ಮತ್ತೆ ಅಪಘಾತಕ್ಕೀಡಾದ ಅನಂತಕುಮಾರ ಹೆಗಡೆ ಕಾರು

ಕಾರವಾರ, ಮೇ 7: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಕಾರು ಮತ್ತೆ ಅಪಘಾತಕ್ಕೀಡಾಗಿದೆ. ಕುಮಟಾದ ದೀವಗಿ ಸೇತುವೆ ಬಳಿ ಅವರ ಕಾರು ಅಪಘಾತಕ್ಕೀಡಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಚಿವ ಅನಂತ್ ಕುಮಾರ್ ಹೆಗಡೆ ಶಿರಸಿಯಿಂದ ಕುಮಟಾಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಇನ್ನೋವಾ ಕಾರೊಂದು ಅನಂತ ಕುಮಾರ ಹೆಗಡೆಯವರ ಬೆಂಗಾವಲು ವಾಹನಕ್ಕೆ ಅಡ್ಡ ಬಂದಿದೆ. ಇದರಿಂದಾಗಿ ಬೆಂಗಾವಲು ವಾಹನದ ಚಾಲಕ ಒಂದೇ ಸಮನೆ ಬ್ರೇಕ್ ಹಾಕಿದ್ದಾನೆ.

Ananthkumar Hegde car accidentally crashes again

ಈ ವೇಳೆ ಅನಂತಕುಮಾರ ಹೆಗಡೆಯವರ ವಾಹನ ಮುಂದೆ ಚಲಿಸುತ್ತಿದ್ದ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಗಿದೆ. ಆದರೆ ಯಾವುದೇ ಗಂಭೀರ ಅವಘಡ ನಡೆದಿಲ್ಲ.

Ananthkumar Hegde car accidentally crashes again

ಕೆಲವು ದಿನಗಳ ಹಿಂದೆ ಇದೇ ರೀತಿ ಅವರ ಬೆಂಗಾವಲು ವಾಹನಕ್ಕೆ ಲಾರಿಯೊಂದು ಡಿಕ್ಕಿಯಾಗಿತ್ತು. ಇದಾದ ಬೆನ್ನಿಗೆ ಅನಂತ್ ಕುಮಾರ್ ಹೆಗಡೆ ತಮ್ಮ ಮೇಲೆ ಹತ್ಯೆ ಯತ್ನ ನಡೆದಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಕೊನೆಗೆ ಅದು ಬಿಜೆಪಿ ನಾಯಕರ ಆಪ್ತರಿಗೆ ಸೇರಿದ ಲಾರಿ ಎಂದು ಗೊತ್ತಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+