ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗ ಸೂತ್ರಗಳನ್ನು ರಚಿಸಿದ ಮಹರ್ಷಿ ಜೀವಸಿದ್ಧಿ ಪತಂಜಲಿ

By ಜಗದೀಶ ವಡ್ಡಿನ, ಕಾರವಾರ
|
Google Oneindia Kannada News

ಕಾರವಾರ, ಜೂನ್.21: ಪ್ರಾಚೀನ ಭಾರತದ ಋಷಿಗಳು ಧ್ಯಾನ ಅಥವಾ ತಪಸ್ಸಿನಲ್ಲಿ ಮಗ್ನರಾಗಲು ವಿಶಿಷ್ಟ ಭಂಗಿಗಳಲ್ಲಿ ಕುಳಿತುಕೊಳ್ಳುವುದನ್ನು, ನಿಂತುಕೊಳ್ಳುವುದನ್ನು ಅಭ್ಯಾಸ ಮಾಡುತ್ತಿದ್ದರು. ದೇಹಕ್ಕೆ ಅನುಕೂಲವಾಗಿ ಸುಲಭವಾಗಿ ಏಕಾಗ್ರತೆ ಸಾಧಿಸಲು ಅವರ ದೇಹ ಭಂಗಿ ಸರಿಹೋಗುತ್ತಿತ್ತು.

ಯೋಗಾಸನಗಳು ರೂಪಗೊಂಡದ್ದು ಹೀಗೆ... ಕ್ರಿಸ್ತ ಪೂರ್ವ ಎರಡನೇಯ ಶತಮಾನದ ಸುಮಾರಿಗೆ ಜೀವಸಿದ್ಧಿ ಪತಂಜಲಿ ಎನ್ನುವ ಮಹರ್ಷಿ ಈ ವಿದ್ಯೆಯ ವಿವರಗಳನ್ನೆಲ್ಲ ಕ್ರೂಢಿಕರಿಸಿ ಯೋಗ ಸೂತ್ರಗಳನ್ನು ರಚಿಸಿದರು.

ಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವ

ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆ ಒಳಗೊಂಡಿರುತ್ತದೆ. ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ನೆರವೇರಿಕೆ, ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಾಮರಸ್ಯ, ಆರೋಗ್ಯ ಮತ್ತು ಯೋಗ ಕ್ಷೇಮದ ಸಮಗ್ರ ವಿಧಾನ.

ಇದು ವ್ಯಾಯಾಮದ ಬಗ್ಗೆ ಅಲ್ಲ. ಆದರೆ ನಿಮ್ಮೊಂದಿಗಿರುವ ಏಕತೆ, ಪ್ರಪಂಚ ಮತ್ತು ಸ್ವಭಾವದ ಅರ್ಥವನ್ನು ಕಂಡುಹಿಡಿಯುವುದು. ನಮ್ಮ ಜೀವನ ಶೈಲಿಯನ್ನು ಬದಲಿಸುವ ಮೂಲಕ ಮತ್ತು ಪ್ರಜ್ಞೆಯನ್ನು ಸೃಷ್ಟಿಸುವ ಮೂಲಕ ಅದು ಚೆನ್ನಾಗಿರುವುದು.

 ಪತಂಜಲಿ ಆಧುನಿಕ ಯೋಗದ ಪಿತಾಮಹ

ಪತಂಜಲಿ ಆಧುನಿಕ ಯೋಗದ ಪಿತಾಮಹ

ಪತಂಜಲಿಯವರು ಆಧುನಿಕ ಯೋಗದ ಪಿತಾಮಹ ಎಂದು ಕೆಲ ಇತಿಹಾಸಕಾರರು ಹೇಳುತ್ತಾರೆ. 5ನೇ ಶತಮಾನದ ವೇಳೆಗೆ ಕ್ರಿ. ಪೂ. ಯೋಗವು ಬಹಳ ಪ್ರಸಿದ್ಧವಾಯಿತು ಮತ್ತು ವೈದಿಕ ಗ್ರಂಥಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು.

ಯೋಗ ಎನ್ನುವುದು ಒಂದು ಸಂಸ್ಕೃತ ಪದವಾಗಿದ್ದು, ಮೂಲ ಪದ ಯುಜದಿಂದ ಬರುತ್ತದೆ ಮತ್ತು ಮೂಲತಃ ಅದನ್ನು ಹಿಡಿದಿಡಲು ಒಗ್ಗೂಡಿಸುವ ವಿಧಾನವಾಗಿದೆ.

