• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರವಾರದಲ್ಲಿ ಗೊಂದಲ ತಂದ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್

|

ಕಾರವಾರ, ಮೇ 05: ಆರೋಗ್ಯ ಇಲಾಖೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಜಿಲ್ಲೆಯ ಅಧಿಕಾರಿಗಳಿಗೆ ಗೊಂದಲಕ್ಕೆ ಸಿಲುಕುವಂತೆ ಮಾಡಿದ ಘಟನೆ ನಡೆದಿದೆ.

   ಜನರ ಕಷ್ಟ ಕೇಳಲು ಮೆಜೆಸ್ಟಿಕ್ ನಲ್ಲಿ ಕೆಂಪು ಬಸ್ ಹತ್ತಿದ ಸಿದ್ದರಾಮಯ್ಯ, DK ಶಿವಕುಮಾರ್ | DK Shivakumar

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಮಂಗಳವಾರ ಬೆಳಿಗ್ಗೆ ಭಟ್ಕಳದ 18 ವರ್ಷದ ಯುವತಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಮೇ 1ಕ್ಕೆ ಭಟ್ಕಳ ತಾಲೂಕು ಆಸ್ಪತ್ರೆಗೆ ಜ್ವರ ಎಂದು ಚಿಕಿತ್ಸೆ ಪಡೆಯಲು ಹೋಗಿದ್ದ ಯುವತಿಯ ಗಂಟಲು ದ್ರವ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಯುವತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ವರದಿ ಬಂದಿತ್ತು.

   ನಿಶ್ಚಿಂತವಾಗಿದ್ದ ಉತ್ತರ ಕನ್ನಡದಲ್ಲೀಗ ಮತ್ತೆ ಢವಢವ; ಭಟ್ಕಳ ಯುವತಿಗೆ ಸೋಂಕು

   ಇನ್ನು ಆರೋಗ್ಯ ‌ಇಲಾಖೆಯ, ತಾಲೂಕು ಆಡಳಿತದ ಅಧಿಕಾರಿಗಳು ಯುವತಿಯ ಮನೆಗೆ ತೆರಳಿ ಔಷದಿ ಸಿಂಪಡಣೆ ಮಾಡಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಿದ್ದರು. ಆದರೆ ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ 28 ವರ್ಷದ ಗಂಡಿಗೆ ಸೋಂಕು ‌ಇದೆ ಎಂದು ನಮೂದಿಸಲಾಗಿತ್ತು.

   ಇದರಿಂದ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿಯನ್ನು ಸಹ ಕೇಳಿದ್ದಾರೆ. ಹೆಣ್ಣಿನ ಬದಲು ಗಂಡು ಎಂದು ತಪ್ಪಾಗಿ ಬುಲೆಟಿನ್ ನಲ್ಲಿ ಪ್ರಕಟವಾಗಿದ್ದು ಸಂಜೆ ಬುಲೆಟಿನ್ ನಲ್ಲಿ ಈ ಬಗ್ಗೆ ಸರಿಪಡಿಸಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.

   English summary
   Health bulletin which was released by Health department today creates confusion in district officials,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X