ವಿವಾದಾತ್ಮಕ ಹೇಳಿಕೆಯಿಂದ ಅನಂತ್ ಕುಮಾರ್ ಹೆಗಡೆ ಮತ್ತೆ ಮುನ್ನೆಲೆಗೆ : ಬಿಜೆಪಿಯಲ್ಲೂ ಹೆಚ್ಚಿದ ಅಸಮಾಧಾನ
ಕಾರವಾರ, ಜನವರಿ 16: ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೆ ವಿವಾದಾತ್ಮಕ ಹೇಳಿಕೆ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೋವಿಡ್, ವಿಧಾನಸಭಾ ಚುನಾವಣೆ ಸೇರಿದಂತೆ ಸ್ವತಃ ಪ್ರಧಾನಿಯೇ ಜಿಲ್ಲೆಗೆ ಆಗಮಿಸಿದ್ದರೂ ಕಾಣಿಸಿಕೊಳ್ಳದ ಅನಂತ್ ಕುಮಾರ್ ಹೆಗಡೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಓಡಾಟ ಆರಂಭಿದ್ದಾರೆ.
ಸಂಸದ ಅನಂತ ಕುಮಾರ್ ಹೆಗಡೆ ಮತ್ತೆ ತಮ್ಮ ವಿವಾಧಾತ್ಮಕ ಹೇಳಿಕೆಗಳ ಮೂಲಕ ಪ್ರಚಾರ ಗಿಟ್ಟಿಸಿಕ್ಕೊಳ್ಳುತ್ತಿರುವುದು ಕಾಂಗ್ರೆಸ್ ನಾಯಕರ ಆಕ್ರೋಶದ ಜೊತೆಗೆ ಸ್ವತಃ ಕೆಲ ಬಿಜೆಪಿಗರ ಅಸಮಾಧಾನಕ್ಕೂ ಕಾರಣವಾಗಿದೆ. ಆರು ಭಾರಿ ಸಂಸದರಾಗಿರುವ ಅನಂತ್ ಕುಮಾರ್ ಹೆಗಡೆ ಕಳೆದ ಲೋಕಸಭಾ ಚುನಾವಣೆ ವೇಳೆಯೇ ತಾವೂ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಕೊನೆ ಗಳಿಗೆಯಲ್ಲಿ ಮತ್ತೆ ಸ್ಪರ್ಧಿಸಿ ಗೆದ್ದು ಬೀಗಿದ, ಬಳಿಕ ಒಂದೆರಡು ವರ್ಷ ಸಾರ್ವಜನಿಕವಾಗಿ ಕಾಣಿಸಿಕೊಂಡು ನಾಪತ್ತೆಯಾಗಿದ್ದರು.

ಕೋವಿಡ್, ಭೀಕರ ಪ್ರವಾಹ, ಗುಡ್ಡ ಕುಸಿತ ಸೇರಿದಂತೆ ಜಿಲ್ಲೆಯಲ್ಲಿ ಅದೇಷ್ಟೋ ದೊಡ್ಡ ಅನಾಹುತ ಸಂಭವಿಸಿದರು ಕೂಡ ಅನಂತ್ ಕುಮಾರ್ ಹೆಗಡೆ ಮಾತ್ರ ಕಾಣಿಸಿಕೊಂಡಿರಲಿಲ್ಲ. ಮಾತ್ರವಲ್ಲದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಅಂಕೋಲಾಗೆ ಆಗಮಿಸಿದ್ದರೂ ಸಂಸದರು ಮಾತ್ರ ಗೈರಾಗಿದ್ದರು. ಅಲ್ಲದೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಆದರೆ ಇದೀಗ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಇರುವಾಗ ಜಿಲ್ಲೆಯಲ್ಲಿ ಸಂಚಾರ ನಡೆಸುತ್ತಿರುವ ಅನಂತ್ ಕುಮಾರ್ ಹೆಗಡೆ ವಿವಾಧಾತ್ಮಕ ಹೇಳಿಕೆಗಳನ್ನು ನೀಡಿ ಆ ಮೂಲಕ ಪ್ರಚಾರ ಗಿಟ್ಟಿಸಿಕ್ಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂರ್ಖ ರಾಮಯ್ಯ ಎಂದು ಏಕವಚನದಲ್ಲಿ ನಿಂದಿಸಿದ್ದಲ್ಲದೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಶಾಪವಿದೆ ಎಂದಿದ್ದಾರೆ. ಅಲ್ಲದೆ ಬಾಬ್ರಿಮಸಿದಿ ನಿರ್ನಾಮವಾದಂತೆ ಹಿಂದೂ ದೇವಸ್ಥಾನದ ಕುರುಹುಗಳಿರುವ ಮಸಿದಿಗಳು ನಿರ್ನಾಮವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಈ ಹಿಂದೆಯೂ ಚುನಾವಣೆ ವೇಳೆ ಮುಸ್ಲೀಂ ಮತವೇ ಬೇಡ ಎಂದಿದ್ದ ಅವರು ಬಳಿಕ ಎಲ್ಲಿವರೆಗೆ ಇಸ್ಲಾಂ ಇರುತ್ತದಯೋ ಅಲ್ಲಿವರೆಗೂ ಭಯೋತ್ಪಾದನೆ ಇರುತ್ತದೆ. ತಾವು ಬಂದಿರುವುದೇ ಸಂವೀಧಾನ ಬದಲಿಸುವುದಕ್ಕಾಗಿ ಎಂಬ ಹಲವು ರಿತಿಯ ವಿವದಾತ್ಮಕ ಹೇಳಿಕೆ ನೀಡಿದ್ದರು. ಆದರೆ ಇದೀಗ ಮತ್ತೆ ಅದೇ ಹಾದಿ ಹಿಡಿದಿರುವ ಅನಂತ್ ಕುಮಾರ್ ಹೆಗಡೆ ವಿರುದ್ಧ ಇದೀಗ ರಾಜ್ಯದಾದ್ಯಂತ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಬಿಜೆಪಿ ನಾಯಕರೂ ಕೂಡ ಇಂತಹ ಹೇಳಿಕೆಗಳ ಸಮರ್ಥನೆಗೆ ಮುಂದಾಗುತ್ತಿಲ್ಲ ಎನ್ನಲಾಗಿದೆ.

