ರಾಜ್ಯಕ್ಕೆ ಸಾರಾಯಿ ಭಾಗ್ಯ ನೀಡಿದ್ದೇ ಸಿದ್ದರಾಮಯ್ಯ: ಅನಂತಕುಮಾರ್ ಟೀಕೆ
ಕಾರವಾರ, ಅಕ್ಟೋಬರ್ 21: 'ಅನಂತಕುಮಾರ್ ಹೆಗಡೆ ಬಾಯಿ ಬಿಟ್ಟ ಎಂದರೆ ಸಿದ್ದರಾಮಯ್ಯ, ಗುಂಡೂರಾವ್ ಗೆ ನಿದ್ರೆ ಬರುವುದಿಲ್ಲ' ಎಂದು ಸಂಸದ ಅನಂತಕುಮಾರ್ ಹೆಗಡೆ ಟೀಕಿಸಿದರು.
ದಾಂಡೇಲಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ರೇಷನ್ ಅಂಗಡಿಯಲ್ಲೂ ಸಾರಾಯಿ ಕೊಡಿ ಎಂದಿದ್ದು ಸಿದ್ದರಾಮಯ್ಯ. ರಾಜ್ಯಕ್ಕೆ ಸಾರಾಯಿ ಭಾಗ್ಯ ಯೋಜನೆ ಕೊಟ್ಟಿದ್ದೇ ಅವರು' ಎಂದು ವ್ಯಂಗ್ಯ ಮಾಡಿದರು.
'ರಾಮರಾಜ್ಯ ಕಲ್ಪನೆಯನ್ನು ಕೊಟ್ಟಿದ್ದು ಬಿಜೆಪಿ, ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಅಲ್ಲ. ಮಹಾತ್ಮ ಗಾಂಧಿ. ಆದರೆ, ಕಾಂಗ್ರೆಸ್‌ನ ಅಜೆಂಡಾದಲ್ಲಿ ರಾಮರಾಜ್ಯ ಕಲ್ಪನೆಯೇ ಇಲ್ಲ. ರಾಮರಾಜ್ಯ ಕಲ್ಪನೆ ಇಟ್ಟುಕೊಂಡವರು ಬಿಜೆಪಿಯವರು. ಗಾಂಧಿ ಹೆಸರಿನಲ್ಲಿ ಪ್ರತಿನಿತ್ಯ ಅವರನ್ನು ಅವಹೇಳನ ಮಾಡಿದ್ದು, ಹತ್ಯೆ ಮಾಡಿದ್ದು ಕಾಂಗ್ರೆಸ್ ಪಾರ್ಟಿ. ಗಾಂಧಿ, ಅಂಬೇಡ್ಕರ್, ಸಾವರ್ಕರ್ ಹೀಗೆ ದೇಶಕ್ಕೆ ಒಳ್ಳೆಯದನ್ನು ಮಾಡಿದವರನ್ನು ಬದಿಗಿಡುವ ಕೆಲಸ ಮಾಡಿದ್ದೂ ಕಾಂಗ್ರೆಸ್' ಎಂದು ಟೀಕಿಸಿದರು.
Recommended Video

'ಗಾಂಧಿಯವರು ನಾನೇಕೆ ಹಿಂದೂ ಎನ್ನುವ ಪುಸ್ತಕ ಬರೆದಿದ್ದಾರೆ, ಕಾಂಗ್ರೆಸ್ ನವರು ಅದನ್ನು ಓದಿದ್ರೆ ಎಲ್ಲರೂ ಕಾಳಿ ನದಿಯಲ್ಲಿ ಸ್ನಾನ ಮಾಡಿ ಹೋಗುತ್ತಾರೆ. ಪುಸ್ತಕ ಓದಿದ್ರು ಸಿದ್ದರಾಮಯ್ಯನ ತಲೆ ಬದಲಾಗುತ್ತದೆ ಅನ್ನುವ ವಿಶ್ವಾಸ ಖಂಡಿತ ನನಗಿಲ್ಲ. ಗಾಂಧೀಜಿಯ ಹೆಸರಿನಲ್ಲಿ ಸಮಾಜದ ತುಂಬಾ ಕೆಸರನ್ನು ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದ್ದು, ಈಗ ಕೆಸರು ಹಾಕಲೂ ಜಾಗ ಇಲ್ಲದೇ ಒಬ್ಬೊಬ್ಬರೇ ತಿಹಾರ್ ಜೈಲಿಗೆ ಹೋಗುತ್ತಿದ್ದಾರೆ' ಎಂದು ವ್ಯಂಗ್ಯ ಮಾಡಿದರು.












Click it and Unblock the Notifications