ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮೃಗಾಲಯಗಳು ಜೂನ್ 8 ರಿಂದ ಪುನರಾರಂಭ

|
Google Oneindia Kannada News

ಬೆಂಗಳೂರು, ಜೂನ್ 4: ದೇಶಾದ್ಯಂತ ಕರೊನಾ ವೈರಸ್ ದಾಳಿ ಇಟ್ಟ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೂಡ ಮೃಗಾಲಯಗಳನ್ನು ಮುಚ್ಚಲಾಗಿತ್ತು.

Recommended Video

ವಿರಾಟ್ ತಮ್ಮ ನಾಯಕತ್ವದ ಬೆಳವಣಿಗೆಗೆ ಕಾರಣ ಯಾರು ಅಂತಾ ಹೇಳಿದ್ದಾರೆ ನೋಡಿ | Virat Kohli | Oneindia Kannada

ಜೂನ್ 8 ರಿಂದ ಮೃಗಾಲಯಗಳು ಪುನರಾರಂಭಗೊಳ್ಳಲಿವೆ. ಜೂನ್.8ರಿಂದ ಮೃಗಾಲಯಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ ಯಾವುದಕ್ಕೆ ಅನುಮತಿ ನೀಡಲಾಗಿದೆ, ಯಾವುದಕ್ಕೆ ಇಲ್ಲ ಎಂಬುದನ್ನು ತಿಳಿಸಲಾಗುತ್ತದೆ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಲಾಹೋರ್‌ ಮೃಗಾಲಯದ ಸಿಬ್ಬಂದಿ ಹಾಗೂ ಪ್ರಾಣಿಗಳಿಗೆ ಕೊರೊನಾ ಪರೀಕ್ಷೆ ಲಾಹೋರ್‌ ಮೃಗಾಲಯದ ಸಿಬ್ಬಂದಿ ಹಾಗೂ ಪ್ರಾಣಿಗಳಿಗೆ ಕೊರೊನಾ ಪರೀಕ್ಷೆ

ಮೃಗಾಲಯಗಳನ್ನು ತೆರೆಯಲು ಸರ್ಕಾರ ಹಾಗೂ ಕರ್ನಾಟಕದ ಮೃಗಾಲಯ ಪ್ರಾಧಿಕಾರ ಚಿಂತನೆ ನಡೆಸುತ್ತಿದ್ದು, ಈ ಕುರಿತು ಶೀಘ್ರದಲ್ಲಿಯೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿವೆ.

ಮೈಸೂರು ಮೃಗಾಲಯ ಓಪನ್ ಯಾವಾಗ?

ಮೈಸೂರು ಮೃಗಾಲಯ ಓಪನ್ ಯಾವಾಗ?

ಈ ಮೊದಲೇ ಪುನರಾರಂಭಿಸುವುದಾಗಿ ಮೈಸೂರು ಮೃಗಾಲಯ ತಿಳಿಸಿದ್ದು, ನಿಯಂತ್ರಿತ ಜನರಿಗಷ್ಟೇ ಮೃಗಾಲಯ ಪ್ರವೇಶಕ್ಕೆ ಅನುಮತಿ ನೀಡಲಿದ್ದು, ಭೇಟಿಗೆ ಬರುವ ಜನರ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಬನ್ನೇರುಘಟ್ಟ ಉದ್ಯಾನ ಹೇಳಿಕೆ ನೀಡಿಲ್ಲ

ಬನ್ನೇರುಘಟ್ಟ ಉದ್ಯಾನ ಹೇಳಿಕೆ ನೀಡಿಲ್ಲ

ಆದರೆ, ಈ ಬಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮಾತ್ರ ಯಾವುದೇ ರೀತಿಯ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಉದ್ಯಾನವನ ತೆರೆಯಲು ನಾವು ಸಿದ್ಧರಿದ್ದೇವೆ. ಆದರೆ ಆನ್'ಲೈನ್ ಮೂಲಕವಷ್ಟೇ ಟಿಕೆಟ್ ವಿತರಿಸಲಾಗುತ್ತದೆ.

ಮಾರ್ಗಸೂಚಿ ಶೀಘ್ರ ಬಿಡುಗಡೆ

ಮಾರ್ಗಸೂಚಿ ಶೀಘ್ರ ಬಿಡುಗಡೆ

ಶೀಘ್ರದಲ್ಲೇ ಮೃಗಾಲಯ ತೆರೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ಸಫಾರಿಗೆ ಅವಕಾಶ ನೀಡುವುದಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನುಸಾರ ನಿಯಮ ರೂಪಿಸಲಾಗುತ್ತದೆ. ಮುಂದಿನ ಆದೇಶದವರೆಗೂ ಅರಣ್ಯ ಪ್ರದೇಶಗಳಿಗೆ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅವರು ಹೇಳಿದ್ದಾರೆ.

ಗ್ರೂಪ್ ಬುಕಿಂಗ್ ಇಲ್ಲ

ಗ್ರೂಪ್ ಬುಕಿಂಗ್ ಇಲ್ಲ

ಕುಟುಂಬ ಸಮೇತರಾಗಿ ಬರುವವರನ್ನೂ ಕೂಡ ಗುಂಪುಗಳೆಂದೇ ಪರಿಗಣಿಸಲಾಗುತ್ತದೆ. ಜೀಪ್ ಗಳಲ್ಲಿಯೂ ಜನರ ಸಂಖ್ಯೆಯನ್ನು ಇಳಿಕೆ ಮಾಡಲಾಗುತ್ತದೆ ಎಂದಿದೆ. ಎಸಿ ಸಫಾರಿ ಬಸ್ ಗಳ ಸಂಚಾರ ಇರುವುದಿಲ್ಲ. ಸಫಾರಿಗೆ ತೆರಳುವ ಜನರ ಸಂಖ್ಯೆಯನ್ನು ನಿಯಂತ್ರಿಸಲಾಗುತ್ತದೆ.

English summary
The zoos which have been shut for more than two months now, will open from June 8 In Karnataka .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X