 ಯೋಗದಿಂದಲೇ ಆರೋಗ್ಯ

ಯೋಗದಿಂದಲೇ ಆರೋಗ್ಯ

ಇಂದಿನ ಜೀವನದ ಕ್ರಮದಲ್ಲಿ ಸದಾ ಒತ್ತಡ, ಅಸಹಿಷ್ಣತೆ, ಅನಗತ್ಯ ಗೊಂದಲದಲ್ಲಿರುವ ಇಂದಿನ ಯುವಕರಿಗೆ ಯೋಗದಿಂದಲೇ ಆರೋಗ್ಯ ಎನ್ನುವ ಸಂಗತಿ ಮನದಟ್ಟಾಗಿದೆ. ಯೋಗಕ್ಕೆ, ಯೋಗ ಕ್ರಿಯೆಯ ಸಕಾರಾತ್ಮಕ ಪರಿಣಾಮಗಳ ಬಗೆಗಿನ ಅರಿವಿನಿಂದ ಕಳೆದ 10 ರಿಂದ 15 ವರ್ಷಗಳಿಂದಿಚೆಗೆ ಯೋಗ ಹಂತ ಹಂತವಾಗಿ ಬದಲಾಗಿದೆ.

ಅಂತರ್ಜಾಲದ ಮುಖಾಂತರ ಜಗತ್ತು ಹತ್ತಿರವಾದಂತೆ ಯೋಗವೂ ತನ್ನನ್ನು ಮತ್ತುಷ್ಟು ತೆರೆದುಕೊಂಡಿದೆ. ಮುಖ್ಯವಾಗಿ ಇಂದಿನ ಯುವಕರಲ್ಲಿ ಆರೋಗ್ಯದ ಅರಿವು ಹೆಚ್ಚಿದೆ. ಇದರಿಂದಾಗಿ ಯುವಕರು ಯೋಗಾಭ್ಯಾಸಕ್ಕೆ ಮುಂದಾಗಿದ್ದಾರೆ. "A photographer gets people to pose for him. A yoga instructor gets people to pose for themselves"

 ಮನಸ್ಸು ಹತೋಟಿಯಲ್ಲಿರುತ್ತದೆ

ಮನಸ್ಸು ಹತೋಟಿಯಲ್ಲಿರುತ್ತದೆ

ಜೀವನದ ಚಟುವಟಿಕೆಗಳು ನಮಗೆ ತಿಳಿದೇ ನಡೆಯಬಹುದು, ತಿಳಿಯದೆಯೇ ನಡೆಯಬಹುದು. ಇದನ್ನೆಲ್ಲ ಹತೋಟಿಯಲ್ಲಿಟ್ಟು ಮನಸು ಚಂಚಲವಾಗಿದೆ. ನಿರ್ಮಲವಾಗಿದ್ದಾಗ, ದೇವರು ಮತ್ತು ಆತ್ಮದ ನಿಜಸ್ವರೂಪವನ್ನು ತಿಳಿಯಲು ಸಹಾಯ ಮಾಡುವ ವಿದ್ಯೆ ಯೋಗವಿದ್ಯೆ.

ದೇವರನ್ನು ಸೇರಲು, ಆತ್ಮವನ್ನು ಅರಿಯಲು ನಮ್ಮ ದೇಹದ ಮೇಲೂ ಮನಸ್ಸಿನ ಮೇಲೂ ಹತೋಟಿ ಇರಬೇಕು; ಮನಸ್ಸನ್ನು ಅತ್ತಿತ್ತ ಹೋಗಗೊಡದೆ ಒಂದೇ ವಿಷಯ ಯೋಚಿಸುವಂತೆ ಮಾಡಬೇಕು ಎಂದು ನಮ್ಮ ಹಿರಿಯರು ಭಾವಿಸಿದ್ದರು.

ಇದು ಯೋಗವಿದ್ಯೆಯಿಂದ ಮಾತ್ರ ಸಾಧ್ಯ "Yoga teaches us to cure what need not be endured and endure what cannot be cured".

 ಎಂಟು ಹಂತಗಳಿವೆ

ಎಂಟು ಹಂತಗಳಿವೆ

ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ.

ಯಮವೆಂದರೆ - ಇಂದ್ರಿಯಗಳನ್ನು ಬಿಗಿಹಿಡಿಯುವುದು, ಕೆಲವು ಬಗೆಯ ಆಹಾರ, ಅಭ್ಯಾಸಗಳು ಇವನ್ನು ಬಿಟ್ಟು ಬಿಡುವುದು.