ಜಿಲ್ಲೆಯಲ್ಲಿಯೂ ಅನಂತ್ ಕುಮಾರ್ ಹೆಗಡೆ ಈ ಹೇಳಿಕೆಗಳು ಬಿಜೆಪಿಗರ ಒಳ ಬೇಗುದಿಗೂ ಕಾರಣವಾಗಿದೆ. ಮೂರು ವರ್ಷಗಳ ಕಾಲ ಮುಖ ತೋರಿಸದೇ ಇದೀಗ ಚುನಾವಣೆ ಸಮಯಕ್ಕೆ ಬಂದು ಈ ರಿತಿ ವಿವದಾತ್ಮಕ ಹೇಳಿಕೆ ನೀಡುತ್ತಿರುವುದು ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ನಾವು ಅವರನ್ನು ಸಮರ್ಥನೇ ಮಾಡಿಕ್ಕೊಂಡು ಮತ ಕೇಳುವುದಕ್ಕೂ ಸಾಧ್ಯವಿಲ್ಲ.
ಬಿಜೆಪಿಯಲ್ಲಿ ಅದೇಷ್ಟೋ ಸಮರ್ಥ ಆಕಾಂಕ್ಷಿಗಳಿದ್ದಾರೆ. ಜನರ ಪರ ಕೆಲಸ ಮಾಡುವ ಜನಪ್ರತಿನಿಧಿಗಳಿದ್ದಾರೆ. ಅನಂತ್ ಕುಮಾರ್ ಹೆಗಡೆ ನಿಂತರೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎನ್ನುವುದನ್ನು ನಮ್ಮವರು ಬಿಡಬೇಕು. ಇಂತಹ ಹೇಳಿಕೆ ನೀಡಿ ಗಮನ ಸೆಳೆಯುವವರಿಗೆ ಟಿಕೆಟ್ ನೀಡುವ ಬದಲು ಜನಸಮಾನ್ಯರಿಗೆ ಸ್ಪಂಧಿಸುವವರಿಗೆ ಈ ಭಾರಿ ಟಿಕೆಟ್ ನೀಡಬೇಕು ಎನ್ನುವುದು ಬಿಜೆಪಿ ಮುಖಂಡರೊಬ್ಬರ ಅಭಿಪ್ರಾಯವಾಗಿದೆ.
ದ್ವೇಷ ಮಾಡುವ ಸಮುದಾಯದವರೊಂದಿಗೆ ತಮ್ಮ ವ್ಯವಹಾರ ಹೊಂದಿರುವ ಅನಂತ್ ಕುಮಾರ್ ಹೆಗಡೆ ಜನರನ್ನು ತಪ್ಪು ದಾರಿಗೆ ಎಳೆದು ಆ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಹುನ್ನಾರ ನಡೆಸಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಈ ಕಾರಣದಿಂದ ಇಂತಹ ಹೇಳಿಕೆಗಳ ಮೂಲಕ ಹೈಕಮಾಂಡ್ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಂತಿದೆ. ಆದರೆ ಇಂತಹ ಹೇಳಿಕೆಗಳನ್ನು ಖಂಡಿಸುತ್ತೇವೆ. ಜನರೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಕಿಡಿಕಾರಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಅನಂತ್ ಕುಮಾರ್ ಹೆಗಡೆ ಹೇಳಿಕೆ ಬೆಂಬಲಿಸುವುದಕ್ಕಿಂತ ಹೆಚ್ಚಾಗಿ ವಿರೋಧಗಳು ಕೇಳಿಬರುತ್ತಿದೆ. ಸ್ವತಃ ಬಿಜೆಪಿಗರೂ ಕೂಡ ಇಂತಹ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಅನಂತ್ ಕುಮಾರ್ ಹೆಗಡೆ ಮಾತ್ರ ಹೇಳಿಕೆ ಸಮರ್ಥಿಸಿಕ್ಕೊಳ್ಳುತ್ತಿದ್ದು ಬಿಜೆಪಿ ಯಾವ ನಿರ್ಧಾರ ತೆಗೆದುಕ್ಕೊಳ್ಳಲಿದೆ ಎನ್ನುವುದು ಇದೀಗ ಕುತೂಹಲ ಹೆಚ್ಚಿಸಿದೆ.












Click it and Unblock the Notifications