• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೀನುಗಾರಿಕೆಗೆ 2 ತಿಂಗಳು ಮಾತ್ರ ಬಾಕಿ! ಮೀನುಗಾರರಿಗೆ ‘ಕೊರೊನಾ’ ಬರೆ

|

ಕಾರವಾರ, ಏಪ್ರಿಲ್ 04: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ವಿಧಿಸಲಾಗಿದ್ದು, ಮೀನುಗಾರಿಕೆಯನ್ನು ಸ್ಥಗಿತ ಮಾಡಲಾಗಿದೆ. ಮೀನುಗಾರರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

   7 ತಿಂಗಳ ಕೊರೊನಾ ಸೋಂಕಿತ ಮಗಿವಿನ ಜೊತೆ ವೈದ್ಯರು ಹೇಗೆ ನಡೆದುಕೊಂಡಿದ್ದಾರೆ ನೋಡಿ

   ಈ ಬಾರಿ ಜಿಲ್ಲೆಯಲ್ಲಿ ಮೀನುಗಾರಿಕೆ ಪ್ರಾರಂಭವಾದ ನಂತರ ಎದುರಾದ ಹವಾಮಾನ ವೈಪರೀತ್ಯದಿಂದ ಹಲವು ದಿನಗಳ ಕಾಲ ಮೀನುಗಾರಿಕೆ ಮಾಡಲಾಗದೆ ಬೋಟ್ ಗಳನ್ನು ಬಂದರಿನಲ್ಲಿ ಲಂಗರು ಹಾಕಿಡುವಂತಾಗಿತ್ತು. ಮೀನುಗಾರಿಕೆ ಪ್ರಾರಂಭವಾದ ನಂತರವೂ ಮೀನು ಸರಿಯಾಗಿ ಬಲೆಗೆ ಬೀಳದೆ ಮತ್ಸ್ಯಕ್ಷಾಮ ಎದುರಾಗಿತ್ತು. ಇದೀಗ ಲಾಕ್ ಡೌನ್ ಮೀನುಗಾರರಿಗೆ ಮತ್ತಷ್ಟು ಸಮಸ್ಯೆಗಳನ್ನು ತಂದಿಟ್ಟಿದೆ.

   ಅವಧಿಗೆ ಮುನ್ನವೇ ಎದುರಾಗಿದೆ ಮತ್ಸ್ಯಕ್ಷಾಮ; ಕಂಗಾಲಾಗಿರುವ ಕಡಲ ಮಕ್ಕಳು

    ಮೀನಿನ ಶಿಕಾರಿಯಿಂದ ಆದಾಯ ನಿರೀಕ್ಷಿಸಿದ್ದ ಮೀನುಗಾರರು

   ಮೀನಿನ ಶಿಕಾರಿಯಿಂದ ಆದಾಯ ನಿರೀಕ್ಷಿಸಿದ್ದ ಮೀನುಗಾರರು

   ಮೀನುಗಾರರು ಮಾಡಿದ ಸಾಲದ ಬಡ್ಡಿ ಕಟ್ಟಲೂ ಆಗದೇ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಸದ್ಯ ಈ ವರ್ಷದ ಮೀನುಗಾರಿಕೆ ಮುಗಿಯಲು ಇನ್ನು ಎರಡು ತಿಂಗಳು ಮಾತ್ರ ಉಳಿದಿದೆ. ಇರುವ ಅವಧಿಯಲ್ಲಾದರೂ ಸ್ವಲ್ಪ ಮೀನಿನ ಶಿಕಾರಿ ಮಾಡಿ ಆದಾಯ ಗಳಿಸಿಕೊಳ್ಳೋಣ ಎಂದು ಅಂದುಕೊಂಡ ಮೀನುಗಾರರಿಗೆ ಕೊರೋನಾ ಆಘಾತ ತಂದೊಡ್ಡಿದೆ.

