ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಟ್ಕಳದ ಜೊತೆ ಕುಮಟಾಕ್ಕೂ ಕೊರೊನಾಘಾತ: ಉತ್ತರ ಕನ್ನಡದಲ್ಲಿ ಎರಡು ಹೊಸ ಪ್ರಕರಣ

|
Google Oneindia Kannada News

ಕಾರವಾರ, ಮೇ 13: ಕುಮಟಾ ಮೂಲದ ಓರ್ವ ಹಾಗೂ ಭಟ್ಕಳದ ಮಗುವಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇಂದು ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದಾಗಿ ರಾಜ್ಯ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಮೇ 5ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ವಾಪಸ್ಸಾಗಿದ್ದ ಕುಮಟಾ ಮೂಲದ 26 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಈತ ತಪಾಸಣೆಗೆ ಒಳಗಾಗಿ ನೇರವಾಗಿ ಬಂದು ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್ ನಲ್ಲಿ ತೆರೆಯಲಾಗಿದ್ದ ಸರ್ಕಾರಿ ಕ್ವಾರಂಟೈನ್ ‌ನಲ್ಲಿದ್ದ. ವ್ಯಕ್ತಿಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.

ಅಮೆರಿಕಾ ಶ್ವೇತಭವನದಲ್ಲಿ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್! ಅಮೆರಿಕಾ ಶ್ವೇತಭವನದಲ್ಲಿ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್!

ಈತ ಕ್ವಾರಂಟೈನ್ ‌ನಲ್ಲಿದ್ದವರೊಂದಿಗೂ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಇದೀಗ ಅವನೊಂದಿಗೆ ಕ್ವಾರಂಟೈನ್ ಆದವರಲ್ಲೂ ಆತಂಕ ಹೆಚ್ಚಾಗಿದೆ. ಈತನೊಂದಿಗೆ ಕ್ವಾರಂಟೈನ್ ನಲ್ಲಿದ್ದ ಇನ್ನು ಕೆಲವರು ತಮ್ಮ ಕ್ವಾರಂಟೈನ್ ಅವಧಿ ಮುಗಿಸಿ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದರು. ಇದರ ಜೊತೆಗೆ, ಭಟ್ಕಳದ ಎರಡು ವರ್ಷದ ಮಗುವಿಗೂ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತ ತಾಯಿಯೊಂದಿಗೆ ಸಂಪರ್ಕದಲ್ಲಿದ್ದ ಕಾರಣ ಮಗುವಿನಲ್ಲೂ ಸೋಂಕು ದೃಢಪಟ್ಟಿದೆ.

Two Corona Cases In Bhatkal Kumata Reported In Uttara Kannada District

ಆ ಮೂಲಕ ಜಿಲ್ಲೆಯ ಸಕ್ರಿಯ ಸೋಂಕಿತರ ಸಂಖ್ಯೆ ಈಗ 30ಕ್ಕೆ ಏರಿದೆ. 11 ಮಂದಿ ಗುಣಮುಖರಾಗಿದ್ದು, ಒಟ್ಟು 41 ಸೋಂಕಿತರು ಜಿಲ್ಲೆಯಲ್ಲಿದ್ದಂತಾಗಿದೆ. ಈ ಪೈಕಿ 40 ಮಂದಿ ಕೂಡ ಭಟ್ಕಳ ಮೂಲದವರಾಗಿದ್ದಾರೆ.

English summary
Two coronavirus cases reported in uttara kannada district today. one person from kumata and one baby from Bhatkal reported coronavirus in Uttara Kannada District,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X