ಮತ್ತೆ ಮಳೆ; ರದ್ದಾಯ್ತು ಸಿಎಂ ಯಡಿಯೂರಪ್ಪ ಕಾರವಾರ ಪ್ರವಾಸ

ಕಾರವಾರ, ಆಗಸ್ಟ್ 31: ಮಳೆಯಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇಂದಿನ ಕಾರವಾರ ಪ್ರವಾಸ ರದ್ದಾಗಿದೆ.

ಮಳೆಯ ಕಾರಣದಿಂದಾಗಿ ಹೆಲಿಕಾಪ್ಟರ್ ಇಳಿಯಲು ಅನನುಕೂಲ ವಾತಾವರಣವಿರುವುದರಿಮದ ಸಿಎಂ ಶಿವಮೊಗ್ಗದಿಂದ ನೇರವಾಗಿ ಹಾವೇರಿಗೆ ಪ್ರವಾಸ ಬೆಳೆಸಲಿದ್ದಾರೆ. ಕಾರವಾರಕ್ಕೆ ಸಿಎಂ ಬರುತ್ತಾರೆ ಎಂದು ಪೊಲೀಸರು, ಜಿಲ್ಲಾಡಳಿತ ಎಲ್ಲ ವ್ಯವಸ್ಥೆಗಳನ್ನು ಮಾಡಿತ್ತು. ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ಬೆಳಿಗ್ಗಿನಿಂದ ಕಾದು ಕುಳಿತಿದ್ದರು. ಕೊನೆಗೂ ಸಿಎಂ ಬರದೇ ಹಾವೇರಿಗೆ ತೆರಳಿರುವುದರಿಂದ ಎಲ್ಲರಿಗೂ ನಿರಾಸೆ ಉಂಟು ಮಾಡಿದೆ.

CM Visit To Karwar Cancelled Due To Rain

ಈ ಮೊದಲು ಕುಮಟಾ, ನಂತರ ಕಾರವಾರ ಎಂದು ಸಿಎಂ ಪ್ರವಾಸದ ವೇಳಾಪಟ್ಟಿ ನಿಗದಿಯಾಗಿತ್ತು. ಈ‌ ಪಟ್ಟಿ ಕೂಡ ಕೊನೆ ಕ್ಷಣದಲ್ಲಿ ಬದಲಾಗಿ ಕಾರವಾರ ಪ್ರವಾಸವನ್ನು ಮಾತ್ರ ಇಡಲಾಗಿತ್ತು. ಇದೀಗ ಈ ಪ್ರವಾಸವೂ ರದ್ದುಗೊಂಡಿದೆ. ಆದರೆ, ಈವರೆಗೂ ಅಧಿಕೃತವಾಗಿ ಪ್ರವಾಸ ರದ್ದಾದ ಬಗ್ಗೆ ಘೋಷಣೆ ಆಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+