‘ಸುವರ್ಣತ್ರಿಭುಜ' ದೋಣಿ ಅವಶೇಷ ಮೇಲೆತ್ತಲು ಕೇಂದ್ರಕ್ಕೆ ಪತ್ರ: ಸಚಿವ ಪೂಜಾರಿ

ಕಾರವಾರ, ಡಿಸೆಂಬರ್ 25: 'ಸಮುದ್ರದಲ್ಲಿ ಮುಳುಗಡೆಯಾದ ಉತ್ತರ ಕನ್ನಡ ಜಿಲ್ಲೆಯ ಒಟ್ಟು ಏಳು ಮೀನುಗಾರರಿದ್ದ ಸುವರ್ಣ ತ್ರಿಭುಜ ಯಾಂತ್ರಿಕ ದೋಣಿಯ ಅವಶೇಷವನ್ನು ಮೇಲೆತ್ತಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು' ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡ ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, 'ಅವಶೇಷ ಮೇಲೆತ್ತುವುದರಿಂದ ಸಂತ್ರಸ್ತ ಕುಟುಂಬಕ್ಕೆ ಸಮಾಧಾನ ಸಿಗಲಿದೆ. ಈಗಾಗಲೇ ಈ ದೋಣಿ ದುರಂತದಲ್ಲಿ ಮೃತರಾದ ಕುಟುಂಬಗಳಿಗೆ ಪರಿಹಾರಗಳನ್ನು ನೀಡಲಾಗಿದೆ' ಎಂದರು.

ಕಾಣೆಯಾದ ಮೀನುಗಾರ ಕುಟುಂಬದ 28 ಲಕ್ಷ ರೂ. ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ವಿಶೇಷವಾಗಿ ಕಾಳಜಿ ತೋರಿದ್ದರು. ಈ ಕುರಿತಂತೆ ಯಾವ ಸ್ಥಿತಿಗತಿ ಇದೆ ಎಂಬುದನ್ನು ವರದಿ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ತಿಳಿಸಿದರು.

A Letter To The Center To Lift The Remains Of a Boat: Minister Poojary

'12 ನಾಟಿಕಲ್ ಮೈಲು ದಾಟಿ ಕರ್ನಾಟಕ ಗಡಿಯಲ್ಲಿ ಮೀನುಗಾರಿಕೆಗೆ ಬರುವ ಗೋವಾ ಸೇರಿದಂತೆ ಇತರ ಮೀನುಗಾರರ ಚಟುವಟಿಕೆಯನ್ನು ನಿಯಂತ್ರಿಸಬೇಕು. ನಮ್ಮ ಮೀನುಗಾರರಿಗೆ ಲೈಟ್ ಫಿಶಿಂಗ್ ನಿರ್ಬಂಧಿಸಿ, ನೆರೆ ರಾಜ್ಯದವರು ಅದನ್ನು ನಡೆಸುವುದರಿಂದ ನಮ್ಮ ಮೀನುಗಾರರಿಗೆ ಅನ್ಯಾಯವಾಗಲಿದೆ. ಅಲ್ಲದೇ, ಮೀನಿನ ಸಂತತಿ ನಾಶವಾಗಿ ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು' ಎಂದು ಸೂಚಿಸಿದರು.

ಮೀನುಗಾರಿಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ತಮ್ಮ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದ ಅವರು, ಮೀನುಗಾರರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಂತೆ ಸೂಚಿಸಿದರು.

ಸಭೆಯಲ್ಲಿ ಕಾರವಾರ ಶಾಸಕಿ ರೂಪಾಲಿ ಎಸ್.ನಾಯ್ಕ್, ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್ ಕೆ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜ್, ಬಂದರು ಅಧಿಕಾರಿ ಕ್ಯಾಪ್ಟನ್ ಸಿ.ಸ್ವಾಮಿ, ಮುಜರಾಯಿ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+