ನಿಯಮವೆಂದರೆ - ಪಾಲನೆ, ಅನುಷ್ಠಾನ, ಮನಸ್ಸಿನ ಪ್ರವೃತ್ತಿಗಳಿಗೆ ಸಂಬಂಧಿಸಿದ ವಿಧಿನಿಯಮಗಳು.

ಆಸನವೆಂದರೆ - ದೇಹದ ಭಂಗಿ, ವಿನ್ಯಾಸ, ಅಂಗವಿನ್ಯಾಸ, ಸ್ಥರಿವಾಗಿಯು ಸುಖವಾಗಿಯೂ ಇರಬೇಕು, ಆಸನ.

ಪ್ರಾಣಾಯಾಮ - ಉಸಿರಾಟದ ಮೇಲಿನ ಹತೋಟಿ, ಒಳಗೆಳೆದುಕೊಂಡು ಉಸಿರನ್ನು ದೀರ್ಘಕಾಲ ಬಿಗಿಹಿಡಿಯುವುದು.

ಪ್ರತ್ಯಾಹಾರ - ಇಂದ್ರೀಯಗಳನ್ನು ಅವುಗಳ ಹೊರಗಿನ ಕೆಲಸದಿಂದ ಹಿಂದಕ್ಕೆ ಸೆಳೆದು ಮನಸ್ಸಿನ ವಿವರಗಳನ್ನು ಒಂದೆಡೆಕೂಡಿಸುವುದು.

ಧ್ಯಾನ - ಏಕಮಾನಸ್ಸಿನಿಂದ ಚಿತ್ತವೃತ್ತಿಗಳನ್ನು ಕೇಂದ್ರೀಕರಿಸುವುದು.

ಧಾರಣ - ಈ ಧ್ಯಾನವನ್ನು ಹಿಡಿದು, ಅದು ಹೆಚ್ಚುವಂತೆ ಮಾಡುವುದು.

ಸಮಾಧಿ - ಹೊರಗಿನ ಎಲ್ಲ ಚಟುವಟಿಕೆಗಳ ಸಂಪರ್ಕವನ್ನು ಬಿಟ್ಟು ಮನಸ್ಸಿನ ಎಲ್ಲ ನೆಲೆಗಳನ್ನೂ ವಿವರಗಳನ್ನೂ ತನ್ನೊಳಗೇ ಇಡುವುದು.

ಯೋಗವಿದ್ಯೆಯಿಂದ ದೇಹ, ಮನಸ್ಸು ಎರಡು ಸಮಸ್ಥಿತಿಗೆ, ಕುಶಲ ಸ್ಥಿತಿಗೆ ಬರುತ್ತದೆ. ಹೊರಗಿನ ಪ್ರಪಂಚದ ಒತ್ತಡ ನಮ್ಮ ಮೇಲೆ ಇರದೆ, ನಾವು ಸ್ವಾತಂತ್ರವಾಗಿ ವ್ಯವಹರಿಸಲು ಶಕ್ತರಾಗಿರುತ್ತೇವೆ.

ಎಂಥ ಕಷ್ಟದ ಸ್ಥಿತಿಯಲ್ಲೂ ಮನಸ್ಸು ಉದ್ವಿಗ್ನವಾಗದೆ, ಶಾಂತವಾಗಿರುವುದೇ ಯೋಗ ವಿದ್ಯೆಯ ಮೊದಲ ಪ್ರಯೋಜನ; ಪರಮಾರ್ಥದೊಂದಿಗೆ ಬೆರೆಯುವುದು ಯೋಗವಿಧ್ಯಯ ಅಂತಿಮ ಧ್ಯೇಯ. "The most important pieces of equipment you need for doing yoga are your body and your mind".

ಫಿಸಿಕಲ್ ಮತ್ತು ಸೈಕೋಲಾಜಿಕಲ್ ಫಿಟನೆಸ್ ಗೆ ಯೋಗ ಅತ್ಯವಶ್ಯ. ಮಾನಸಿಕ ಸ್ಥಿರತೆ ಸಾಧಿಸದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ.

English summary
Yoga is a precious gift of ancient Indian tradition. It involves the unity of mind and body. Created yoga formulas credited goes to Maharshi jivasiddi Patanjali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X