ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐ ಪತ್ನಿ ಆತ್ಮಹತ್ಯೆಗೆ ಶರಣು
ಕಾರವಾರ, ಡಿಸೆಂಬರ್ 19 : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ ಐ ಮಲ್ಲಪ್ಪ ಅವರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಿಎಸ್ ಐ ಮಲ್ಲಪ್ಪ ಎಸ್ ಹೂಗಾರ ಅವರ ಪತ್ನಿ ವಿಜಯಲಕ್ಷ್ಮಿ ಹೂಗಾರ(28) ಆತ್ಮಹತ್ಯೆ ಶರಣಾಗಿದ್ದಾರೆ. ಇನ್ಸ್ ಪೆಕ್ಟರ್ ಮಲ್ಲಪ್ಪ ಅವರು ಮಂಗಳವಾರ ರಾತ್ರಿ ಡ್ಯೂಟಿ ಮುಗಿಸಿಕೊಂಡು ಬುಧವಾರ ಬೆಳಗ್ಗೆ ಮನೆಗೆ ವಾಪಸ್ ಬಂದ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿದೆ.

ವಿಜಯಲಕ್ಷ್ಮಿ ಅವರು ಮನೆಯ ಫ್ಯಾನಿಗೆ ನೇಣು ಹಾಕಿಕೊಂಡಿರುವುದನ್ನು ಕಂಡು ಪಿಎಸ್ ಐ ಮಲ್ಲಪ್ಪ ಕಿರುಚಿದ್ದಾರೆ. ಪಿಎಸ್ ಐ ಮಲ್ಲಪ್ಪ ಅವರ ಧ್ವನಿ ಕೇಳಿ ಪಕ್ಕದ ಮನೆಯಲ್ಲದ್ದ ಸಿಪಿಐ ಧಾವಿಸಿದ್ದು, ಕೂಡಲೇ ವಿಜಯಲಕ್ಷ್ಮಿ ಅವರನ್ನು ನೇಣಿನಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.
ಪಿಎಸ್ ಐ ಮಲ್ಲಪ್ಪ ಎಸ್ ಹೂಗಾರ ಮತ್ತು ವಿಜಯಲಕ್ಷ್ಮಿ ಅವರಿಗೆ 6 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.












Click it and Unblock the Notifications