ಮಧ್ಯೆ ಸಮುದ್ರದಲ್ಲಿ ಒಡೆದ ಬೋಟ್: ಮೀನುಗಾರರು ಪಾರಾಗಿದ್ದೇ ರೋಚಕ..!
ಕಾರವಾರ, ಜನವರಿ 17: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್ ಒಡೆದು ಮುಳುಗುತ್ತಿದ್ದ ಬೋಟ್ ಹಾಗೂ 7 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಕಾರವಾರ ಗೋವಾ ಗಡಿಭಾಗದ ಅರಬ್ಬಿ ಸಮುದ್ರದಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಮಂಗಳೂರಿನಿಂದ ಕಳೆದ ಮೂರು ದಿನಗಳ ಹಿಂದೆ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ರಾಯಲ್ ಬ್ಲ್ಯೂ ಹೆಸರಿನ ಮೀನುಗಾರಿಕಾ ಬೋಟ್ ಗೋವಾದ ಬೈತೊಲ್ ಬಳಿ ಆಳ ಸಮುದ್ರದಲ್ಲಿ ಬುಧವಾರ ಮುಂಜಾನೆ ಗಾಳಿ ರಭಸಕ್ಕೆ ಬೋಟ್ ತಳಭಾಗ ಒಡೆದು ಒಳಭಾಗಕ್ಕೆ ನೀರು ನುಸುಳಲಾರಂಭಿಸಿತ್ತು. ಬಳಿಕ ಮೀನುಗಾರರು ನೀರನ್ನು ಹೊರ ಹಾಕಿದ್ದರಾದರೂ ನೀರು ತುಂಬುತ್ತಿದ್ದ ಕಾರಣ ಮುಳುಗಡೆ ಭೀತಿಯಲ್ಲಿತ್ತು.

ತಕ್ಷಣ ಮೀನುಗಾರರು ಮಾಲಿಕರು, ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಬಳಿಕ ನೆರವಿಗೆ ದಾವಿಸಿದ ಏಷ್ಯನ್ ಬ್ಲ್ಯೂ, ಬ್ಲಾಕ್ ಬೆರಿ, ವೈಟ್ ಆರ್ಬಿಟ್, ಸಿ ಪ್ರಿನ್ಸ್, ಸಿ ಹಂಟರ್ ಹೆಸರಿನ ಬೋಟಗಳ ಮೀನುಗಾರರು ನೆರವಿಗೆ ದಾವಿಸಿದ್ದರು. ಕೊನೆಗೆ ಎರಡು ಬೋಟ್‌ಗಳಿಗೆ ಬೋಟ್ ಕಟ್ಟಿಕ್ಕೊಂಡು ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ನೆರವಿನೊಂದಿಗೆ ಕಾರವಾರ ಬಂದರಿಗೆ ಏಳೆದು ತರಲಾಗಿದೆ.
ಅಲ್ಲದೇ ಬೋಟ್‌ನಲ್ಲಿದ್ದ ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದು, ಬೋಟ್ ಹಾನಿಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರಕ್ಷಣೆಗೆ ತೆರಳಿದ ಬೋಟ್‌ನಲ್ಲಿದ್ದ ಗಣೇಶ್ ಎನ್ನುವವರು ಮಾಹಿತಿ ನೀಡಿದ್ದಾರೆ.

ಕುಶಾಲನಗರದಲ್ಲಿ ಭೀಕರ ಅಪಘಾತ: ವ್ಯಕ್ತಿ ಸಾವು
ಕೊಡಗು: ಒಮ್ನಿ ಕಾರು ಹಾಗೂ ಬೊಲೆರೋ ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಕುಶಾಲನಗರ ಸಮೀಪದ ಆನೆಕಾಡು ಬಳಿ ನಡೆದಿದೆ. ದೇವಯ್ಯ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯು ಮೂಲತಃ ಮಡಿಕೇರಿ ಸಮೀಪದ ಕಾಲೂರು ನಿವಾಸಿಯಾಗಿದ್ದು, ಮಡಿಕೇರಿಯಿಂದ ನಾಮಕರಣ ಮುಗಿಸಿ ಹೋಗುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾದ ಕಾರಿನಲ್ಲಿದ್ದ ಓರ್ವ ಮಗು ಸೇರಿ ನಾಲ್ವರಿಗೆ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರಗೆ ರವಾನಿಸಲಾಗಿದೆ. ಅಪಘಾತ ವಿಷಯ ತಿಳಿದ ಕೂಡಲೇ ಕುಶಾಲನರ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications