ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ಬಲೆಗೆ ಬಿದ್ದ ಅರಣ್ಯಾಧಿಕಾರಿ ಗಳಿಸಿದ್ದ ಆಸ್ತಿ ಎಷ್ಟು ಗೊತ್ತಾ?

By Nayana
|
Google Oneindia Kannada News

ಕಾರವಾರ, ಜು.21: ಭ್ರಷ್ಟಾಚಾರ ನಿಗ್ರಹ ದಳವು ಯಲ್ಲಾಪುರದ ವಲಯ ಅರಣ್ಯಾಧಿಕಾರಿ ಚಂದ್ರಕಾಂತ ಗೋಂವಿದ ನಾಯ್ಕ ಅವರ ಅಕ್ರಮ ಆಸ್ತಿಗಳಿರುವ ಐದು ಕಡೆಗಳಲ್ಲಿ ಶುಕ್ರವಾರ ದಾಳಿ ನಡೆಸಲಾಯಿತು.

ಅವರು ವಾಸವಿರುವ ಮನೆ, ಅಂಕೋಲ ತಾಲೂಕಿನ ಬೇಲೇಕೇರಿ ಗ್ರಾಮ, ಮಗಳು ವಾಸವಿರುವ ಕಾರವಾರ ತಾಲೂಕಿನ ಬಾಡ ಗ್ರಾಮ, ಅತ್ತೆ ವಾಸವರಿಉವ ಕಾರವಾರ ತಾಲೂಕಿನ ಮಾಜಾಳಿ, ವಲಯ ಅರಣ್ಯಾಧಿಕಾರಿಗಳ ಸರ್ಕಾರಿ ವಸತಿ ಗೃಹ, ಆಪಾಧಿತ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಲಾಯಿತು.

ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿಗೆ ಸಿಕ್ಕಿ ಬಿದ್ದ 7 ಅಧಿಕಾರಿಗಳುಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿಗೆ ಸಿಕ್ಕಿ ಬಿದ್ದ 7 ಅಧಿಕಾರಿಗಳು

ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಪತ್ತೆಯಾದ ಆರೋಪಿತ ಸರ್ಕಾರಿ ನೌಕರನ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳು ಇಂತಿವೆ. ಅಂಕೋಲಾ ತಾಲೂಕು ಬೇಲೇಕೇರಿ ಗ್ರಾಮದಲ್ಲಿ 1 ನಿವೇಶನ, ಕಾರವಾರದ ಬಾಡ ಗ್ರಾಮದಲ್ಲಿ 1 ನಿವೇಶನ ಹಾಗೂ ಎರಡು ಪ್ಲಾಟ್‌, ಚಿನ್ನ 698 ಗ್ರಾಂ, 1 ಟಾಟಾ ಇಂಡಿಗೊ ಕಾರು, 1 ಸ್ವಿಚಕ್ರ ವಾಹನ, 2.42 ಲಕ್ಷ ನಗದು, ಬ್ಯಾಂಕ್‌ ಖಾತೆಯಲ್ಲಿ 2 ಲಕ್ಷ, 74 ಸಾವಿರ ಠೇವಣಿ ಹಾಗೂ 8 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು ಕಂಡುಬಂದಿದೆ.

ACB raids four places belongs to RFO Naik

ತನಿಖೆ ಮುಂದುವರೆದಿದ್ದು, ಆರೋಪಿತ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಮಾಹಿತಿ ಸಂಗ್ರಹಣೆ ಮುಂದುವರೆದಿದೆ.

English summary
Anti Corruption Bureau had raidedat four places in Uttara Kannada district belonged to Range Forest Officer Chandrakant Naik and seized crores of worth property under Disproportionate Assets act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X