    ಈ ವರ್ಷದ ಮೀನುಗಾರಿಕೆಯೇ ಬಂದ್ ಆಗುವ ಭೀತಿ

   ಈ ವರ್ಷದ ಮೀನುಗಾರಿಕೆಯೇ ಬಂದ್ ಆಗುವ ಭೀತಿ

   ಮೀನುಗಾರಿಕಾ ಬೋಟಿನಲ್ಲಿ ಗುಂಪಾಗಿ ತೆರಳುತ್ತಾರೆ ಎನ್ನುವ ಕಾರಣ ನೀಡಿ ಮೀನುಗಾರಿಕೆ ಸ್ಥಗಿತ ಮಾಡಿರುವುದರಿಂದ ಮತ್ತೆ ಬೋಟ್ ಗಳನ್ನು ಲಂಗರು ಹಾಕಿ ನಿಲ್ಲಿಸಲಾಗಿದೆ. ಕೆಲವು ಬೋಟ್ ಮಾಲೀಕರು ಬೋಟ್ ನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸಂಬಳ ಕೊಡದಂತಾಗಿದ್ದು, ಹದಿನೈದು ದಿನ ಮೀನುಗಾರಿಕೆ ಬಂದ್ ಮಾಡಿದರೆ ಈ ವರ್ಷದ ಮೀನುಗಾರಿಕೆಯೇ ಬಂದ್ ಆದಂತಾಗುತ್ತದೆ ಎನ್ನುವುದು ಮೀನುಗಾರರ ಅಭಿಪ್ರಾಯ.

   ಕರಾವಳಿ ಮೀನುಗಾರರ ಬೇಡಿಕೆಗೆ ಸಚಿವರು ಏನಂದರು?

    ಗೋವಾ ಮೀನು ಮಾರಾಟಕ್ಕೆ ಅವಕಾಶ

   ಗೋವಾ ಮೀನು ಮಾರಾಟಕ್ಕೆ ಅವಕಾಶ

   ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಮೀನುಗಾರಿಕೆಯನ್ನು ಸ್ಥಗಿತ ಮಾಡಲಾಗಿದೆ. ಆದರೆ, ಬುಧವಾರ ಗೋವಾ ರಾಜ್ಯದಲ್ಲಿ ಹಿಡಿದ ಮೀನನ್ನು ಅಳ್ನಾವರ ಮಾರ್ಗವಾಗಿ ಜಿಲ್ಲೆಯ ವಿವಿಧ ಭಾಗಕ್ಕೆ ತಂದು ಮಾರಾಟ ಮಾಡಲಾಗಿದೆ. ಇದನ್ನು ಇಲ್ಲಿನ ಮೀನುಗಾರರು ಪ್ರಶ್ನೆ ಮಾಡಿದ್ದಾರೆ.

    ಮೀನು ಮಾರಾಟಕ್ಕೆ ಅವಕಾಶ ಕೊಟ್ಟಿದ್ದು ಯಾರು?

   ಮೀನು ಮಾರಾಟಕ್ಕೆ ಅವಕಾಶ ಕೊಟ್ಟಿದ್ದು ಯಾರು?

   ‘ನಮ್ಮಲ್ಲಿ ಮೀನುಗಾರಿಕೆ ಬಂದ್ ಮಾಡಿ ಗೋವಾ ಮೀನುಗಳನ್ನು ಇಲ್ಲಿಗೆ ತಂದು ಮಾರಾಟ ಮಾಡಲು ಯಾರು ಅವಕಾಶ ಕೊಟ್ಟಿದ್ದಾರೆ. ಅನುಮತಿ ಕೊಟ್ಟಿದ್ದರೆ ನಮ್ಮ ರಾಜ್ಯದವರೇ ಮೀನುಗಾರಿಕೆ ಮಾಡಿ ನಮ್ಮಲ್ಲಿಯೇ ಮಾರಾಟ ಮಾಡುತ್ತಿದ್ದೆವು' ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   English summary
   Fishing is stopped in karwar due to coronavirus lockdown. This affects fishermen in karwar very badly, they couldnt,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X