕ್ಕೆ ಅಂಕೋಲಾ ತಹಶೀಲ್ದಾರ ಉದಯ ಕುಂಬಾರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ, ಪಿಎಸ್ಐ ಇ.ಸಿ ಸಂಪತ್, ಪಿಡಿಒ ರವೀಂದ್ರ ಬಾಬು, ಪೊಲೀಸ್ ಸಿಬ್ಬಂದಿಗಳಾದ ಪರಮೇಶ್, ಆಸಿಫ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

Heavy Rain In Ankola: More Than 40 Houses Submerged

ಕೇಂದ್ರ ಸರ್ಕಾರವು ಪ್ರಸಕ್ತ ವರ್ಷಕ್ಕೆ ಅನ್ವಯಿಸುವಂತೆ ಪಶ್ಚಿಮ ಕರಾವಳಿಯ ವಿಶೇಷ ಆರ್ಥಿಕ ವಲಯದಲ್ಲಿ ಜೂನ್ 15ರಿಂದ ಜುಲೈ 31ರ ವರೆಗೆ ಒಟ್ಟು 47 ದಿನಗಳ ಅವಧಿಗೆ ಇಳಿಕೆ ಮಾಡಿ ಮೀನುಗಾರಿಕೆ ನಿಷೇಧ ಅವಧಿಯನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ಪಿ. ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Heavy Rain In Ankola: More Than 40 Houses Submerged

ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು/ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಎಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ ಅಥವಾ ಔಟ್ ಬೋರ್ಡ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ನಿಷೇಧಿಸಲಾಗಿದೆ.

English summary
Monsoon Rain Started in Karnataka Coastal Area, More Than 40 Houses Submerged in Ankola Taluku.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X