ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ವಿರುದ್ಧ ದೂರು ದಾಖಲು

ಕಾರವಾರ ಮೇ 14 : ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಕಾರವಾರ ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಸತೀಶ್ ಸೈಲ್ ವಿರುದ್ಧ ದೂರು ದಾಖಲಾಗಿದೆ.
ಮೇ 11 ರಂದು ಸತೀಶ್ ಸೈಲ್ ಆಪ್ತ ಮಂಗಲದಾಸ್ ಕಾಮತ್ ಅವರ ಅಂಕೋಲಾದ ಅವರ್ಸಾದ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ಮನೆಯ ಬಳಿ ಬಂದಿದ್ದ ಸತೀಶ್ ಸೈಲ್ ಅವರ ಕಾರು ತಪಾಸಣೆ ಮಾಡಲು ಮುಂದಾದ ವೇಳೆ ಐಟಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎನ್ನಲಾಗಿದ್ದು, ಕಾರನ್ನು ತಪಾಸಣೆ ಮಾಡದಂತೆ ಐಟಿ ಅಧಿಕಾರಿಗಳಿಗೆ ಹೇಳಿ ಕಾರನ್ನು ಮುಂದಕ್ಕೆ ಚಲಾಯಿಸಿಕೊಂಡು ಸೈಲ್ ಹೋಗಿದ್ದರಂತೆ.

ಈ ಹಿನ್ನಲೆಯಲ್ಲಿ ಗೋವಾ ಐಟಿ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಬಾಬು ಸಾಹೇಬ್ ನಾರ್ವ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 353 ಹಾಗೂ 506 ಅಡಿಯಲ್ಲಿ ಸತೀಶ್ ಸೈಲ್ ವಿರುದ್ಧ ದೂರು ದಾಖಲಾಗಿದೆ.

complaint has been registered against Congress candidate Satish Sail

2013 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಸತೀಶ್ ಸೈಲ್ 80,727 ಮತಗಳನ್ನು ಪಡೆದು ಬಿಜೆಪಿಯ ಆನಂದ್ ಅಸ್ನೋಟಿಕರ್ (44,847) ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರೇ ಗೆಲ್ಲುತ್ತಾರೆಯೇ? ಕಡಲ ಕಿನಾರೆ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+